ವಿಶ್ವ ವಿಖ್ಯಾತ ಮೈಸೂರ ದಸರಾ ಕವಿಗೋಷ್ಟಿಗೆ ಕವಿ ಮಕಾನದಾರ ಆಯ್ಕೆ.-


ಗದಗ: ದಿನಾಂಕ ೨೧ ದಿಂದ ೩೦ ರವೆರೆಗೆ ಜರುಗಲಿರುವ ವಿಶ್ವ ವಿಖ್ಯಾತ ಮೈಸೂರ ದಸರಾ ಕವಿಗೋಷ್ಟಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರ, ಕವಿ, ಎ.ಎಸ್.ಮಕಾನದಾರ ದಿನಾಂಕ ೨೭ ರಂದು ಜರುಗಲಿರುವ ವಿಖ್ಯಾತ ಕವಿಗೋಷ್ಟಿಗೆ ಆಯ್ಕೆಯಾಗಿದ್ದಾರೆ.

ದಿನಾಂಕ ೨೪ ರಿಂದ ದಿನಾಂಕ ೨೭ ರ ವರೆಗೆ ನಾಲ್ಕು ದಿನಗಳ ಕಾಲ ವಿಕಾಸ ಕವಿಗೋಷ್ಟಿ, ವಿನೋದ ಕವಿಗೋಷ್ಟಿ, ವಿಶಿಷ್ಟ ಕವಿಗೋಷ್ಟಿ, ವಿಖ್ಯಾತ ಕವಿಗೋಷ್ಟಿಗಳು ಜರುಗಲಿವೆ.
ಕವಿ ಮಕಾನದಾರ ಭಾಗ ವಹಿಸಲಿರುವ ವಿಖ್ಯಾತ ಕವಿಗೋಷ್ಟಿಯಲ್ಲಿ ಕನ್ನಡ ಭಾಷೆಯ ಜೊತೆಗೆ ಬ್ಯಾರಿ, ಕೊಡವ, ಉದು೯, ಕೊಂಕಣಿ, ತುಳು ಭಾಷಿಕರ ಕವಿಗಳು ಕವಿಗೋಷ್ಟಿಯಲ್ಲಿ ಕವಿತೆ ವಾಚನ ಮಾಡಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೊ.ಎಸ್.ಜಿ.ಸಿದ್ದರಾಮಯ್ಯ , ಖ್ಯಾತ ಕವಿಗಳಾದ ಜಯಂತ ಕಾಯ್ಕಣಿ, ಕುಲಪತಿ ಡಾ.ಮಲ್ಲಿಕಾ ಘಂಟಿ, ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ. ಬಂಜಗೆರೆ ಜಯಪ್ರಕಾಶ, ಟಿ.ಸಿ.ಪೂಣಿ೯ಮಾ, ಎಂ.ಜಿ.ದೇಶಪಾಂಡೆ, ಜಯಪ್ಪ ಹೊನ್ನಳ್ಳಿ, ಮಹಾಂತಪ್ಪ, ನಂದೂರ, ಮಹ್ಮದ ಬಡ್ಡೂರ ಮುಂತಾದ ಖ್ಯಾತ ನಾಮ ಕವಿಗಳ ಜೊತೆಗೆ ನ್ಯಾಯಾಂಗ ಇಲಾಖೆಯ ಉದ್ಯೋಗಿ ಮಕಾನದಾರ ಗದಗ ಜಿಲ್ಲೆ ಯನ್ನು ಪ್ರತಿನಿಧಿಸಿ ಕವಿತೆ ವಾಚಿಸುತ್ತಿರುವದು ಅಭಿನಂದನೀಯ ಸಂಗತಿ.

Please follow and like us:
error