ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅವರಿಗೆ ಸನ್ಮಾನ

0

Get real time updates directly on you device, subscribe now.

ಕೊಪ್ಪಳ: ಕರ್ನಾಟಕ ಸರ್ಕಾರದ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ ಅವರು ಇಂದು ಕೊಪ್ಪಳ ನಗರದ ಗಡಿಯಾರ ಕಂಬದ ಸಮೀಪದಲ್ಲಿರುವ ಶ್ರೀ ಸಿದ್ದರಾಮೇಶ್ವರ ಸೌಹಾರ್ದ ಸಹಕಾರಿ ಸಂಘ (ರಿ.) ಕೊಪ್ಪಳ ಸಹಕಾರಿ ಬ್ಯಾಂಕ್‌ಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ, ಭೋವಿ ಸಮಾಜದ ಅಭಿವೃದ್ಧಿ, ಸಂಘಟನೆ ಹಾಗೂ ಸಮಾಜದ ವಿವಿಧ ವಿಚಾರಗಳ ಕುರಿತು ಚರ್ಚಿಸಿದರು.ನಂತರ ಶ್ರೀ ಸಿದ್ದರಾಮೇಶ್ವರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನಿಗಮದ ಅಧ್ಯಕ್ಷರಾದ ಎಂ. ರಾಮಪ್ಪ ಅವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಅಧ್ಯಕ್ಷರಾದ ರವಿ ಪೂಜಾರ್, ಕೊಪ್ಪಳ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷರಾದ ಶುಂಕಪ್ಪ ಮಾಲಗಿತ್ತಿ, ತಾಲೂಕು ಅಧ್ಯಕ್ಷರಾದ ಹುಚ್ಚಪ್ಪ ಟನಕಣಕಲ್, ರಾಮಣ್ಣ ಅಳವಂಡಿ, ಲಕ್ಷ್ಮಣ್ಣ ಪೂಜಾರ್, ನಾಗರಾಜ್ ವಿರಾಪುರ್, ಹನುಮಂತಪ್ಪ ಕುಷ್ಟಗಿ, ವೆಂಕಟೇಶ್ ಪೂಜಾರ್, ರಂಗಪ್ಪ ಪೂಜಾರ್ ಭೋವಿ, ಗುರಪ್ಪಣ್ಣ ಭೋವಿ, ಸಮಾಜದ ರಾಜ್ಯ ಸಂಘಟನೆ ಕಾರ್ಯದರ್ಶಿ ರಾಮು ಪೂಜಾರ್, ಹನುಮಂತ ಪೂಜಾರ್ ಸೇರಿದಂತೆ ಶ್ರೀ ಸಿದ್ದರಾಮೇಶ್ವರ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದಲ್ಲದೆ ಭೋವಿ ಸಮಾಜದ ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಮತ್ತು ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!