ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಪ್ರವಾಸ

0

Get real time updates directly on you device, subscribe now.

: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಅವರು ನ.18 ಮತ್ತು 19ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಅಧ್ಯಕ್ಷರು ನ.17ರಂದು 10.30ಕ್ಕೆ ಗಂಗಾವತಿಗೆ ಆಗಮಿಸಿ ವಾಸ್ತವ್ಯ ಹೂಡುವರು. ನ.18ರಂದು ಬೆಳಿಗ್ಗೆ 09 ಗಂಟೆಗೆ ಗಂಗಾವತಿ ನಗರದ 31ನೇ ವಾರ್ಡಿಗೆ ತರಳಿ ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಕೌದಿ ಜೋಪಡಿಯಲ್ಲಿ ವಾಸಿಸುತ್ತಿರುವ ಬುಡ್ಗ ಜಂಗಮ, ಸಿಂಧೋಳ್ಳು, ಸಿಳ್ಳೆಕ್ಯಾತ ಹಾಗೂ ಚೆನ್ನದಾಸರ ಹೀಗೆ 150 ಅಲೆಮಾರಿ ಸಮುದಾಯದ ಕುಟುಂಬಗಳ ಸ್ಥಳ ವೀಕ್ಷಣೆ ಮಾಡುವರು. 11ಕ್ಕೆ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಕಾರಟಗಿಯ ರಾಜೀವ್ ಗಾಂಧಿ ನಗರದಲ್ಲಿ ಎಸ್ಸಿ, ಎಸ್ಟಿ ಅಲೆಮಾರಿಗಳು ವಾಸಿಸುವ ಸ್ಥಳ ವೀಕ್ಷಣೆ, ಮಧ್ಯಾಹ್ನ 12 ಗಂಟೆಗೆ ಕಾರಟಗಿ ಮತ್ತು 1 ಗಂಟೆಗೆ ಸಿಂಧನೂರಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಅಲ್ಲಿಂದ 2 ಗಂಟೆಗೆ ಕುಷ್ಟಗಿ ತಾಲ್ಲೂಕಿನ  ಎಸ್ಸಿ, ಎಸ್ಟಿ ಅಲೆಮಾರಿಗಳು ವಾಸಿಸುವ ಸ್ಥಳ ವೀಕ್ಷಣೆ ಮಾಡಿ ಕೊಪ್ಪಳಕ್ಕೆ ಆಗಮಿಸಿ, ನಗರದ ಪ್ರವಾಸಿ ಮಂದಿರದಲ್ಲಿ ಸಂಜೆ 05 ಗಂಟೆಗೆ ಅಲೆಮಾರಿ ಸಮುದಾಯಗಳ ಮುಖಂಡರೊಂದಿಗೆ ಕುಂದು-ಕೊರತೆಗಳ ಸಭೆ ನಡೆಸುವರು.
ನ.19ರಂದು ಬೆಳಿಗ್ಗೆ 9ಕ್ಕೆ ತಹಸೀಲ್ದಾರ್ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಕೊಪ್ಪಳ ತಾಲ್ಲೂಕಿನ ಎಸ್ಸಿ, ಎಸ್ಟಿ ಸಮುದಾಯದ ಅಲೆಮಾರಿಗಳು ವಾಸಿಸುವ ಸ್ಥಳ ವೀಕ್ಷಣೆ ಮಾಡುವರು. 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರತಿಕಾ ಗೋಷ್ಠಿ ನಡೆಸುವರು. 11.30ಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರೊಂದಿಗೆ “ಜಂಟಿ ಸಭೆ ಹಾಗೂ ಪ್ರಗತಿ ಪರಿಶೀಲನೆ ಸಭೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಛೇರಿಗೆ ಭೇಟಿ ನೀಡಿ ರಾತ್ರಿ 7ಗಂಟೆಗೆ ಕೊಪ್ಪಳದಿಂದ ಬೆಂಗಳೂರಿಗೆ ಪ್ರಯಾಣ ಬೆಳಸುವರು ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!