ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 28 ,29, 30ರಂದು ಸಿಎಂ ಸಿದ್ದರಾಮಯ್ಯ ಪ್ರಚಾರ: ಬಯ್ಯಾಪುರ

0

Get real time updates directly on you device, subscribe now.

ಕೊಪ್ಪಳ: ಏಪ್ರಿಲ್ 28 ರಿಂದ 30 ರವರೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಮತಯಾಚನೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯ ಪ್ರಯುಕ್ತ ಇದೇ ತಿಂಗಳು 28ರಂದು ಸಿಂಧನೂರು,29 ರಂದು ಕುಷ್ಟಗಿ ಹಾಗೂ 30 ರಂದು ಗಂಗಾವತಿಯಲ್ಲಿ ನಮ್ಮ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಅವರ ಪರವಾಗಿ ಮತಯಾಚಿಸಲಿದ್ದಾರೆ ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಒಳ್ಳೆಯ ಜನಾಭಿಪ್ರಾಯ ಇದ್ದು ನಿಶ್ಚಿತವಾಗಿ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಶೀಲರಾಗಲಿದ್ದಾರೆ. ಗಂಗಾವತಿಯಲ್ಲಿ ಈಗ ಅಂಥ ಸಮಸ್ಯೆ ಇಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಎಲ್ಲರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಸಚಿವ ಶಿವರಾಜ ತಂಗಡಗಿಯವರು ಶಾಸಕ ಜನಾರ್ದನರೆಡ್ಡಿ ವಿಷಯವಾಗಿ ಬೆತ್ತಲೆ ಮಾಡುತ್ತೇನೆ ಎಂಬ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ತಂಗಡಗಿಯವರು ರಡ್ಡಿಯವರ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂಬರ್ಥದಲ್ಲಿ ಮಾತನಾಡಿದ್ದು. ಬೆತ್ತಲೆ ಎಂದರೆ ಬಟ್ಟೆ ಇಲ್ಲದ್ದು ಎಂದು ಅರ್ಥ ಕಲ್ಪಿಸುವುದು ಬೇಡ. ತಾವು ಎಂದೂ ಜಾತಿ ರಾಜಕರಣ ಮಾಡಿದವನಲ್ಲ. ಹಾಗೆ ಲೆಕ್ಕ ಹಾಕಿದರೆ ತಮ್ಮ ಕ್ಷೇತ್ತದಲ್ಲಿ ತಮ್ಮ ಜಾತಿಗೆ ಸೇರಿದವರು ಕೇವಲ ಐದಾರು ಸಾವಿರ ಜನ ಮಾತ್ರ. ಜಾತಿ ರಾಜಕಾರಣ ಮಾಡುವವನೇ ಆಗಿದ್ದರೆ ಎರಡು ಸಲ ಗೆಲ್ಲುತ್ತಿರಲಿಲ್ಲ. ಹಾಗೊಮ್ಮೆ ತಮ್ಮ ಜಾತಿಯವರ ಸಂಖ್ಯೆಯೇ ಅಧಿಕವಾಗಿದ್ದರೆ ಒಮ್ಮೆಯೂ ಸೋಲುತ್ತಿರಲಿಲ್ಲ ಎಂದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕುರಿತು ಚಿತ್ರನಟಿ ಶ್ರುತಿಯವರು ಓರ್ವ ಮಹಿಳೆಯಾಗಿ ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಬಿಜೆಪಿಯ ಶ್ರುತಿ ಹೇಳಿಕೆಯನ್ನು ಖಂಡಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಲೋಕಸಭಾ ಚುನಾವಣೆಯ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸುತ್ತೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೂಡ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಐದು ವರ್ಷಗಳ ಕಾಲ ನಿಲ್ಲಿಸಲ್ಲ. ಮುಂದಿನ ಅವಧಿಗೂ ಇದನ್ನು ವಿಸ್ತರಿಸುತ್ತೇವೆ. ರಾಜ್ಯದಲ್ಲಿ ಮುಂದೆ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮದು ನುಡಿದಂತೆ ನಡೆಯುವ ಸರ್ಕಾರ ಆಗಿದೆ.ರಾಜ್ಯದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಯಾವ ರೀತಿಯಲ್ಲಿ ಜಾರಿ ಮಾಡಿದ್ದೆವೋ ಅದೇ ರೀತಿಯಲ್ಲಿ ಕೇಂದ್ರದಲ್ಲಿ ಕೂಡ ಹೀಗಾಗಲೇ ನಮ್ಮ ನಾಯಕರು ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಖಂಡಿತವಾಗಿ ಇಂಡಿಯಾ ನೇತೃತ್ವದ ಮೈತ್ರಿ ಕೂಟ ಆಡಳಿತಕ್ಕೆ ಬರಲಿದೆ. ನಿಶ್ಚಿತವಾಗಿ ಕೇಂದ್ರದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್ ಮುಖಂಡರಾದ ಅಮರೇಶ ಕರಡಿ, ಭರಮಪ್ಪ ಹಟ್ಟಿ,ಗೂಳಪ್ಪ ಹಲಿಗೇರಿ,ಕೃಷ್ಣ ಇಟ್ಟಂಗಿ, ಕುರ್ಗೋಡ್ ರವಿ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: