ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು   ಮುಂಭಾಗದಲ್ಲಿ  ರಂಗಮಂದಿರ ನಿರ್ಮಾಣಃ ಭೂದಾನಿಗಳ ಆಕ್ಷೇಪ

0

Get real time updates directly on you device, subscribe now.

ಗಂಗಾವತಿ

ಇಲ್ಲಿಯ ಆನೆಗೊಂದಿ ರಸ್ತೆ ಮಾರ್ಗದಲ್ಲಿರುವ  ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ
ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಂದಿಕೊಂಡು  ಮುಂಭಾಗದಲ್ಲಿ  ರಂಗಮಂದಿರ
ನಿರ್ಮಾಣವಾಗುತ್ತಿರುವದಕ್ಕೆ ಭೂ ದಾನಿಗಳು ಹಾಗು  ಅಂತರಾಷ್ಟ್ರೀಯ  ಮಾನವ ಹಕ್ಕುಗಳ
ಕರ್ನಾಟಕ ರಾಜ್ಯ  ಆಯೋಗದ ರಾಜ್ಯಾದ್ಯಕ್ಷರಾಗಿರುವ ಡಾ.ಕೊಲ್ಲಿ ನಾಗೇಶ್ವರಾವ ಅವರು
ತೀವೃ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಕಳೆದ 30 ವರ್ಷಗಳ ಹಿಂದೆ  ಕಾಲೇಜು
ಕಟ್ಟಡಕ್ಕಾಗಿ  ಸುಮಾರು 150 ಕೋಟಿ ರು ಬೆಲೆ ಬಾಳುವ  ಸರ್ವೆ ನಂ. 44/4
ಪ್ರದೇಶದಲ್ಲಿ  3  ಎಕರೆ 28 ಗುಂಟೆ ಭೂಮಿಯನ್ನು ರಾಜ್ಯಪಾಲರ ಹೆಸರಿನಲ್ಲಿ
ನೊಂದಾಯಿಸಿ ನೀಡಲಾಗಿತ್ತು.. ಈಗ ಆ ಕಾಲೇಜು ಮುಂಭಾಗದಲ್ಲಿ  ರಂಗಮಂದಿರ ನಿರ್ಮಾಣ
ಮಾಡುತ್ತಿದ್ದರಿಂದ  ಶಾಲಾ ಕೋಠಡಿಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ
ಬೆಳಕು, ಗಾಳಿ ಇಲ್ಲದೇ ತೊಂದರೆ ಪಡುತ್ತಿದ್ದಾರೆ. ಈಗಾಗಲೇ ಕಾಲೇಜು ಆವರಣದಲ್ಲಿ  ಎರಡು
ಆಡೋಟಿರಿಯಂ ಹಾಲ್ ಗಳಿದ್ದು, ಇದಕ್ಕೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ
ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನ
ರೆಡ್ಡಿ ಅವರು ಉಪಸ್ಥಿತರಿದ್ದರು.

ಈಗ ರಂಗ ಮಂದಿರ ನಿರ್ಮಾಣವಾಗುತ್ತಿದ್ದರಿಂದ ಕಟ್ಟಡದ ಮುಂಭಾಗದ  ಕಳೆ  ಬಾರದಂತಾಗುತ್ತಿದೆ.

ಪ್ರಸ್ತುತ  ಕಟ್ಟಡ ನಿರ್ಮಾಣವಾಗುವದರ ಬಗ್ಗೆ  ಸ್ಥಳೀಯ ಶಾಸಕರ ನಿವಾಸದಲ್ಲಿ  ಜುಲೈ 7
ರಂದು ಭೇಟಿಯಾಗಿ   ಲಿಖಿತವಾಗಿ ಪತ್ರ ಬರೆದು ತಡೆ ಹಿಡಿಯುವಂತೆ  ಕೋರಲಾಗಿತ್ತು.
ಅಲ್ಲದೇ  ಕಾಲೇಜಿನ ಪ್ರಾಚಾರ್ಯ ಜಾಜಿ ದೇವೇಂದ್ರಪ್ಪ ಅವರಿಗೆ  ಹಲವಾರು ಬಾರಿ ಮಾಹಿತಿ
ನೀಡಲಾಗಿತ್ತು.

ಕೂಡಲೆ ಶಾಸಕರು ಕಾಲೇಜಿನ ಪ್ರಾಚರ್ಯರಿಗೆ ದೂರವಾಣಿ ಮೂಲಕ  ಕೂಡಲೆ   ರಂಗಮಂದಿರ
ಕಟ್ಟಡ ನಿರ್ಮಿಸಬಾರದು, ಕೇವಲ  ಬಯಲು ರಂಗಮಂದಿರ ನಿರ್ಮಿಸುವಂತೆ ಸೂಚಿಸಲಾಗಿತ್ತು.

ಆದರೆ ಈಗ ಎರಡನೇ  ಬಾರಿ ಶಾಸಕರ ಗಮನಕ್ಕೆ ತಂದಾಗ ಕಾಮಗಾರಿ ಕೈಗೊಳ್ಳವದಿಲ್ಲ ಎಂದು
ತಿಳಿಸಿದ್ದರು.   ಸೆ. 8 ರಂದು  ಕಟ್ಟಡದ ಆರ್ ಸಿಸಿ ಹಾಕುವಾಗ ಭೂಮಾಲಿಕರು ಆಕ್ಷೇಪ
ವ್ಯಕ್ತ ಪಡಿಸಿ ಶಾಸಕರು ಬರುವ ತನಕ  ಕಾಮಗಾರಿ ಕೈಗೊಳ್ಳ ಬಾರದೆಂದು ಒತ್ತಾಯಿಸಿದರು.
ಮತ್ತೇ ಗುತ್ತಿಗೆದಾರರು ಭೂಮಾಲೀಕರ  ಮಾತು ಕೇಳದೆ ಪೊಲೀಸರನ್ನು ಕರೆಯಿಸಿ ಆರ್ ಸಿಸಿ
ಪ್ರಾರಂಭಿಸಿ ದೌರ್ಜನ್ಯ ಮಾಡಿದ್ದಾರೆಂದು ಅರೋಪಿಸಿದ್ದಾರೆ..

ಕೂಡಲೆ ಈ ಕಟ್ಟಡದ ಕಾಮಗಾರಿ ನಿಲ್ಲಿಸದಿದ್ದರೆ ಕಾಲೇಜು ಆವರಣದಲ್ಲಿ ಭೂ
ದಾನಿಗಳಾಗಿರುವ  ಕೊಲ್ಲಿ ನಾಗೇಶ್ವರರಾವ ಕುಟಂಬದವರು   ಕಾಲೇಜಿನ ಪ್ರಾಚರ್ಯರರು ಮತ್ತು
ಗುತ್ತಿಗೆದಾರನ ವಿರುದ್ಧ ಧರಣಿ ನಡೆಸಲಾಗುವದೆಂದು ಕೊಲ್ಲಿ ನಾಗೇಶ್ವರರಾವ
ಎಚ್ಚರಿಸಿದ್ದಾರೆ.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: