ಕೊಪ್ಪಳಕ್ಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮಂಜೂರಿಗೆ ಆಗ್ರಹ
.
ಕೊಪ್ಪಳ : ಕಲಬುರಗಿಯಲ್ಲಿ ಸೆ.17ಕ್ಕೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳ ನಗರಕ್ಕೆ ಅತ್ಯಧುನಿಕ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಮಹಾವಿದ್ಯಾಲಯ ಮಂಜೂರು ಮಾಡುವಂತೆ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಕೊಳಚೆ ನಿರ್ಮೂಲನಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದೆ.
ಕಲ್ಯಾಣ ಕರ್ನಾಟಕ ವೆಂದರೆ ಕಲಬುರಗಿ ಜಿಲ್ಲೆ ಮಾತ್ರ ಎಂಬಂತಾಗಿ ಆರು ಜಿಲ್ಲೆಗಳನ್ನು ಕಡೆಗಣಿಸಿ ಕಲಬುರಗಿ ಜಿಲ್ಲೆಗೆ ಅನೇಕ ಬೃಹತ್ ಯೋಜನೆಗಳು ಈ ಹಿಂದಿನ ಸರ್ಕಾರಗಳು ಜಾರಿಗೊಳಿಸುತ್ತಾ ಬಂದಿವೆ. ಹೀಗಾಗಿ ತಾವು ಕರ್ನಾಟಕದಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ನಿರ್ಲಕ್ಷಿಸಲ್ಪಟ್ಟ ಕೊನೆಯ ಭಾಗದ ಜಿಲ್ಲೆಯಾದ ಕೊಪ್ಪಳಕ್ಕೆ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜು ಸೇರಿದಂತೆ ಹಲವು ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿ. ಕಲಬುರಗಿಯಲ್ಲಿರುವ ಕಲ್ಯಾಣ ಪ್ರದೇಶಾಭಿವೃದ್ಧಿ ಮಂಡಳಿ ಕೊಪ್ಪಳ ಜಿಲ್ಲೆಗೆ ಸ್ಥಳಾಂತರಿಸುವ ಮೂಲಕ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕಾನೂನಾತ್ಮಕ ಶಿಕ್ಷಣದೊಂದಿಗೆ ಇತರೆ ಹಲವು ರಂಗಗಳಲ್ಲೂ ಇಲ್ಲಿನ ಜನರೂ ಮುಂದುವರೆಯಲು ಸಾಧ್ಯ.
ದಯವಿಟ್ಟು ತಮ್ಮ ಅವಧಿಯಲ್ಲಿ ಪ್ರತಿಯೊಬ್ಬ ನಾಗರಿಕರು ನೆನಪಿಡುವಂತಹ ಪುರಾತನ ಕಾಲದಿಂದ ನಡೆದು ಬಂದಂತಹ ಗಿಡಮೂಲಿಕೆಯ ಮುಂದುವರೆದ ಅತ್ಯಾಧುನಿಕ ಆಯುರ್ವೇದ ಚಿಕಿತ್ಸಾ ಪದ್ದತಿಯ ಅತ್ಯಾಧುನಿಕ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸರ್ಕಾರಿ ಕಾನೂನು ಕಾಲೇಜು ಹಾಗೂ ಹಲವು ಮಹತ್ತರ ಯೋಜನೆಗಳನ್ನು ತಕ್ಷಣ ಮಂಜೂರು ಮಾಡುತ್ತಿರೆಂದು ಬಹುನಿರೀಕ್ಷೆಯಿಂದ ಈ ಭಾಗದ ಜನರ ಪರವಾಗಿ ಕೋರುತ್ತೇವೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್.ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಮುಖಂಡರಾದ ಮೌಲಾ ಹುಸೇನ್ ಹಣಗಿ. ನೂರ್ ಸಾಬ್ ಹೊಸಮನಿ. ಜಾಫರ್ ಕುರಿ. ಗೌಸ್ ನೀಲಿ ಮುಂತಾದವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Comments are closed.