ಪತ್ನಿಯ ಶೀಲ ಶಂಕಿಸಿ ಕೊಲೆಗೈದು ಸುಟ್ಟು ಹಾಕಿದ ಪತಿ
ಕುಕನೂರು : ಪತ್ನಿಯ ಶೀಲ ಶಂಕಿಸಿ ಹತ್ಯೆಗೈದು ಶವ ಸುಟ್ಟು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ನಡೆದಿದೆ. ಅರಕೇರಿ ಗ್ರಾಮದ ಗೀತಾ ಭಾವಿಕಟ್ಟಿ ಕೊಲೆಗೀಡಾದ ದುರ್ದೈವಿ. ಗಂಡ ದೇವರೆಡ್ಡೆಪ್ಪ ಬಾವಿಕಟ್ಟಿ ಕೊಲೆಗೈದ ಆರೋಪಿ.
ತಡರಾತ್ರಿ ಕಟ್ಟಿಗೆಯಿಂದ ಪತ್ನಿಯ ಮುಖಕ್ಕೆ ಹೊಡೆದು ಹತ್ಯೆ ಮಾಡಿ ಕೊಲೆ ಮುಚ್ಚಿಹಾಕಲು ರಾತ್ರಿಯೆ ಮೃತದೇಹವನ್ನು ಸ್ಮಶಾನಕ್ಕೆ ಶವ ಹೊಯ್ದು ಸುಟ್ಟು ಹಾಕಿದ್ದಾನೆ. ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದುಗಂಡ ದೇವರಡೆಪ್ಪ ಹಾಗೂ ಕೃತ್ಯಕ್ಕೆ ಸಾತ್ ನೀಡಿದ ಮಲ್ಲಾರಡ್ಯಪ್ಪ ಎನ್ನುವವರನ್ನು ಬಂಧಿಸಿದ್ದಾರೆ. ಈ ಕುರಿತು ಮೃತಳ ಸಹೋದರ ಸಿದ್ದರೆಡ್ಡಿ ದೂರು ದಾಖಲಿಸಿದ್ದಾರೆ.
Comments are closed.