ಹನುಮಸಾಗರ ಮಸೂತಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ : ಭಾವೈಕ್ಯತೆ ಸಾರಿದ ಹಬ್ಬ
ಹನುಮಸಾಗರ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ಲಾಲ್ ಸಾಬ್ ಮಸೂತಿ ಆವರಣದಲ್ಲಿ ಗಣೇಶನನ್ನು ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಸಲವು ಭಕ್ತಿ ಸಡಗರ ಸಂಭ್ರಮದಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿಷ್ಠಾಪನೆ ಯೊಂದಿಗೆ ನಾಲ್ಕನೇ ದಿನ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ .
ಈ ಸಲವು ನಾಲ್ಕನೇ ದಿನ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಹನುಮಸಾಗರದಲ್ಲಿ ಹಿಂದೂ ಮುಸ್ಲಿಂರು ಎಲ್ಲರೂ ಸೇರಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಅದೇ ರೀತಿ ಗಣೇಶೋತ್ಸವವನ್ನು ಸಹ ಕಳೆದ ಮೂರು ವರ್ಷಗಳಿಂದ ಎಲ್ಲರೂ ಒಗ್ಗಟ್ಟಾಗಿ ಆಚರಿಸ್ತಾ ಬಂದಿದ್ದಾರೆ. ಹನುಮಸಾಗರದ ನಾಲ್ಕನೇ ವಾರ್ಡಿನ ಕುಂಬಾರ್ ಓಣಿಯಲ್ಲಿರುವ ಲಾಲ್ ಸಾಬ್ ಮಸೂತಿ ಅಂಗಳದ ಆವರಣದಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಲ್ಲ ಸಮುದಾಯದವರು ಯಾವುದೇ ಬೇಧ ಬಾವವಿಲ್ಲದಂತೆ ಒಂದಾಗಿ ನಿರ್ಣಯಿಸಿ ಗಣೇಶನನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸಲಾಗುತ್ತಿದೆ. ಕಮಿಟಿಯಲ್ಲಿ ಕೃಷ್ಣಪ್ಪ ಬಂಡರಗಲ್ ರಿಜ್ವಾನ್ ಮೊಮಿನ್ ವೆಂಕಟೇಶ್ ಸಿಂಧೆ ಭಾಷಾ ಸಾಬ್ ಮುಜಾವರ್, ಮಹಬೂಬ್ ಸಾಬ್ ಗದ್ವಾಲ್ ರಿಯಾಜ್ ಖಾಜಿ ಮಂಜುನಾಥ್ ಹುಲ್ಲೂರ್ ಹನುಮಂತ್ ಮತ್ತು ನಾಯಕ್ ಮುಜಾವರ್ ಭಾಷಾ ಮುತ್ತಪ್ಪ ಬಂಡರಗಲ್ ಜಾವೆದ್ ಬನ್ನಟ್ಟಿ ನಾಗರಾಜ್ ಕಂದ್ಗಲ್ ನಾಗಪ್ಪ ಮಡಿವಾಳರ, ಮಹಾಂತಯ್ಯ ಕೋ, ಜಗದೀಶ್ ಸೇರಿದಂತೆ ಸಾಕಷ್ಟು ಜನ ಒಂದಾಗಿ ಸಡಗರ ಸಂಭ್ರಮದಿಂದ ಭಾವೈಕ್ಯದಿಂದ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ . ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಸಂಭ್ರಮದಿಂದ ಆಚರಿಸುತ್ತಿರುವ ಗಣೇಶೋತ್ಸವ ಎಲ್ಲರಿಗೂ ಮಾದರಿಯಾಗಿದೆ.
Comments are closed.