ಯುವ ಪರಿವರ್ತಕರ ತರಬೇತಿಗೆ ಆಯ್ಕೆಗೆ ನೇರ ಸಂದರ್ಶನ: ಅರ್ಜಿ ಆಹ್ವಾನ
: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ “ಯುವ ಸ್ಪಂದನ” ಕಾರ್ಯಕ್ರಮದಡಿ ಹೊಸದಾಗಿ ಯುವ ಪರಿವರ್ತಕರ ತರಬೇತಿಗೆ ಆಯ್ಕೆ ಮಾಡಲು ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಯುವಜನತೆಗೆ ಸಂಬಂಧಿಸಿದ ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ಬೆಂಗಳೂರು ಇಲ್ಲಿ ತರಬೇತಿ ಪಡೆದು ಆಯ್ಕೆಯಾದ ನಂತರ ಯುವ ಪರಿವರ್ತಕ ಹಾಗೂ ಯುವ ಸಮಾಲೋಚಕರೆಂದು ಪ್ರಮಾಣೀಕರಿಸಲಾಗುತ್ತದೆ. ಈ ಯುವ ಪರಿವರ್ತಕರು ಹಾಗೂ ಯುವ ಸಮಾಲೋಚಕರು ಯುವಸ್ಪಂದನ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ಯುವನೀತಿ ಅನ್ವಯ, ಯುವಜನರನ್ನು ತಲುಪಿ, ಯುವಜನರಿಂದಲೇ ನಡೆಸಿ, ಯುವ ಜನರನ್ನು ಸಬಲೀಕರಣಗೊಳಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪೂರಕಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯುವ ಪರಿವರ್ತಕರು ಹುದ್ದೆಗಳು: ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ತಾಲ್ಲೂಕಿನ ಖಾಲಿಯಿರುವ 04 ಹುದ್ದೆಗೆ ಯುವ ಪರಿವರ್ತಕರನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: ಪದವಿ ಹಾಗೂ ಮೇಲ್ಪಟ್ಟು (ಮನೋವಿಜ್ಞಾನ/ ಸಾಮಾಜಿಕ ಕೆಲಸ) ಪದವಿ ತೇರ್ಗಡೆ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಸಮುದಾಯದಲ್ಲಿ ಕೆಲಸ ಮಾಡಿರುವವರ ಅನುಭವ ಅಪೇಕ್ಷಿಸಲಾಗಿದೆ. ಸಾರ್ವಜನಿಕರ ಮಾನಸಿಕ ಆರೋಗ್ಯ ಸಂವರ್ಧನ ಸೇವೆಗಳ ಬಗ್ಗೆ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸು ಹೊಂದಿರಬೇಕು. ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು ಅವಶ್ಯಕ. ಪರಸ್ಪರ ಭಾಂದವ್ಯಾಭಿವೃದ್ಧಿಯ ಕೌಶಲ್ಯ, ತರಬೇತಿ ನೀಡುವ ಕೌಶಲ್ಯ, ಸಂವಹನ ಮತ್ತು ಉಲ್ಲೇಖ ಸೇವೆಗಳಿಗೆ ಸಂಘ ಸಂಸ್ಥೆಗಳ ಜೊತೆ ಸಹಯೋಗ ಏರ್ಪಡಿಸುವ ಕೌಶಲ್ಯಗಳು ಇರಬೇಕು. ಕನಿಷ್ಠ ವಯೋಮಿತಿ 21 ರಿಂದ 35 ವರ್ಷಗಳು. ಗೌರವಧನ ಮತ್ತು ಅವಧಿ ಪ್ರಮಾಣಿಕೃತ ಅಭ್ಯರ್ಥಿಗಳಿಗೆ ತಿಂಗಳಿಗೆ ಗೌರವಧನ ಹಾಗೂ ಪ್ರವಾಸ ಭತ್ಯೆ ಆರು ತಿಂಗಳ ಕಾಲ ನೀಡಲಾಗುವುದು.
ಅರ್ಜಿ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿಳಾಸ, ವಯಸ್ಸು, ವಾಸಿಸುತ್ತಿರುವ ವಿಳಾಸ, ವೈಯಕ್ತಿಕ ಮಾಹಿತಿಯೊಂದಿಗೆ ನವೆಂಬರ್ 22ರವರೆಗೆ ಕ್ರೀಡಾ ಇಲಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಗದಗ ರಸ್ತೆ, ಕೊಪ್ಪಳ ಕಛೇರಿ ದೂರವಾಣಿ ಸಂ: 08539-230131 ಇಲ್ಲಿ ಕಛೇರಿ ಅವಧಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.