ತಾಲೂಕು ಕುರುಬರ ಸಂಘ ಹಾಗೂ ತಾಲೂಕು ಆಡಳಿತದಿಂದ ಕನಕದಾಸರ ಜಯಂತ್ಯುತ್ಸವ

0

Get real time updates directly on you device, subscribe now.

ವಿಶ್ವಚೇತನ ಕನಕದಾಸರು ಮಾನವ ಕಲ್ಯಾಣಕ್ಕಾಗಿ ಸರ್ವವನ್ನೂ ತ್ಯಜಿಸಿದ್ದರು.

 

ಗಂಗಾವತಿ: ವಿಶ್ವಚೇತನ ಶ್ರೀ ಕನಕದಾಸರು ಮಾನವರ ಕಲ್ಯಾಣಕ್ಕಾಗಿ ಸರ್ವವನ್ನು ತ್ಯಾಗ ಮಾಡಿ ದಾಸ ಸಾಹಿತ್ಯ ರಚನೆ ಕಾರ್ಯದಲ್ಲಿ ತಲ್ಲಿನ ರಾಗಿದ್ದರು ಎಂದು ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.
ಅವರು ತಾಲೂಕ ಆಡಳಿತ ಮತ್ತು ತಾಲೂಕು ಕನಕದಾಸ ಕುರುಬರ ಸಂಘದ ಆಶ್ರಯದಲ್ಲಿ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಕನಕದಾಸರ ವೃತ್ತದಲ್ಲಿ ಕನಕದಾಸರ 537 ನೇಯ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಸಾಮಂತ ದೊರೆಯಾಗಿ ಶ್ರೀ ಕನಕದಾಸರು ಅತ್ಯುತ್ತಮ ಆಳ್ವಿಕೆಯ ನಡೆಸಿ ಜನರ ಕಲ್ಯಾಣಕ್ಕಾಗಿ ಕೆರೆಗಳನ್ನು ಕಟ್ಟಿಸಿದರು.ದಾಸತ್ವ ಸ್ವೀಕರಿಸಿದ ನಂತರ
ದೇಶವನ್ನು ಸುತ್ತಿ ಜನರಲ್ಲಿ ಮನುಷ್ಯತ್ವ ಮೂಡಿಸಿ ಜಾತಿಯ ದಾರಿದ್ರ್ಯವನ್ನು ಹೋಗಲಾಡಿಸಲು ಶ್ರಮಿಸಿದ್ದರು. ಪ್ರತಿಯೊಬ್ಬರಿಗೂ ಕನಕದಾಸರು ಸ್ಪೂರ್ತಿಯಾಗುತ್ತಾರೆ 21ನೆಯ ಶತಮಾನದಲ್ಲೂ ಜಾತಿ ಆಚರಣೆ ಮಾಡುವ ಕೆಲ ವರ್ಗದವರಿಗೆ ಕುಲ ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆ ಬಲ್ಲಿರಾ ಎಂದು ಪ್ರಶ್ನೆ ಮಾಡುವ ಮೂಲಕ ದಾಸ ಸಾಹಿತ್ಯವನ್ನು ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಪ್ರತಿಯೊಬ್ಬ ಕನ್ನಡಿಗರು ಕಾಗಿನೆಲೆ ಮತ್ತು ಬಾಡ ಗ್ರಾಮಕ್ಕೆ ತೆರಳಿ ಕನಕದಾಸರು ಜೀವಿಸಿದ್ದ ಸ್ಥಳವನ್ನು ನೋಡುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕಿದೆ. ಈ ಎರಡು ಗ್ರಾಮಗಳನ್ನು ಸರಕಾರ ಅಭಿವೃದ್ದಿಪಡಿಸಿದ್ದು ಸಾಹಿತ್ಯ ಕನಕದಾಸರ ಸಾಹಿತ್ಯದ ಪ್ರಚಾರ ಮತ್ತು ವ್ಯಾಪಕವಾದಂತಹ ಕೃತಿಗಳ ಮುದ್ರಣ ಕಾರ್ಯ ಇನ್ನು ನಿರಂತರವಾಗಿ ನಡೆಯಲಿ ಜೊತೆಗೆ ಪ್ರತಿ ಗ್ರಾಮ ಪ್ರತಿ ಮನೆಯಲ್ಲೂ ಕನಕದಾಸರ ಜಯಂತಿ ಉತ್ಸವವನ್ನು ಆಚರಿಸುವಂತೆ ಆಗಲಿ ಎಂದರು.
ಬಸಾಪಟ್ಟಣ ನಂಜುಂಡೇಶ್ವರ ಮಠದ ಸಿದ್ದಯ್ಯ, ಸಿದ್ದರಾಮಯ್ಯ ಗುರುವಿನ ಆನೆಗುಂದಿ ರಾಜಮನೆತನದ ಲಲಿತ ರಾಣಿ ಶ್ರೀರಂಗದೇವರಾಯಲು,ಮಾಜಿ ಶಾಸಕರಾದ ಜಿ ವೀರಪ್ಪ, ನಗರಸಭೆಯ ಅಧ್ಯಕ್ಷ ಮೌಲಸಾಬ, ಉಪಾಧ್ಯಕ್ಷೆ ಪಾರ್ವತಮ್ಮ ದೊಡ್ಡಮನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ತಶಿಲ್ದಾರ್ ಯು. ನಾಗರಾಜ್ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಚೌಡ್ಕಿ, ಸದಸ್ಯರಾದ ವಾಸುದೇವ ನವಲಿ,ನವೀನ್ ಪಾಟೀಲ್, ನೀಲಕಂಠಪ್ಪ ,ಎಫ್. ರಾಘವೇಂದ್ರ ,ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ನೆಕ್ಕಟ್ಟಿ ಸೂರಿ ಬಾಬು, ಮುಖಂಡರಾದ ಮನೋಹರ ಗೌಡ, ತಿಪ್ಪೇರುದ್ರಸ್ವಾಮಿ, ವೀರೇಶ್ ಸುಳೆಕಲ್, ವೀರೇಶ್ ಬಲಕುಂದಿ, ಬಿ. ಶರಣಪ್ಪ, ಬಸವರಾಜ, ದುರ್ಗಪ್ಪ ದಳಪತಿ, ಶೇಖ ನಬಿಸಾಬ್ ,ಭಾರತಿ, ವಿಜಯಲಕ್ಷ್ಮಿ, ನಗರಸಭೆ ಕಾನೂನು ಸಲಹೆಗಾರರಾದ ರಾಜೇಶ್ವರಿ ಸುರೇಶ್, ಹಾಲುಮತ ಕುರುಬ ಸಮಾಜದ ಅಧ್ಯಕ್ಷ ಯಮನಪ್ಪ ವಿಠಲಪೂರ,ಕಾರ್ಯಾಧ್ಯಕ್ಷ ಶರಣೇಗೌಡ ಬಸಾಪಟ್ಟಣ, ನಗರಾಧ್ಯಕ್ಷ ಕೆ .ನಾಗೇಶಪ್ಪ ನಗರಸಭೆಯ ಮಾಜಿ ಅಧ್ಯಕ್ಷ ಕೆ. ವೆಂಕಟೇಶ,ಡ್ಯಾಗಿ ರುದ್ರೇಶ್, ಮಲ್ಲಿಕಾರ್ಜುನ ಜಂತಗಲ್ ,ಯಮನೂರಪ್ಪ, ಹನುಮಂತಪ್ಪ ಹುಲಿಹೈದರ್, ನೀಲಕಂಠಪ್ಪ ಹೊಸಳ್ಳಿ,ಮಂಜುನಾಥ ದೇವರಮನಿ, ಮೋರಿ ದುರ್ಗಪ್ಪ, ನವಲಿ ಯಮನಪ್ಪ, ಸಿಂಗನಾಳ ವೆಂಕಟೇಶ ,ವಿಠಲ್, ರುದ್ರೇಶ್ ಗಂಗಾವತಿ ಪರಶುರಾಮ ಇಟಗಿ, ಬಿ ಫಕೀರಯ್ಯ ,ಢಣಾಪೂರ ಅಯ್ಯಪ್ಪ ,ಎಸ್ .ಟಿ .ಈರಪ್ಪ, ಶಿವ ಬಸವನಗೌಡ, ಶರಣಪ್ಪ ಪೊಲೀಸ್,ಮಲ್ಲೇಶಪ್ಪ ಪೊಲೀಸ್, ಗಿಡ್ಡಿ ಹನುಮಂತಪ್ಪ,ಶೇಖರಗೌಡ, ಸಿದ್ದಲಿಂಗನಗೌಡ, ಮುದುಕಪ್ಪ ಗಡ್ಡಿ, ಅಡ್ಡಿ ಶಾಮಣ್ಣ, ಗೀತಾ ವಿಕ್ರಮ್, ಕೆ ವರಲಕ್ಷ್ಮಿ ,ಜ್ಯೋತಿ
ಸೇರಿ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಸರಕಾರದಿಂದ ನಾಮನಿರ್ದೇಶನಗೊಂಡ ಮತ್ತು ನಿವೃತ್ತಿ ಹೊಂದಿದವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

Get real time updates directly on you device, subscribe now.

Leave A Reply

Your email address will not be published.

error: Content is protected !!