ಭಾಗ್ಯನಗರ ನೂತನ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ
ಕೊಪ್ಪಳ ಜಿಲ್ಲಾ ಕೂದಲು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ(ರಿ )ಭಾಗ್ಯನಗರ್ ಇವರಿಂದ ಹಾಗೂ ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ್ ಗುಪ್ತ ಹಾಗೂ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ್ ವಿರೂಪಾಕ್ಷಪ್ಪ ಹುರಕಡ್ಲಿ ಇವರ ಉಪಸ್ಥಿತಿಯಲ್ಲಿ ಕನ್ನಿಗೂಳ್ ಸುಬ್ಬರಾವ್ ಗುಪ್ತ ವಾಸವಿ ಕಲ್ಯಾಣ ಮಂಟಪ ಭಾಗ್ಯನಗರದಲ್ಲಿ ನೂತನವಾಗಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ತುಕಾರಾಮಪ್ಪ ಚಂದ್ರಪ್ಪ ಗಡಾದ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಹೊನ್ನೂರ್ ಸಾಬ್ ಬೈರಾಪುರ ಇವರನ್ನು ಜಂಟಿಯಾಗಿ ಕೂದಲು ವ್ಯಾಪಾರಸ್ಥರ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು .
ಕಾರ್ಯಕ್ರಮದ ಪ್ರಾಸ್ತಾನಿಕ ಭಾಷಣವನ್ನು ಚನ್ನಪ್ಪ ತಟ್ಟಿ ನಡೆಸಿದರು ನಿರೂಪಣೆಯನ್ನು ವಕೀಲರಾದ ಪರಶುರಾಮ್ ಎಚ್ ಪವಾರ್ ನೆರವೇರಿಸಿದರು ಸನ್ಮಾನಿತರಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭಾಗ್ಯನಗರ ಪಟ್ಟಣದ ಅಭಿವೃದ್ಧಿಗಾಗಿ ಅವಶ್ಯವಾದ ಎಲ್ಲ ಬೇಡಿಕೆಗಳನ್ನು ಹೊಸ ಹೊಸ ಯೋಜನೆ ಅನುಷ್ಠಾನಗಳನ್ನು ಶೀಘ್ರ ರೂಪದಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಗಾಗಿ ತಂದು ಪ್ರತಿಷ್ಠಾಪಿಸಲು ಸಾಕಷ್ಟು ಪ್ರಯತ್ನ ಪಡುವುದಾಗಿ ತಿಳಿಸಿದರು ಮತ್ತು ಕುಡಿಯುವ ನೀರಿನ ಯೋಜನೆಯನ್ನು ಹಂತದಲ್ಲಿ ಇರುವುದರಿಂದ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು ಪಟ್ಟಣದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ವಿದ್ಯುತ್ ದೀಪದ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ಕೊಡುವುದರ ಜೊತೆಗೆ ಕೂದಲು ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿಗಾಗಿ ಸಹಕರಿಸುವುದಾಗಿಯೂ ತಿಳಿಸಿದರು ಕೂದಲು ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಶ್ರೀನಿವಾಸ ಗುಪ್ತ ಇವರು ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಗ್ರ ವಿವರಣೆ ನೀಡಿದರು ಮತ್ತು ಮುಂದಿನ ದಿನಗಳಲ್ಲಿ ಕಚ್ಚಾ ಕೂದಲು ರಫ್ತು ಆಗುತ್ತಿರುವುದನ್ನು ತೊಡೆಗಟ್ಟಲು ಹೋರಾಟದ ರೂಪುರೇಷೆಗಳನ್ನು ತರಲು ಶೀಘ್ರ ಎಲ್ಲರೂ ಸಭೆ ಸೇರುವಂತೆ ಕೂದಲು ವ್ಯಾಪಾರಸ್ಥರು ಉದ್ಯಮದಾರರಿಗೆ ಕರೆ ನೀಡುವ ಮೂಲಕ ವಿನಂತಿಸಿದರು ಕಚ್ಚಾ ಕೂದಲು ಹೊರದೇಶಕ್ಕೆ ರಫ್ತು ಆಗುವುದರಿಂದ ಇಲ್ಲಿನ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳ ಬೇಕಾಗುತ್ತದೆ ಈ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು ಈ ಹಿಂದೆ ಸಮಗ್ರ ಹೋರಾಟದಿಂದ ನಿಲ್ಲಿಸಲಾಗಿತ್ತು ಈ ರೀತಿ ಕಚ್ಚಾ ಕೂದಲು ರಫ್ತು ಆಗುವುದರಿಂದ ಮೇಕ್ ಇನ್ ಇಂಡಿಯಾ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ನುಡಿದರು ಸಭೆಯಲ್ಲಿ ಕೂದಲು ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ವೃಂದ ಹಾಜರಿದ್ದರು ಕೊನೆಯದಾಗಿ ವಂದನಾರ್ಪಣೆಯನ್ನು ಸಂಘದ ಸದಸ್ಯರಾದ ಶ್ರೀಧರ್ ಹುರಕಡ್ಲಿ ಅವರು ನೆರವೇರಿಸಿದರು