ಇನ್ನರವೀಲ್ ಕ್ಲಬ್ ನ ಉದ್ದೇಶಗಳನ್ನು  ಬೆಳಸುವ ಕಾರ್ಯ ಮಾಡುತ್ತೇನೆ : ಶಾರದಾ ಶೆಟ್ಟರ್ ಪಣ

Get real time updates directly on you device, subscribe now.

ನೂತನ ಅಧ್ಯಕ್ಷೆ
ಕುಷ್ಟಗಿ. ಜು.19; ಇನ್ನರವೀಲ್ ಕ್ಲಬ್ ನ   ಉದ್ದೇಶಗಳನ್ನು ನಾಡಿನಾದ್ಯಂತ ಬೆಳಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು
ಇನ್ನರವೀಲ್ ಕ್ಲಬ್ ನ ನೂತನ ಅಧ್ಯಕ್ಷೆ ಶಾರದಾ ಶೆಟ್ಟರ್ ಪಣ ತೊಟ್ಟರು. ಬುಧವಾರ ಬೆಳಗ್ಗೆ ಇಲ್ಲಿನ ಎನ್.ಸಿ.ಎಚ್ ಪ್ಯಾಲೇಸ್
ನಲ್ಲಿ ಏರ್ಪಡಿಸಿದ್ದ 2023-24 ನೇ ಅವಧಿಯ ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು 2023-24 ನೇ ಸಾಲಿನಲ್ಲಿ ಕುಷ್ಟಗಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ

ಶಿಬಿರ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮ ಗಳನ್ನು ಆಯೋಜಿಸಿ ಕ್ಲಬ್ ನ ಬೆಳವಣಿಗೆಗೆ ಶ್ರಮ ಪಡುತ್ತೇನೆ ಎಂದು ಹೇಳಿದರು.
ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ ಮಹಿಳೆಯರು ಎಲ್ಲಾ ರಂಗದಲ್ಲಿ ಭಾಗವಹಿಸಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಮಹಿಳೆಯರು ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಮುಂದೆ ಬರಬೇಕು. ದುರ್ಬಲ ವ್ಯಕ್ತಿಗಳನ್ನು ಗುರುತಿಸಿ ಸಹಾಯ ಸಹಕಾರ
ನೀಡಿ ಮೇಲೆತ್ತಬೇಕು ಎಂದು ಹೇಳಿದರು. ಇನ್ನರವೀಲ್ ಕ್ಲಬ್ ಸಮಾಜಕ್ಕೆ ಉತ್ತಮ ಕೊಡುಗೆ
ನೀಡಿದೆ ಎಂದು ಕ್ಲಬ್ ನ ಕಾರ್ಯವನ್ನು ಸ್ಲಾಘಿಸಿದರು. ಹೇಳಿದರು. ಚಿತ್ರದುರ್ಗ ಜಿಲ್ಲೆಯ ಇನ್ನರ್ ವೀಲ್ ಕ್ಲಬ್ ಪಾಸ್ಟ್ ಡಿಸ್ಟಿಕ್ ಚೇರಮನ್ ಸವಿತಾ ಶಿವಕುಮಾರ ಅವರು ಸಸಿಗೆ ನೀರು ಹಾಕುವ ಮೂಲಕ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಲಕ್ಷ್ಮೀ ದೇವಿ ದೊಡ್ಡನಗೌಡ ಪಾಟೀಲ್, ಡಿಸ್ಟಕ್ ಎಡಿಟರ್ ಪಾರ್ವತಿ ಪಳೂಟಿ, 2022-23 ಸಾಲಿನ ಅಧ್ಯಕ್ಷೆ ಸುಮಾ ಬ್ಯಾಳಿ, ಕಾರ್ಯದರ್ಶಿ ಗೌರಮ್ಮ ಕುಡತಿನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇನ್ನರ್ ವೀಲ್ ಕ್ಲಬ್ ನೂತನ
ಅಧ್ಯಕ್ಷರಾಗಿ ಶಾರದಾ ಶೆಟ್ಟರ್, ಉಪಾಧ್ಯಕ್ಷರಾಗಿ ಸುವರ್ಣ ಬಳೂಟಗಿ, ಐ.ಪಿ.ಪಿ ಸುಮಾ ಬ್ಯಾಳಿ, ಕಾರ್ಯದರ್ಶಿಯಾಗಿ ವಂದನಾ ಗೋಗಿ, ಖಜಾಂಚಿಯಾಗಿ ಗೌರಮ್ಮ ಕುಡತಿನಿ, ಐಎಸ್ಓ ಗೌರಮ್ಮ ಅಂಗಡಿ, ಜಂಟಿ ಕಾರ್ಯದರ್ಶಿಯಾಗಿ ಶಿಲ್ಪಾ ಸುಂಕದ, ಎಡಿಟರ್
ಮೇಘಾ ದೇಸಾಯಿ, ಶಶಿಕಲಾ ಬಯ್ಯಾಪೂರ, ಪ್ರಭಾ ಬಂಗಾರಶೆಟ್ಟರ್, ಪಾರ್ವತಿ ಪಳೂಟಿ, ಡಾ.ವೇದಾ ಪಾಟೀಲ್, ಡಾ.ಕುಮದಾ
ಪಲ್ಲೇದ, ಸುದೀಪ್ತಾ ಕಾಖಂಡಿಕಿ ಕ್ಲಬ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: