ಸಂಪಾದಕರ ಸಂಘದ ಕೊಪ್ಪಳ ಘಟಕಕ್ಕೆ ನೂತನ ಸಾರಥಿಗಳು

0

Get real time updates directly on you device, subscribe now.


ಅಧ್ಯಕ್ಷರಾಗಿ ಶ್ರೀನಿವಾಸ, ಕಾರ್ಯದರ್ಶೀಯಾಗಿ ಖಲೀಲ್ ಉಡೇವು ಆಯ್ಕೆ
ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಪುನಾರಚನೆ ಭಾನುವಾರ ನಡೆಯಿತು.

ಕೊಪ್ಪಳ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾಗಿ ಶ್ರೀನಿವಾಸ ಎಂ.ಜೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಖಲೀಲ್ ಉಡೇವು ಆವರು ಅವಿರೋಧವಾಗಿ ಆಯ್ಕೆಯಾದರು.
ನಂತರ ಈರಣ್ಣ ಕಳ್ಳಿಮನಿ ಹಾಗೂ ಎಸ್.ಎಂ, ಪಟೇಲ್ ಉಪಾಧ್ಯಕ್ಷರಾಗಿ, ವೈ.ಬಿ. ಜೂಡಿ ಜಂಟಿ ಕಾರ್ಯದರ್ಶಿ, ವೈ ನಾಗರಾಜ್ ಖಜಾಂಚಿಯಾಗಿ ಎಂ.ಡಿ. ಅಖೀಲ್ ಉಡೇವು ಸಂಘಟನಾ ಕಾರ್ಯದರ್ಶಿ, ಅಕ್ಷಯ್ ಇರಕಲ್ ಸಹಕಾರ್ಯದರ್ಶಿಯಾಗಿ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ದೇವುನಾಗನೂರು, ಎಚ್.ವಿ. ರಾಜಾಭಕ್ಷಿ ಆಯ್ಕೆಯಾದರು.
ಮುಂದಿನ ಜಿಲ್ಲಾ ಘಟಕದ ಸಭೆಯಲ್ಲಿ ಅನುಮೋದಿಸಿ ಹಿರಿಯ ಸದಸ್ಯ ಎನ್.ಎಂ. ದೊಡ್ಮನಿ ಅವರನ್ನು ರಾಜ್ಯ ಕಾರ್ಯಕಾರಣಿಗೆ ಕಳಿಸಿಕೊಡುವಂತೆ ರಾಜ್ಯಾಧ್ಯಕ್ಷ ಸಲಹೆ ನೀಡಿದರು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ಸ್ಥಳೀಯ ಅಂದರೆ ಜಿಲ್ಲಾಮಟ್ಟದ ದಿನಪತ್ರಿಕೆಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ, ಸರ್ಕಾರದಿಂದ ಸೂಕ್ತವಾಗಿರುವ ಸೌಲಭ್ಯಗಳು ಸಿಗುತ್ತಿಲ್ಲ, ಈ ಹಿಂದೆ ಹೋರಾಟ ಮಾಡುವ ಉದ್ದೇಶಕ್ಕೆ ಅಸ್ತಿತ್ವಕ್ಕೆ ಬಂದಿದ್ದ ಸಾಕಷ್ಟು ಸಂಪಾದಕರ ಸಂಘಗಳು ಸ್ವಾರ್ಥಕ್ಕೆ ನಾಶವಾಗಿವೆ ಎಂದರು.
ನಮ್ಮದು ವಿಭಿನ್ನ ಸಂಘಟನೆಯಾಗಿದ್ದು ಇಡೀ ರಾಜ್ಯದಾದ್ಯಂತ ಹೆಚ್ಚು ಮನ್ನಣೆ ಸಿಗುತ್ತಿದೆ. ಈಗಾಗಲೆ ರಾಜ್ಯದ ೬೩೦ ಪತ್ರಿಕೆಗಳ ಪೈಕಿ ನಮ್ಮ ಸಂಘದಲ್ಲಿ ೨೮೦ಕ್ಕೂ ಹೆಚ್ಚು ಪತ್ರಿಕೆಗಳು ಸದಸ್ಯತ್ವ ಪಡೆದುಕೊಂಡಿವೆ. ನಮ್ಮ ಜವಾಬ್ದಾರಿ ಹೆಚ್ಚಾಗಿದ್ದು, ಈ ಹಿನ್ನೆಲೆ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಟಿ.ಎಸ್. ಕೃಷ್ಣಮೂರ್ತಿ ಮಾತನಾಡಿ, ಈಗಾಗಲೆ ಜಿಲ್ಲಾ ಘಟಕದಿಂದ ಎಚ್.ಎಸ್. ಹರೀಶ್ ಮತ್ತು ವಿಶ್ವನಾಥ್ ಬೆಳಗಲ್‌ಮಠ ಅವರನ್ನು ಕೇಂದ್ರ ಸಮಿತಿಗೆ ತೆಗೆದುಕೊಳ್ಳಲಾಗಿದೆ. ನಮ್ಮ ಸಂಘಟನೆ ಗಟ್ಟಿಯಾಗಿದ್ದರೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಂಡು ನಮ್ಮ ಪತ್ರಿಕೆಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದರು.
ಇದೀಗ ಕೊಪ್ಪಳದ ನೂತನ ಜಿಲ್ಲಾ ಘಟಕ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಸದಸ್ಯತ್ವ ಪಡೆಯದೇ ಇರುವವರನ್ನು ಕೈಬಿಡಬೇಕು, ಸದಸ್ಯತ್ವ ಸ್ವೀಕರಿಸಿದ ಬಳಿಕ ಅವರನ್ನು ಜಿಲ್ಲಾ ಘಟಕಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷ ಎಚ್.ಎಸ್. ಹರೀಶ್, ರಾಜ್ಯ ಸಮಿತಿಯ ಪ್ರತಿನಿಧಿ ವಿಶ್ವನಾಥ್ ಬೆಳಗಲ್‌ಮಠ, ರಾಜ್ಯ ಘಟಕದ ಜಂಟಿ ಕಾರ್ಯದರ್ಶಿಗಳಾದ ಬಿ. ದಿನೇಶ್ ಗೌಡಗೇರೆ, ಸಿ. ರಂಗನಾಥ್, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಎಲ್ ಶಿವಶಂಕರ್ ಇದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!