ಗ್ಯಾರಂಟಿ ಸ್ಕೀಂ ಪ್ರತಿ ಮನೆಗೂ ತಲುಪುತ್ತಿವೆ : ಜ್ಯೋತಿ ಸಂತಸ

Get real time updates directly on you device, subscribe now.

ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಸ್ಕೀಂಗಳು ಬಡ ಮತ್ತು ಮಧ್ಯಮ ವರ್ಗದ ಪ್ರತಿ ಮನೆಗೂ ತಲುಪುತ್ತಿರುವದು ಅತ್ಯಂತ ಸಂತಸ ತಂದಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ಯಾರಂಟಿ ಪ್ರಾಧಿಕಾರ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಖುಷಿ ವ್ಯಕ್ತಪಡಿಸಿದ್ದಾರೆ.
ಅವರು ನಗರಸಭೆ ೨ನೇ ವಾರ್ಡಿನಲ್ಲಿ ಕಾಂಗ್ರೆಸ್ ಬಡಜನರಿಗಾಗಿ ಮಾಡಿರುವ ಅನ್ನಭಾಗ್ಯ, ಯುವನಿಧಿ, ಗೃಹಭಾಗ್ಯ, ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಹಮ್ಮಿಕೊಂಡಿರುವ ಮನೆ ಮನೆ ಭೇಟಿ ವೇಳೆ ಕಂಡುಬಂದ ಮಾಹಿತಿ ಹಂಚಿಕೊಂಡು ಸಂತಸಪಟ್ಟರು.
ಐದು ಗ್ಯಾರಂಟಿಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಅವಿರತ ಶ್ರಮ ಮತ್ತು ಜನರ ಆಸಕ್ತಿಯಿಂದಾಗಿ ಯೋಜನೆ ಅನುಷ್ಠಾನ ಉತ್ತಮವಾಗಿದೆ.ಗ್ಯಾರಂಟಿ ಸ್ಕೀಂ ಎಲ್ಲಾ ಯೋಜನೆಯ ಹಣ ಡಿಬಿಟಿ ಮೂಲಕ ನೇರ ವರ್ಗಾವಣೆ ಆಗುತ್ತವೆ, ಇಲ್ಲಿ ಯಾರೂ ಮೋಸ ಮಾಡಲು ಸಾಧ್ಯವಿಲ್ಲ, ಪ್ರತಿ ಯೋಜನೆಗೆ ನಿರ್ಧಿಷ್ಟವಾದ ಮಾಪನಗಳನ್ನು ಇಡಬೇಕಾಗುತ್ತದೆ, ಅದರಂತೆ ತಾಲೂಕಿನಲ್ಲಿ ಬಹಳ ಉತ್ತಮ ಕೆಲಸ ಆಗಿದೆ. ಬಿಟ್ಟಿ ಭಾಗ್ಯ ಎಂದು ತೆಗಳುವ ಜನರಿಗೆ ಬಡವರ ಕಷ್ಟ ಅರ್ಥವಾಗುವದಿಲ್ಲ. ಕೆಲಸ ಇಲ್ಲದೇ ಪರದಾಡುವ ಸ್ಥಿತಿ ಇದೆ, ಉದ್ಯೋಗ ನಷ್ಟ ದೇಶದಲ್ಲಿ ಎಂದೆಂದಿಗೂ ಆಗದಷ್ಟಿದೆ. ಬಿಜೆಪಿ ಅವರು ಮನೆಗೆ ಮತ ಕೇಳಲು ಬಂದರೆ ಉದ್ಯೋಗ, ಬೆಲೆ ಏರಿಕೆ ಬಗ್ಗೆ ಕೇಳಿ ಅದು ಬಿಟ್ಟು ಧರ್ಮದ ನಶೆ ಬಗ್ಗೆ ಮಾತನಾಡಿದರೆ ಸರಿಯಾಗಿ ಉತ್ತರಿಸಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅಕ್ಬರ್ ಪಾಶಾ, ಮಾಜಿ ನಗರಸಭೆ ಸದಸ್ಯ ಮಾರುತಿ ಕಾರಟಗಿ, ಮುಖಂಡರುಗಳಾದ ಅಜ್ಜಪ್ಪಸ್ವಾಮಿ, ವಿಜಯಲಕ್ಷ್ಮೀ ಗುಳೇದ, ಸುಮಂಗಲಾ ನಾಯಕ್, ಗ್ಯಾರಂಟಿ ಪ್ರಾಧಿಕಾರ ಸದಸ್ಯರಾದ ಸವಿತಾ ಗೋರಂಟ್ಲಿ, ಪರಶುರಾಮ ಭಜಂತ್ರಿ, ಯುವ ಕಾಂಗ್ರೆಸ್ ಮುಖಂಡ ಲಕ್ಷ್ಮಣ ಮಾದಿನೂರ, ಬಾಳಪ್ಪ ಕೋಳೂರ, ಶರಣು, ಗವಿಸಿದ್ದಪ್ಪ, ಶಂಭು, ವಿನಯ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!