ವಯೋ ನಿವೃತ್ತಿ ಜಿಲ್ಲಾ ಪೊಲೀಸ್ ವತಿಯಿಂದ ಬೀಳ್ಕೋಡುಗೆ
ಪೊಲೀಸ್ ಇಲಾಖೆಯಲ್ಲಿ 31 ರಿಂದ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದುತ್ತಿರುವ ಸಿದ್ದಲಿಂಗಪ್ಪ ತಮ್ಮಣ್ಣವರ್ ಎಎಸ್ಐ ಕೊಪ್ಪಳ ಗ್ರಾಮೀಣ ಠಾಣೆ, ರಾಮನಗೌಡ ಎಎಸ್ಐ ಹನಮಸಾಗರ ಪೊಲೀಸ್ ಠಾಣೆ, ರವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಸೇರಿದಂತೆ ನಿವೃತ್ತಿ ಹೊಂದುತ್ತಿರುವ ಅಧಿಕಾರಿಗಳ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
Comments are closed.