ಸಾಲ್ಮನಿ ಕುಟುಂಬದ ನವ ವಧು ವರರಿಂದ ಮತದಾನ ಜಾಗೃತಿ
ಕೊಪ್ಪಳ:- ಕೊಪ್ಪಳ ನಗರದ ಸಾಲ್ಮನಿ ಕುಟುಂಬದ ವೀರಣ್ಣ ಹಾಗು ಅಕ್ಷತಾ ಇವರ ವಿವಾಹ ಸಮಾರಂಭವು ದಿನಾಂಕ:26-04-2024 ರಂದು ಕೊಪ್ಪಳ ನಗರದ ಹತ್ತಿರ ಇರುವ ಮಳೆಮಲ್ಲೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿತು.
ವಿವಾಹ ಸಮಾಂಭದಲ್ಲಿ ಹಾಜರಿದ್ದ ನವ ವಧು-ವರರು ವೇದಿಕೆಯಲ್ಲಿ ಮೇ-7ರಂದು ಲೋಕಸಭಾ ಚುನಾವಣೆ ಜರುಗಲಿರುವ ಪ್ರಯುಕ್ತ ಕೊಪ್ಪಳ ತಾಲೂಕ ಸ್ವೀಪ್ ಸಮಿತಿಯಿಂದ ನಮ್ಮ ಮತ, ನಮ್ಮ ಹಕ್ಕು ಪೋಸ್ಟರ್ ಗಳ ಮೂಲಕ ನವ ವಧು-ವರರು ಮತದಾನ ಜಾಗೃತಿ ಮೂಡಿಸಿದ್ದು ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಖುಷಿ ನೀಡಿತು.
ಕಾರ್ಯಕ್ರಮದಲ್ಲಿ ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹಾಗು ತಂಡ ನವ ವಧು ವರರಿಗೆ ಅಕ್ಷತೆ ಹಾಕುವದರ ಮೂಲಕ ಶುಭ ಆರೈಸಿದರು. ಕಡ್ಡಾಯವಾಗಿ ಮೇ-7ರಂದು ತಪ್ಪದೇ ಮತ ಚಲಾಯಿಸಿರೆಂದು ಸಸಿಮಠ ಕುಟುಂಬದವರಿಗೆ ಹಾಗು ಹಾಜರಿದ್ದವರಿಗೆ ಕರೆ ನೀಡಿದರು.
ಸೆಲ್ಪಿ ಸ್ಟ್ಯಾಂಡ್ ನಲ್ಲಿ ಪೊಟೊ ತೆಗೆಸಿಕೊಂಡು ವಧು ವರರು:-ತಾಲೂಕ ಪಂಚಾಯತಿ ವತಿಯಿಂದ ಸಿದ್ದಪಡಿಸಲಾದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸೆಲ್ಪಿ ಸ್ಟ್ಯಾಂಡ್ ನಲ್ಲಿ ನವ ವಧು ವರರು ಮತದಾನ ಮಾಡುವ ಕುರಿತು ಪೊಟೊ ತೆಗೆಸಿಕೊಂಡರು.
ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ,ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ಸ್ವೀಪ್ ಸಮಿತಿಯ ಸದಸ್ಯರಾದ ಬಸವರಾಜ ಬಳಿಗಾರ, ವಿರೇಶ್ ಬಡಿಗೇರ, ಪಂಚಾಯತ ಅಭಿವೃದ್ದಿ ಅಧಿಕಾರಿ ಶಿವಕುಮಾರ ಮಳಿಮಠ, ವರನ ತಾಯಿ ಸೋಮಮ್ಮ, ಸಹೋದರರಾದ ಮಂಜುನಾಥ, ಅಣ್ಣಪ್ಪ, ಸಂತೋಷ ಕುಮಾರ ಸಾಲ್ಮನಿ ಕುಟುಂಬದ ಸದಸ್ಯರು ಹಾಜರಿದ್ದರು.
Comments are closed.