ಕಲ್ಯಾಣ ಕರ್ನಾಟಕದ ಟಾಪರ್ ಗಳಿಗೆ ಉಚಿತ ಶಿಕ್ಷಣ –ನೆಕ್ಕಂಟಿ ಸೂರಿಬಾಬು
ಶ್ರೀ ವಿದ್ಯಾನಿಕೇತನ ಸಂಸ್ಥೆಯಿಂದ 100 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಗಂಗಾವತಿ: ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ತಮ್ಮ ಪದವಿ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 32 ತಾಲೂಕು ಗಳಲ್ಲಿ ಕನಿಷ್ಠ 100 ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣವನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರತಿ ತಾಲೂಕಿಗೆ ಮೂರು ಜನ ಟಾಪರ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ವಸತಿ ಮತ್ತು ಶಿಕ್ಷಣಕ್ಕೆ ಪ್ರತಿ ವಿದ್ಯಾರ್ಥಿಗೆ ಪ್ರತಿ ವರ್ಷ ಒಂದುವರೆ ಲಕ್ಷ, ಎರಡು ವರ್ಷಕ್ಕೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ.ಆದರೂ ಸಹ ವಿದ್ಯಾರ್ಥಿಗಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಮತ್ತು ವಿದ್ಯಾನಿಕೇತನ ಸಂಸ್ಥೆ ಸಮಾಜದ ಏಳಿಗೆಗಾಗಿ ಟಾಪರ್ ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಉಚಿತ ಶಿಕ್ಷಣವನ್ನು ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ವಿವರಿಸಿದರು.
ಇದೇ 2025 26 ನೇ ಸಾಲಿನಿಂದ ಗ್ರಾಮೀಣ ಪ್ರದೇಶ ವಡ್ಡರಹಟ್ಟಿ ಯಲ್ಲಿ ಐಸಿಎಸ್‌ಈ ಸಿಲಬಸ್ ನೊಂದಿಗೆ ಶ್ರೀ ವಿದ್ಯಾನಿಕೇತನ ಇಂಟರ್‌ನ್ಯಾಷನಲ್ ಸ್ಕೂಲ್ – ಪ್ರಾರಂಭಿಸಲಾಗುತ್ತಿದ್ದು. ಕಲ್ಯಾಣ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಒಂದು ಯೋಜನೆಗೆ ನಮ್ಮ ಸಂಸ್ಥೆ ಕೈ ಹಾಕಿದೆ.
*ನಮ್ಮ ದೃಷ್ಟಿಕೋನ:
ನೈತಿಕ, ಮೌಲ್ಯಾಧಾರಿತ. ತಂತ್ರಜ್ಞಾನ ಸಂಚಾಲಿತ ಮತ್ತು ಸಂಸ್ಕೃತಿಯಿಂದ ಸಶಕ್ತಗೊಳಿಸಿದ ಶಿಕ್ಷಣದ ಮೂಲಕ ಭವಿಷ್ಯದ ನಾಯಕರನ್ನು ರೂಪಿಸುವುದು.
*ನಮ್ಮ ಧೈಯ :
ಬೌದ್ಧಿಕ, ಭಾವನಾತ್ಮಕ ಮತ್ತು ನೈತಿಕ ಬೆಳವಣಿಗೆಯನ್ನು ಉತ್ತೇಜಿಸುವುದು.ವೈಶಿಷ್ಟ್ಯ ಪೂರ್ಣ ತಾಂತ್ರಿಕ ಕೌಶಲ್ಯಗಳೊಂದಿಗೆ ಸಶಕ್ತಗೊಳಿಸುವುದು.ದೃಢವಾದ ಮೌಲ್ಯಗಳೊಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು.
ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯನ್ನು ಸಂಭ್ರಮಿಸುವುದು.
ನಾವೀನ್ಯತೆ, ನಮ್ಮತೆ ಮತ್ತು ಆತ್ಮವಿಶ್ವಾಸವನ್ನು ಪ್ರೋತ್ಸಾಹಿಸುವುದು.
ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ನಿರಂತರ ಕಲಿಕೆಯನ್ನು ಉತ್ತೇಜಿಸುವುದು.
ದೇಶದ ಐಕ್ಯತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಮನೋಭಾವವನ್ನು ರೂಪಿಸುವುದು.
*ವೈಶಿಷ್ಟ್ಯತೆಗಳು:
ಆಧುನಿಕ ತರಗತಿಗಳು ಸ್ಮಾರ್ಟ್ ಬೋರ್ಡ್‌ಗಳೊಂದಿಗೆ, ಸುಸಜ್ಜಿತ ಗ್ರಂಥಾಲಯ, ಸೈನ್ಸ್ ಲ್ಯಾಬ್‌ಗಳು,
ಕಂಪ್ಯೂಟರ್ ಲ್ಯಾಬ್ / ಗಣಿತ ಲ್ಯಾಬ್, ಯೋಗ ತರಬೇತಿ ಕೊಠಡಿ,
ನೃತ್ಯ ಹಾಗೂ ಸಂಗೀತ ತರಬೇತಿ ಕೊಠಡಿ (ಪಾಶ್ಚಾತ್ಮ ಮತ್ತು ಶಾಸ್ತ್ರೀಯ) (ಕಲಾ ಮತ್ತು
ಕರಕುಶಲ ತರಬೇತಿ ಕೊಠಡಿ,
ವೈದ್ಯಕೀಯ ಕೊಠಡಿ (ಇನ್‌ಫರ್ಮರಿ), ಕ್ರೀಡಾಂಗಣ (ಒಳಾಂಗಣ ಮತ್ತು ಹೊರಾಂಗಣ) | ಎ.ವಿ ರೂಮ್, ಟಿಂಕರಿಂಗ್ ಲ್ಯಾಬ್ ಹೀಗೆ ಅನೇಕ ಸೌಲಭ್ಯಗಳೊಂದಿಗೆ ಕೊಪ್ಪಳ ಜಿಲ್ಲೆಗೆ ಪಾದಾರ್ಪಣೆ ಮಾಡಿದೆ ಇದರ ಸದುಪಯೋಗ ವನ್ನು ಕಲ್ಯಾಣ ಕರ್ನಾಟಕ ಭಾಗದ ಮತ್ತು ವಿಶೇಷವಾಗಿ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ ಜಗನ್ನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಬೋಧಕರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.