ಕೆ.ಎಸ್.ಆರ್.ಟಿ.ಸಿ. ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಶ್ವಾಸನೆ,ಡಿ. 31ರ ಅನಿರ್ಧಿಷ್ಟಾವಧಿ ಮುಷ್ಕರ ಮುಂದಕ್ಕೆ
.
ಕೊಪ್ಪಳ : ಕೆ,ಎಸ್,ಆರ್,ಟಿ,ಸಿ, ನೌಕರರ ವಿವಿಧ ಬೇಡಿಕೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಕ್ರಾಂತಿ ಹಬ್ಬದ ಬಳಿಕ ಈಡೇರಿಕೆಗೆ ಆಶ್ವಾಸನೆ ನೀಡಿದರಿಂದ ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಡಿ. 31ರ ಅನಿರ್ಧಿಷ್ಟಾವಧಿ ಮುಷ್ಕರ ಮುಂದೊಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೊಪ್ಪಳ ವಿಭಾಗದ ಎಲ್ಲಾ ಹಂತದ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಜಂಟಿ ಕ್ರಿಯಾ ಸಮಿತಿಯಿಂದ ದಿನಾಂಕ: 31-12-2024 ರಿಂದ ಪ್ರಾರಂಭವಾಗಬೇಕಿದ್ದ ಅನಿರ್ಧಿಷ್ಟಾವಧಿ ಮುಷ್ಕರದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಂಸ್ಥೆಯ ಎಲ್ಲಾ ಹಿರಿಯ ಅಧಿಕಾರಿಗಳು ಕಾರ್ಮಿಕರ ಸಮಸ್ಯೆಯನ್ನು ಜನವರಿ 2025ರ ಸಂಕ್ರಾಂತಿಯ ನಂತರ ಬಗೆಹರಿಸಿ ಕೊಡುವುದಾಗಿ ನಮ್ಮೊಂದಿಗೆ ಚರ್ಚಿಸಿದ್ದರಿಂದ ಜಂಟಿ ಕ್ರಿಯಾ ಸಮಿತಿ 31-12-2024 ರ ಅನಿರ್ಧಿಷ್ಟಾವಧಿ ಮುಷ್ಕರವನ್ನು ಮುಂದೂಡಲಾಗಿದೆ.
ಈ ಸಮಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ವಿಭಾಗದ ಎಲ್ಲಾ ಹಂತದ ಸಿಬ್ಬಂದಿಗಳಿಗೂ ಹಾಗೂ ಅಧಿಕಾರಿ ವರ್ಗವರಿಗೆ ಮತ್ತು ಭದ್ರತಾ ಅಧಿಕಾರಿಗಳು ಸಿಬ್ಬಂದಿ ವರ್ಗದವರಿಗೆ ಹಾಗೂ ಮಾಧ್ಯಮದವರಿಗೂ ಧನ್ಯವಾದಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಜಿಲ್ಲಾ ಸಂಚಾಲಕರುಗಳಾದ ಯು.ಎಸ್.ಸೊಪ್ಪಿಮಠ ವಕೀಲರು,ಎ,ಬಿ, ದಿಂಡೂರ, ಹನುಮಂತಪ್ಪ ಅಂಬಿಗೇರ್, ಎಸ್.ಎ.ಗಫಾರ್, ಮಖಬೂಲ್ ರಾಯಚೂರು ಮುಂತಾದವರು ತಿಳಿಸಿದ್ದಾರೆ.