ಪತ್ರಕರ್ತರಿಂದ ಸಮಾಜ ಬದಲಾವಣೆ ಸಾದ್ಯ : ಬಸವರಾಜ ಉಳ್ಳಾಗಡ್ಡಿ

Get real time updates directly on you device, subscribe now.


ಯಲಬುರ್ಗಾ:ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಪತ್ರಕರ್ತರ ಪಾತ್ರ ಬಹು ಮುಖ್ಯವಾಗಿದ್ದು, ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತನ ಬರವಣಿಗೆಯೂ ಸಮಾಜದ ಏಳಿಗೆಗೆ ಸಹಾಯವಾಗಬೇಕು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.
ಪಟ್ಟಣದ ಎಸ್.ಎ.ನಿಂಗೋಜಿ ಬಿಇಡಿ ಕಾಲೇಜಿನಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತತರ ಸಂಘದ ತಾಲೂಕು ಘಟಕದ ಸಯುಂಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಬಹುದಿನದ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿಯವರ ಗಮನಕ್ಕೆ ತಂದು ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ, ತಾಲೂಕಿನ ಅಭಿವೃದ್ದಿಯಲ್ಲಿ ಪತ್ರಕರ್ತರ ಪಾತ್ರವು ಬಹುಮುಖ್ಯವಾಗಿದೆ. ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ, ಹೊಸದಾಗಿ ಪ್ರವೇಶ ಮಾಡುವ ಯುವ ಪತ್ರಕರ್ತರು ಹೆಚ್ಚೆಚ್ಚು ಅಧ್ಯಯನ ಶೀಲರಾಗಬೇಕು ಎಂದರು.
ತಹಸೀಲ್ದಾರ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದರ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆಎ ವಿಶೇಷ ಸ್ಥಾನಮಾನವಿದೆ. ಪತ್ರಕರ್ತರು ಭಾಷಾ ಪಾಂಡಿತ್ಯದ ಜೊತೆಗೆ ಸಾಹಿತ್ಯದ ಅಭಿರುಚಿ ಬೆಳಸಿಕೊಳ್ಳಬೇಕು, ವಿಶೇಷವಾಗಿ ಸ್ಪರ್ಧಾತ್ಮಕ ಅಧ್ಯಯನ ಮಾಡುವವರಿಗೆ ಪತ್ರಿಕೆಗಳ ಬಹಳ ಉಪಯುಕ್ತವಾಗಿವೆ ಎಂದರು.
ಬಿಜೆಪಿ ಮುಖಂಡ ವೀರಣ್ಣ ಹುಬ್ಬಳ್ಳಿ ಮಾತನಾಡಿ ಪತ್ರಕರ್ತರ ವೃತ್ತಿ ಅತ್ಯಂತ ಕ್ಲಿಷ್ಟಕರ ವೃತ್ತಿಯಾಗಿದೆ. ಸಮುದಾಯದ ಜನರ ಭಾವನೆಗಳಿಗೆ ತಕ್ಕಂತೆ ಸೂಕ್ಷö್ಮ ರೀತಿಯಲ್ಲಿ ವರದಿ ಮಾಡಬೇಕು, ಮೇಘಾಲಯ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ವಿಜಯಶಂಕರ್ ನಮ್ಮ ತಾಲೂಕಿನ ಬಿನ್ನಾಳದವರು ಎಂಬುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ಸAಘದ ಜಿಲ್ಲಾ ಅಧ್ಯಕ್ಷ ಬಸವರಾಜ ಗೂಡ್ಲಾನೂರು, ರಾಜ್ಯ ಸಮಿತಿ ಸದಸ್ಯ ಹೆಚ್.ಎಸ್.ಹರೀಶ, ಎಂ ಸಾದಿಕ ಅಲಿ, ರಾಷ್ಟಿçÃಯ ಸಮಿತಿ ಸದಸ್ಯ ಜಿ.ಎಸ್.ಗೋನಾಳ ಮಾತನಾಡಿದರು. ಪ್ರಾಸ್ತವಿಕವಾಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲು ಮಾಟರಂಗಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಮೂರ್ತಿ ಇಟಗಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್‌ಐ ವಿಜಯಪ್ರತಾಪ, ಮುಖ್ಯಾಧಿಕಾರಿ ನಾಗೇಶ, ನಿಂಗೋಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎ.ನಿಂಗೋಜಿ, ಡಾ.ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಳ್ಳಿ, ಮಹೇಶ ಭೂತೆ, ಕಳಕಪ್ಪ ತಳವಾರ, ಶಿಕ್ಷಕರಾದ ಬಸವರಾಜ ಅಂಗಡಿ, ಮೈಹಿಬೂಬ ಬಾದಶಾಹ, ಗೌರವ ಅಧ್ಯಕ್ಷ ಇಮಾಂಸಾಬ ಸಂಕನೂರು, ಸಿಬ್ಬಂದಿ ವಿರೇಶ ಹೊಣ್ಣೂರು, ಪತ್ರಕರ್ತರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಇತರರು ಇದ್ದರು.
ಫೋಟೊ29ವೈಎಲ್‌ಬಿ-1:ಯಲಬುರ್ಗಾಪಟ್ಟಣದ ಎಸ್.ಎ.ನಿಂಗೋಜಿ ಬಿಇಡಿ ಕಾಲೇಜಿನಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತತರ ಸಂಘದ ತಾಲೂಕು ಘಟಕದ ಸಯುಂಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಉದ್ಘಾಟಿಸಿದರು

Get real time updates directly on you device, subscribe now.

Comments are closed.

error: Content is protected !!
%d bloggers like this: