ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ : ಹಣ ಮುಟ್ಟುಗೋಲು, ಜಮೀನುದಾರರ ಜಮೀನಿನ ಮೇಲೆ ಭೋಜಾ

Get real time updates directly on you device, subscribe now.

:ಕನಕಗಿರಿ : ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘನೆ  ಹಿನ್ನಲೆಯಲ್ಲಿ  ಹಣ ಮುಟ್ಟುಗೋಲು ಹಾಕಿಕೊಂಡು  ಜಮೀನುದಾರರ ಜಮೀನಿನ ಮೇಲೆ ಭೋಜಾ  ಕೂಡಿಸಲು ಆದೇಶ ನೀಡಲಾಗಿದೆ.

ಘಟನೆ ವಿವರ ಹೀಗಿದೆ

ಕನಕಗಿರಿ ಪೊಲೀಸ್ ಠಾಣೆ ಪಿ.ಎ.ಆರ್. ಸಂಖ್ಯೆ : 146/2024 ಕಲಂ. 107 ಸಿ.ಆರ್.ಪಿ.ಸಿ. ರಲ್ಲಿಯ ರೌಡಿ ಶೀಟುದಾರನಾದ ಯಮನೂರಪ್ಪ ತಂದೆ ನಾಗಪ್ಪ ಸೊಂಡಿ  ಸಾ: ಹುಲಿಹೈದರ  ಶಾಂತಿ ಪಾಲನಾ ಮುಚ್ಚಳಿಕೆಯಲ್ಲಿನ ಷರತ್ತುಗಳನ್ನು ಉಲ್ಲಂಘಿಸಿದಕ್ಕಾಗಿ ಪಿ.ಐ. ಕನಕಗಿರಿ ಠಾಣೆ ರವರು ಸದರಿ ರೌಡಿಶೀಟರನ 50,000=00 ರೂ ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ತಹಶೀಲ್ದಾರರು ಕನಕಗಿರಿ ರವರಲ್ಲಿ ವರದಿಯನ್ನು ಸಲ್ಲಿಸಿದ್ದಾರೆ. . ಅದರಂತೆ ತಹಶೀಲ್ದಾರ ಕನಕಗಿರಿ ರವರು ಪರೀಶಿಲನೆ ಮಾಡಿ ಸದರಿ ರೌಡಿಶೀಟರನು ಮುಚ್ಚಳಕಿಯಲ್ಲಿನ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು ಕಂಡುಬಂದಿದ್ದರಿಂದ ಜಾಮೀನುದಾರರಾಗಿದ್ದ ಗ್ಯಾನಪ್ಪ ತಂದೆ ಹನುಮಂತಪ್ಪ ಜಾಡಿ ಸಾ: ಹುಲಿಹೈದರ ಇವರ ಜಮೀನು ಸ.ನಂ. 114/*/ 4-08 ಎ.ಗುಂಟೆ ಜಮೀನಿನ ರೂ 50,000/- ಭೋಜಾ ನೋಂದಾಯಿಸಲಿಕ್ಕೆ ದಿನಾಂಕ 24-08-2024 ರಂದು ಆದೇಶಮಾಡಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!