ನೂರಕ್ಕೂ ಹೆಚ್ಚು ಕಲಾ ಪ್ರಶಸ್ತಿಗಳಿಗೆ ಎಸ್ ವಿ ಸಿ ಶಾಲೆಯ ವಿದ್ಯಾರ್ಥಿಗಳು ಭಾಜನ

ಕುಷ್ಟಗಿ: ಪಟ್ಟಣದ ಎಸ್ ವಿ ಸಿ ಮೆಮೋರಿಯಲ್ ಪಬ್ಲಿಕ್ ಶಾಲೆಯ ( ಸಿಬಿಎಸ್ಇ) ವಿದ್ಯಾರ್ಥಿಗಳು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಹಂತಗಳ ಒಟ್ಟು 122 ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಎಸ್ ವಿ ಸಿ ಸಂಸ್ಥೆಯ ಅಧ್ಯಕ್ಷ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪ್ರಗತಿಪರ ಸೇವಾ ಸಂಸ್ಥೆ ಇತ್ತೀಚೆಗೆ 22ನೇ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು. ಶಾಲೆಯ ಎಲ್ ಕೆ ಜಿ ಹಂತದಿಂದ ಹತ್ತನೇ ತರಗತಿ ಹಂತದ ಒಟ್ಟು 153 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹತ್ತು ವಿದ್ಯಾರ್ಥಿಗಳು ತಾಲೂಕು ಮಟ್ಟದ, 11 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಹಾಗೂ 10 ವಿದ್ಯಾರ್ಥಿಗಳು ರಾಜ್ಯ ಮಟ್ಟದ ‘ಕಲಾ ಪ್ರಬೋಧ’ ಪ್ರಶಸ್ತಿಗಳನ್ನು ಹಾಗೂ ಉಳಿದ 122 ವಿದ್ಯಾರ್ಥಿಗಳು ‘ಕಲಾ ಬೋಧ’
ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಾಲೆಯ ಕಲಾ ಶಿಕ್ಷಕ ಮೊಹಸೇನ್ ನದಾಫ್
ಅವರು ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಅಣಿಗೊಳಿಸಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಸಿ ವಿ ಚಂದ್ರಶೇಖರ, ಸಂಸ್ಥೆಯ ಸಿಇಓ ಡಾ. ಜಗದೀಶ್ ಅಂಗಡಿ, ಪ್ರಾಂಶುಪಾಲ ಮಹದೇವ ಮಧಾಳೆ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.