ಇಂದು ಪವಾಡ ಪುರುಷ ಹಜರತ್ ಸಯ್ಯದ್ ರಹೀಮ್ ಹುಸೈನಿ ವಲಿ ಅವರ ಊರುಸ್

Get real time updates directly on you device, subscribe now.

ಯಲಬುರ್ಗಾ : ತಾಲ್ಲೂಕ ಕೇಂದ್ರದಿಂದ ಕೇವಲ ಏಳು ಕಿ.ಮೀ ಅಂತರದಲ್ಲಿರುವ ಮುಧೋಳ ಗ್ರಾಮದಲ್ಲಿ ವಿವಿಧ ರೀತಿಯ ದೇವಾಲಯಗಳ, ಶೀಲಾ ಶಾಸನ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿರುವ. ಪ್ರಾಚೀನ ಕಾಲದಲ್ಲಿ ಅನೇಕ ವಿದ್ಯಾಕೇಂದ್ರಗಳನ್ನು ಹೊಂದಿದ್ದ ಅಗ್ರಹಾರ ಎಂದೇ ಕರೆಸಿಕೊಂಡಿದ್ದ, ಈ ಮುಧೋಳ ಗ್ರಾಮವು ಈಗ ತಿರುಳನ್ನಡ ನಾಡಿನ ಹೃದಯ ಭಾಗದಂತಿರುವ ಹಿಂದೆ ಮುದುವೊಳಲು ಎಂಬ ಗ್ರಾಮ ಈಗ ಮುಧೋಳ ಗ್ರಾಮ ಎಂದು ಸುದೀರ್ಘ ಇತಿಹಾಸವನ್ನು ಹೊಂದಿದೆ.
ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಸಹೋದರರಂತೆ ಭಾವೈಕ್ಯತೆಯಿಂದ ಕೂಡಿದ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸಮಾಜದವರೆಲ್ಲರೂ ಸೇರಿ ಕೊಂಡು ಹಜರತ್ ಸಯ್ಯದ್ ರಹೀಮ್ ಹುಸೈನಿ ವಲಿಅವರು
ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಪವಾಡ ಪುರುಷರಾದ ಹಜರತ್ ಸಯ್ಯದ್ ರಹೀಮ್ ಹುಸೈನಿ ವಲಿ ಅವರ ದರ್ಗಾದ ಉರುಸ್ ಮಾ.29ರಂದು ಗಂಧ, 30ಕ್ಕೆ ಉರುಸ್, 31ಕ್ಕೆ ಜಿಯಾರತ್‌ ಕಾರ್ಯಕ್ರಮ ನಡೆಯಲಿದೆ.
ಈ ಗ್ರಾಮದಲ್ಲಿ ನೆಲಸಿ ಸರಿ ಸುಮಾರು 800 ವರ್ಷಗಳಷ್ಟು ಹಳೆಯದಾದ ದರ್ಗಾವಿದು.
ಭಾರತೀಯ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿರುವ ಒಂದು ಪ್ರಮುಖ ದರ್ಗಾವಾಗಿದೆ. ಈ ದರ್ಗಾದ ಜಾಗವು 30 ಅಡಿ ಅಗಲ 25 ಅಡಿ ಉದ್ದವನ್ನು ಹೊಂದಿರುತ್ತದೆ ಇದರ ಸುತ್ತಲೂ 25 ಅಡಿ ಅಷ್ಟು ನಾಲ್ಕು ಮಿನಾರ್‌ಳಿವೆ ಈ ಮೀನಾರಗಳ ನಡುವೆ ಇರುವ ಒಂದು ಗುಮ್ಮಟಾಕಾರದ ಆಕೃತಿಯನ್ನು ಹೊಂದಿದೆ ದರ್ಗಾದ ಮುಖ್ಯದ್ವಾರ ದಕ್ಷಿಣ ದಿಕ್ಕಿಗಿದೆ ಹಜರತ್ ಸಯ್ಯದ್ ರಹೀಮ್ ಹುಸೈನಿ ವಲಿ ಅವರ ಸಮಾದಿಯು ಉತ್ತರ-ದಕ್ಷಿಣ ವಾಗಿದೆ ಇವರ ಸಮಾಧಿಯ ಸುತ್ತಲೂ ಕಬ್ಬಿಣದ ಕಟಾಂಜನವನ್ನು ಹಾಕಲಾಗಿದೆ.
ಈ ದರ್ಗಾದ ಒಳಗಡೆ ಉತ್ತರದಿಕ್ಕಿನಲ್ಲಿ ವಿಶೇಷವಾಗಿ ಒಂದು ದ್ವೀಪದ ಸ್ತಂಭವನ್ನು ಕಾಣಬಹುದು ಈ ದೀಪದ ಸ್ತಂಭ ಮಿನಾರುಗಳ ಆಕೃತಿಯಲ್ಲಿ ನೋಡಬಹುದು. ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀ ಮ್ ಹುಸೇನಿಯವರ ಪವಾಡಗಳು : ಹಲವು ವರ್ಷಗಳ ಹಿಂದೆ ನಡೆದಂತಹ ಪವಾಡಗಳಿಂದರೆ ರಹಿಮಾನ್ ಸಾಬ್ ಹಿರೇಮನಿ ಅವರ ಕಾಲಿಗೆ ಒಂದು ಗಡ್ಡೆ ರೀತಿಯ ರೋಗವಿತ್ತು ಆ ರೋಗ ಇದ್ದ ಕಾರಣ ಅವರು ಅಲ್ಲಿರುವ ಹಜರತ್ ಸಯ್ಯದ್ ರಹೀಮ್ ಹುಸೈನಿ ವಲಿ ದರ್ಗಾದ ಕಮಿಟಿಯವರು ಪ್ರವೇಶ ಮಾಡಿಸಿ ದರ್ಗಾದ ಗದ್ದಿಗೆ ಹತ್ತಿರ ಕೂರಿಸಿದರು ಮೂರು ದಿನಗಳ ಕಾಲ ದೀಪವನ್ನು ಕಾಯಬೇಕು ಎಂದು ಹೇಳಿ ಹೋದರು.
ನಂತರ ಗುಣಮುಖರಾಗಿ ತಮ್ಮ ಮನೆಗೆ ತೆರಳಿದರು, ಈ ಧರ್ಮವು ಒಂದು ದಾರಿ ದೀಪವಾಗಿದೆ ನಾವು ಮಾನವನನ್ನು ಅಲ್ಲಿರುವ ದುಷ್ಟತನವನ್ನು ಹೋಗಲಾಡಿಸುವುದು ಉದ್ದೇಶವಾಗಿರುತ್ತದೆ ಎಲ್ಲಿ ಬಹಳ ಸಮಸ್ಯೆ ಇರುತ್ತದೆಯೋ ಅಲ್ಲಿ ಸೂಫಿ ಸಂತರು ಬಂದು ನೆಲೆಸಿರುತ್ತಾರೆ,
ಇವರು ಮೂಲತಹ : ದೆಹಲಿ ಯಿಂದ ಬಂದವರಾಗಿದ್ದು ಹಜರತ್ ಸಯ್ಯದ್ ರಹೀಮ್ ಹುಸೈನಿ ವಲಿ ಅವರು ಕೊಪ್ಪಳದಲ್ಲಿರುವ ಸದರ ಶಾವಲಿ ಅವರ ಸಂಬಂಧಿಕರಾಗಿದ್ದಾರು, ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀಮ್ ಹುಸೇನಿಯವರ ಮಗಳನ್ನು ಸದರ ಶಾವಲಿ ಯವರು ಮದುವೆಯಾಗಿದ್ದರು, ಯಾವುದೇ ಒಬ್ಬ ಸೂಫಿ ಸಂತರು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಹೋಗಬೇಕಾದರೆ ಹಲವಾರು ಕಾರಣಗಳಿರುತ್ತವೆ. ಇವರ ಪ್ರೀತಿ-ವಿಶ್ವಾಸವಾಗಿ ಇವರು ನೆಲೆಸಿದ ಜಾಗದಲ್ಲಿ ಯಾವುದೇ ರೋಗ ರುಜಿನಗಳು ಹೋಗಲಾಡಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಮುಧೋಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅನೇಕ ಪವಾಡಗಳು ನಡೆದಿವೆ ಒಂದು ಮಾರಕ ರೋಗ ಬಂದಾಗ ಇಡೀ ಮುಧೋಳ ಗ್ರಾಮದಲ್ಲಿರುವ ಜನರಿಗೆ ಇದರ ಪರಿಣಾಮ ಬೀರುತ್ತದೆ. ಆದರೆ ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀಂ ಹುಸೇನಿಯವರು ಈ ಮುಧೋಳ ಗ್ರಾಮಕ್ಕೆ ಬಂದು ನೆಲೆಸಿದ ನಂತರ ಯಾವುದೇ ರೀತಿಯ ರೋಗ ರುಜಿನಗಳು ಕೂಡ ಕಂಡು ಬಂದಿಲ್ಲ,
ಈ ದರ್ಗಾದ ಎದುರಿಗೆ ಒಂದು ಮುಸ್ಲಿಂ ಸಮಾಜದ ಹಿರಿಯರು ಹಳೆಯ ಹುಣುಸೆ ಮರವನ್ನು ಬೆಳೆಸಿದ್ದರು ಸರಿ ಸುಮಾರು 600 ವರ್ಷಗಳ ಕಾಲ ಬೆಳೆದು ಮುಧೋಳ ಗ್ರಾಮದವರೆಲ್ಲರಿಗೂ ಇದು ಬಂಗಾರದ ಮರವಾಗಿತ್ತು ಆದರೆ ಅಲ್ಲಿ ಗ್ರಾಮದ ಯಾರೋ ಒಬ್ಬ ಯುವಕ ಆ ಮರವನ್ನು ಹೇರಿ ಹುಣುಸೆ ಹಣ್ಣನ್ನು ಕೀಳಲ್ಲೂ ಹೇರಿದ ಸಮಾಜದ ಹಿರಿಯರು ಮರವನ್ನು ಹತ್ತಬೇಡ ಎಂದು ಹೇಳಿದರೆ ಅವನು ಕೇಳಲಿಲ್ಲ ಯಾರನ್ನೂ ಕೇಳದೆ ಮರವನ್ನ ಏರಿ ಹುಣಸೆಹಣ್ಣನ್ನು ಕಿತ್ತ ತಕ್ಷಣ ಆಗ ಅವನಿಗೆ ಎರಡು ಕಣ್ಣಿನ ದೃಷ್ಟಿ ಹೋಯಿತು, ನಂತರ ತನ್ನ ತಪ್ಪಿನ ಅರಿವಾಗಿ ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀಮ್ ಹುಸೇನಿಯವರ ಗದ್ದುಗೆಗೆ ಬಂದು ಕಣ್ಣೀರಿಡುತ್ತಾ ಕ್ಷಮೆಯಾಚನೆ ಬೇಡಿಕೊಂಡನು ನಂತರ ತನ್ನ ಎರಡು ಕಣ್ಣಿನ ದೃಷ್ಟಿ ಬಂದಿತ್ತು ಇದು ಇವರ ಅದ್ಭುತ ಪವಾಡಗಳು ಭಕ್ತರಿಗೆ ಅದೃಶ್ಯವಾಗಿದೆ.

ಈ ದರ್ಗಾದ ಗಂದಾಭಿಷೇಕ ಮತ್ತು ಉರುಸಿನ ಕಾರ್ಯಕ್ರಮ : ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀಮ್ ಹುಸೇನಿಯವರ ದರ್ಗಾಕ್ಕೆ ಜನಾಬ್ ಮನ್ಸೂರಲಿ ಇಲಕಲ್ಲ ಇವರ ಮನೆಯಿಂದ ಗಂಧದ ಮೆರವಣಿಗೆ ರಾತ್ರಿ ಆರಂಭದಿಂದ ಪ್ರಾರಂಭವಾಗಿ ಈ ಗಂಧದ ಮೆರವಣಿಗೆಯಲ್ಲಿ ಗುಲಾಬಿ ಹೂವಿನ ನೀರು ಮತ್ತು ಮಲ್ಲಿಗೆ ಹೂವನ್ನು ತೆಗೆದುಕೊಂಡು ಪ್ರಮುಖ ಬೀದಿಯಿಂದ ಮೆರವಣಿಗೆ ಮೂಲಕ ಸಡಗರ ಸಂಭ್ರಮದಿಂದ ದರ್ಗಾಕ್ಕೆ ಬರುವರು ಮೆರವಣಿಗೆಯಲ್ಲಿ ತೆಗೆದುಕೊಂಡು ಬಂದಂತಹ ಗಂಧವನ್ನು ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀಮ್ ಹುಸೇನಿಯವರ ಗದ್ದಿಗೆಗೆ ಹಚ್ಚುತ್ತಾರೆ ಮತ್ತು ಗುಲಾಬಿ ಹೂವಿನ ನೀರನ್ನು ಬಳಸುತ್ತಾರೆ ನಂತರ ಹೂವಿನ ಹಾರವನ್ನು ಹಾಕಿ ತಂದಂತಹ ಹೊಸ ಬಟ್ಟೆ ಗಲೀಫ್ ಚಾದರ್ ಹಾಕುತ್ತಾರೆ ಮೂರು ದಿನಗಳ ಕಾಲ ಉರುಸಿನ ಕಾರ್ಯಕ್ರಮವನ್ನು ಮಾಡುತ್ತಾರೆ ಮುಧೋಳ ಗ್ರಾಮದ ಸಮಸ್ತ ಹಿಂದೂ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಭಾವೈಕ್ಯತೆಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಮಾಡಿರುತ್ತಾರೆ ಹಜರತ್ ಖಾಜಾ ಸೈಯದ್ ಷಾ ಅಬ್ದುಲ್ ರಹೀಮ್ ಹು ಸೇನಿಯವರ ಇವರ ಮರುದಿನ ಊರುಸಿನ ಕಾ ರ್ಯಕ್ರಮ ಮುಗಿದ ನಂತರ ರಾತ್ರಿ ರಿವಾಯಿತಿ ಪದಗಳು ಮತ್ತು ಕವಾಲಿ ಪದಗಳನ್ನು ಹಾಡುತ್ತಾರೆ ಉರುಸಿನ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮದ ಅವರೆಲ್ಲರೂ ಸೇರಿ ಕೃಪೆಗೆ ಪಾತ್ರರಾಗಿರುತ್ತಾರೆ.

ಪವಾಡ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ಸಯ್ಯದ್ ಹಿರೇಮನಿ (ಚೇರ್ಮನರ್) ಅವರು ಕಳೆದ ತಿಂಗಳ ಹಿಂದೆ ಬೆನ್ನು ನೋವಿನಿಂದ ಹಾಸಿಗೆ ಇಡಿದಿದ್ದರು ಪಟ್ಟಣದ ವೈದ್ಯಧಿಕಾರಿಗಳು 24 ಗಂಟೆ ಮಾತ್ರ ಬದುಕುತ್ತಾರೆ ಎಂದು ತಿಳಿಸಿದರು, ನಂತರ ಮುಸ್ಲಿಂ ಸಮಾಜದವರೆಲ್ಲರೂ ಸೇರಿಕೊಂಡು ಮನೆಗೆ ಕರೆದುಕೊಂಡು ಬಂದು ದರ್ಗಾದ ಹಜರತ್ ಸಯ್ಯದ್ ರಹೀಮ್ ಹುಸೈನ್ ವಲಿ ಅವರ ಗದ್ದುಗೆ ಅತ್ತಿರ ಮಲಗಿಸಿ ಶುಕ್ರವಾರ ದಿವಸ ಮದ್ಯಾಹ್ನ ನಮಾಜ್ ಟೈಮಲ್ಲಿ ಮುಸ್ಲಿಂ ಸಮಾಜದವರೆಲ್ಲರೂ ಪಾತೆಹ ( ಬೇಡಿ ಕೊಂಡರು ) ಮಾಡಿದರು, ಪ್ರಜ್ಞ ಬಂದಿತು ಸಮಾಜದವರೆಲ್ಲರೂ ಮುಗುಳ್ನಗೆಯಿಂದ ಸಂತೋಷವಾಗಿದ್ದರು,

Get real time updates directly on you device, subscribe now.

Comments are closed.

error: Content is protected !!
%d bloggers like this: