ಮಾತುಕಡಿಮೆ, ಕೆಲಸ ಹೆಚ್ಚು ಮಾಡುವೆ: ಡಾ.ಅಮರೇಶ ಪಾಟೀಲ್

Get real time updates directly on you device, subscribe now.


ಗಂಗಾವತಿ; ಲಯನ್ಸ್‌ಕ್ಲಬ್‌ನಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಮಾತುಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡುವುದಾಗಿಡಾ. ಅಮರೇಶ ಪಾಟೀಲ್ ಹೇಳಿದರು.
ಅವರು ನಗರದ ವೈದ್ಯಕೀಯ ಭವನದಲ್ಲಿಜರುಗಿದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿ ಮಾತನಾಡಿದರು.
ನಗರದಲ್ಲಿ ಮೊದಲ ಬಾರಿಗೆಕಣ್ಣಿನಆಸ್ಪತ್ರೆಯನ್ನು ಲಯನ್ಸ್‌ಕ್ಲಬ್ ಮೂಲಕ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ. ಇದರಿಂದಕ್ಲಬ್‌ನ ಸೇವಾ ಚಟುವಟಿಕೆಯಲ್ಲಿದೊಡ್ಡಕೊಡುಗೆಯನ್ನು ನೀಡಲು ಸಾಧ್ಯವಾಗಲಿದೆ. ಇದಕ್ಕೆಲ್ಲ ಸರ್ವ ಸದಸ್ಯರ ಸಹಕಾರಬೇಕಾಗಿದೆ. ನಗರದಲ್ಲಿ ಸುಸಜ್ಜಿತವಾದಕಣ್ಣಿನಆಸ್ಪತ್ರೆಆರಂಭದಿಂದ ಸಹಸ್ರಾರು ಬಡವರಿಗೆ ಅನುಕೂಲವಾಗಲಿದೆ. ಅಲ್ಲದೆ ವಾರ್ಷಿಕವಾಗಿಯೋಜನೆಯಂತೆ ಹೆಲ್ತ್ ಕ್ಯಾಂಪ್‌ಗಳು, ಅವಶ್ಯವಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಒತ್ತು ನೀಡಲಾಗುವುದುಎಂದರು.
ಬಳಿಕ ಅನುಸ್ಥಾಪನಾ ಅಧಿಕಾರಿ ಮನೋಜ ಮಾಣಿಕ ಮಾತನಾಡಿದೇಶದಲ್ಲಿಯೇ ಭಾರತವುಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುವಲ್ಲಿ ಮೊದಲ ಸ್ಥಾನದಲ್ಲಿದೆಎಂದರು. ಬಳಿಕ ಎಲ್ಲಾ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿದರು.
ಈ ವೇಳೆಯಲ್ಲಿ ಕಾರ್ಯದರ್ಶಿಯಾಗಿ ರವಿಚೈತನ್ಯರೆಡ್ಡಿ, ಖಜಾಂಚಿಯಾಗಿಜೀವನ್‌ಕುಮಾರವಿ.ಪಾಟೀಲ್,ಡಾ.ಯು. ಮಾಧವ ಶೆಟ್ಟಿ, ಸೋಮನಾಥ ಪಟ್ಟಣಶೆಟ್ಟಿ, ಸತೀಶ್‌ವಿ.ಭೋಜಶೆಟ್ಟಿ, ಡಿ.ಎಂಅಭಿಷೇಕ್ ಸೇರಿದಂತೆಇನ್ನಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: