ಮಾತೃ ಹೃದಯ,ಕ್ರಿಯಾಶೀಲ ಮತ್ತುಅಕ್ರಮಣಕಾರಿ ನಾಯಕತ್ವದ ಪ್ರಾಚಾರ್ಯ ಪ್ರೊ.ತಿಮ್ಮಾರಡ್ಡಿ ಮೇಟಿ

Get real time updates directly on you device, subscribe now.


ಕೊಪ್ಪಳದ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಚಾರ್ಯರಾದಪ್ರೊ.ತಿಮ್ಮರಡ್ಡಿ ಮೇಟಿಯವರು ಬಹಳಕ್ರಿಯಾಶೀಲ, ಶಿಸ್ತಿನ ಸಿಪಾಯಿ, ಪ್ರಮಾಣಿಕಮತ್ತುದಕ್ಷ ಅಡಳಿತಗಾರರಾಗಿದ್ದಾರೆ.ಇವರುಕೊಪ್ಪಳ ಮತ್ತು ಸುತ್ತ ಮುತ್ತಜಿಲ್ಲೆಯ ಶಿಕ್ಷಣ ಲೋಕಕ್ಕೆ ಚಿರಪರಿಚಿತರು.ಕೊಪ್ಪಳ ಜಿಲ್ಲೆಯ ಹಿರಿಯ ಪ್ರಾಧ್ಯಾಪಕರಾದ ಮತ್ತು ಪ್ರಾಚಾರ್ಯರಾದ ಪ್ರೊ.ತಿಮ್ಮರಡ್ಡಿ ಮೇಟಿಯವರುಇದೇಜುಲೈ ೩೧, ೨೦೨೪ ರಂದು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಯಾಗುತ್ತಿದ್ದಾರೆ.
ಇವರುಕಲ್ಯಾಣಕರ್ನಾಟಕದ ಸರಕಾರಿ ಪ್ರಥಮದರ್ಜೆ ಕಾಲೇಜಿಗಳಾದ ಸಿಂದನೂರು, ಗಂಗಾವತಿ, ಹೊಸಬಂಡಿ ಹರ್ಲಾಪುರ ಹಾಗೂ ಇನ್ನಿತರ ಕಾಲೇಜಿಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಕೊಪ್ಪಳದ ಸರಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ನಿವೃತ್ತಿಯಾಗುತ್ತಿದ್ದಾರೆ.
ಕೊಪ್ಪಳದ ಸರಕಾರಿ ಪ್ರಥಮದರ್ಜೆಕಾಲೇಜಿನಪ್ರಾಚಾರ್ಯರಾದಪ್ರೊ.ತಿಮ್ಮರಡ್ಡಿ ಮೇಟಿಯವರು ಸೌಮ್ಯ ಸ್ವಾಭವ, ಸರಳ ವ್ಯಕ್ತಿತ್ವ, ಮೃದು ಸ್ವಾಭವ, ಸಹನಭೂತಿಮತ್ತು ನೇರ ನುಡಿವ್ಯಕ್ತಿತ್ವಹೊಂದಿರವವರು.ನಾನು ಇಷ್ಟು ದೊಡ್ಡ ಲೀಡ್‌ಕಾಲೇಜಿನ ಪ್ರಾಚಾರ್ಯಎನ್ನುವಆಹಂಕಾರವಿಲ್ಲದವರು.ಇವರಿಗೆಅದರ್ಶ ಗುರುಗಳಿಗೆ, ದಕ್ಷಆಡಳಿತಗಾರರಿಗೆ ಮತ್ತುಉತ್ತಮನಾಯಕತ್ವಕ್ಕೆಇರಬೇಕಾದಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದಾರೆ.
ಪ್ರಾಚಾರ್ಯರಾದಪ್ರೊ.ತಿಮ್ಮರಡ್ಡಿ ಮೇಟಿಯವರು ಬೀಮರಡ್ಡಿ ಮೇಟಿ ಮತ್ತುತಿಮ್ಮವ್ವ ದಂಪತಿಗಳಿಗೆ ಹಿರಿಯ ಮಗನಾಗಿ ೮-೧೦-೧೯೬೪ ರಲ್ಲಿ ಬಳ್ಳಾರಿ ಜಿಲ್ಲೆಯ ಮತ್ಕೂರುಗ್ರಾಮದಲ್ಲಿ ಜನಿಸಿದರು.ಇವರುತಮ್ಮ ಪ್ರಾಥಮಿಕ ಮತ್ತುಪ್ರೌಢಶಿಕ್ಷಣವನ್ನು ಬಳ್ಳಾರಿ ಜಿಲ್ಲೆಯಮುತ್ಕೂರ್, ತೇಲಗೋಳಿ ತಂಬ್ರಹಳ್ಳಿ ಮತ್ತು ಕೊಪ್ಪಳ ತಾಲ್ಲೂಕಿನ ಹಿರೆಸಿಂಧೋಗಿಯಲ್ಲಿ ಓದಿದ್ದಾರೆ. ತಮ್ಮ ಪಿಯುಸಿಯನ್ನು ಹೊಸಪೇಟೆಯ ವಿಜಯನಗರಕಾಲೇಜಿನಲ್ಲಿ ಮತ್ತುಬಿಕಾಂ ಪದವಿ ಮತ್ತು ಎಂ.ಕಾಂ ಸ್ನಾತಕೊತ್ತರ ಪದವಿಯನ್ನುಬೆಳಗಾವಿಯಗೋಗಟೆಕಾಲೇಜುಆಫ್‌ಕಾಮರ್ಸ್‌ನಲ್ಲಿ ಪಡೆದಿದ್ದಾರೆ.
ಪ್ರಾಚಾರ್ಯರಾದಪ್ರೊ.ತಿಮ್ಮರಡ್ಡಿ ಮೇಟಿಯವರುಕಾಲೇಜಿನಲ್ಲಿಖಾಯಂಉಪನ್ಯಾಸಕರು ಮತ್ತುಅತಿಥಿಉಪನ್ಯಾಸಕರು ಎಂಬ ತಾರತಮ್ಯ ಮತ್ತು ನಿಷ್ಪಕ್ಷಪಾತ ಮಾಡುವುದಿಲ್ಲ. ಎಲ್ಲರೊಂದಿಗೆ ವಿವೇಕಯುತವಾಗಿಮತ್ತುನ್ಯಾಯೋಚಿತವಾಗಿ ವರ್ತಿಸುತ್ತಾರೆ.ತಾವು ಕೆಲಸ ಮಾಡಿದಎಲ್ಲಕಾಲೇಜಿನಉಪನ್ಯಾಸಕರಿಗೆ ಮಾರ್ಗದರ್ಶಕರಾಗಿ ಮತ್ತುಅತ್ಮೀಯ ಗೆಳೆಯರಾಗಿ ಅವರುಜೊತೆ ಬಹು ಬೇಗನೆ ಹೊಂದಿಕೊಳ್ಳು ಸ್ವಾಭವದವರು.
ತಮ್ಮ ಭೊಧನೆಯ ವಿಷಯಯದಲ್ಲಿ ಮತ್ತುಇನ್ನಿತರ ವಿಷಯಗಳಲ್ಲಿಅಪಾರವಾದಜ್ಞಾನವನ್ನು ಹೊಂದಿದ್ದಾರೆ.ಕಾಲೇಜಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಯಾವುದೇ ವಿಷಯವಿರಲಿ ಅದರಕುರಿತು ನಿರರ್ಗಳವಾಗಿ ಮತ್ತು ಸಮಗ್ರವಾಗಿ ಮಾತನಾಡುತ್ತಾರೆ.
ಇವರುಯಾವುದೇಕಾಲೇಜಿನಲ್ಲಿ ಸೇವೆ ಮಾಡಿದರೂಅಲ್ಲಿನ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿರುತ್ತಾರೆ.ಹಾಗೆಯೇ ಪ್ರಸ್ತುತತಾವುಕರ್ತವ್ಯ ನಿರ್ವಹಿಸುತ್ತಿರುವಕಾಲೇಜಿನ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುಗಳು ಆಗಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುತ್ತಿದ್ದಾರೆ.ಇವರು ಮಾತೃ ಹೃದಯ ಹೊಂದಿರುವುದರಿಂದಆಪಾರವಾದ ವಿದ್ಯಾರ್ಥಿ ಬಳಗವನ್ನು ಹೊಂದಿದ್ದಾರೆ.
ಪ್ರತಿ ದಿನ ಬೆಳಿಗ್ಗೆಯಿಂದ ಸಾಯಂಕಾಲ ೬ ರಿಂದ ೭ ಗಂಟೆವರೆಗೆಕಾಲೇಜಿನಲ್ಲಿರುತ್ತಾರೆ.ಕಾಲೇಜಿನಲ್ಲಿಎನಾದರೂ ಕೆಲಸವಿದ್ದರೆರಾತ್ರಿ ೯ ರಿಂದ ೧೦ ಗಂಟೆಯವರಿಗೆಅವರುಕಾಲೇಜಿನಲ್ಲಿಇದ್ದಿದ್ದು ನಾನೇ ಎಷ್ಟೋ ಬಾರಿ ನೋಡಿದ್ದೆನೆ.ಇವರಿಗೆಇರುವ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವ ಸಮಯ ಪ್ರಜ್ಞೆಯಿದೆ.
ಇವರು ಪ್ರಾಚಾರ್ಯರಾಗಿರುವ ಕಾಲವಾಧಿಯಲ್ಲಿ ಕೊಪ್ಪಳದ ಸರಕಾರಿ ಪ್ರಥಮದರ್ಜೆಕಾಲೇಜುಎರಡು ಬಾರಿಯುಜಿಸಿಯ ನ್ಯಾಕ್‌ಗೆ ಹೋಗಿದೆ.ಒಂದು ಬಾರಿ ನ್ಯಾಕ್‌ಲ್ಲಿ ಬಿ ಗ್ರೇಡ್ ಮತ್ತು ೨೦೨೨-೨೩ ಸಾಲಿನಲ್ಲಿ ನ್ಯಾಕ್ ಎ ಗ್ರೇಡ್ ಪಡೆದುಕೊಂಡಿದೆ.ಕಳೆದ ವರ್ಷ ನ್ಯಾಕ್‌ಲ್ಲಿ ಎ ಗ್ರೇಡ್ ಪಡೆಯಲು ಪ್ರೊ.ತಿಮ್ಮರಡ್ಡಿಯವರಜವಬ್ದಾರಿ, ನಾಯಕತ್ವ, ಕ್ರಿಯಾಶೀಲತೆ, ಶ್ರಮ, ಜಾಣ್ಮೆ, ತಾಳ್ಮೆ ಮತ್ತು ಕೌಶಲ ಬಹಳ ಪ್ರಮುಖವಾದದ್ದು.
ಪ್ರೊ.ತಿಮ್ಮರಡ್ಡಿಯವರುಯಾವುದೇ ಸಮಸ್ಯೆಯಿರಲಿ ಅದನ್ನುಕ್ಷಣಮಾತ್ರದಲ್ಲಿ ಪರಿಹರಿಸುವಚಾಣಕ್ಷತನಅವರಲ್ಲಿದೆ.ಕಾಲೇಜು ಶಿಕ್ಷಣ ಇಲಾಖೆ, ಜಂಟಿ ನಿರ್ದೇಶಕರು ಮತ್ತು ವಿಶ್ವವಿದ್ಯಾಲಯಗಳು ಯಾವುದೇಜವಾಬ್ದಾರಿಕೊಟ್ಟರೂಅದನ್ನು ಬಹಳ ಅಚ್ಚು ಕಟ್ಟಾಗಿ ನಿರ್ವಹಿಸುವ ನಾಯಕತ್ವ ಮತ್ತುಚಿಂತನಕ್ರಮಅವರಲ್ಲಿದೆ.
ಕಾಲೇಜಿನಲ್ಲಿಯಾವುದೇ ಕಾರ್ಯಕ್ರಮಗಳ, ಸಮಸ್ಯೆಗಳ ಮತ್ತು ಯೋಜನೆಗಳ ಕುರಿತು ಸರಿಯಾದ ಸಮಯದಲಿ ಸರಿಯಾದ ನಿರ್ಣಯವನ್ನುತೆಗೆದುಕೊಂಡು ಅವುಗಳನ್ನು ಯಶಶ್ವಿ ಮಾಡುವಚಾಣಕ್ಷತನ, ಯೋಜನೆ ಮತ್ತು ಅಕ್ರಮಣಶೀಲ ನಾಯಕತ್ವ ಪ್ರೊ.ತಿಮ್ಮರಡ್ಡಿ ಮೇಟಿಯವರಲ್ಲಿದೆ.ತಮಗೆ ಸಿಕ್ಕಿದ ಅಧಿಕಾರವನ್ನುಎಂದೂಕೂಡದುರುಪಯೋಗ ಪಡಿಸಿಕೊಂಡಿಲ್ಲ.
ಕೊಪ್ಪಳದ ಹೃದಯ ಭಾಗದಲ್ಲಿರುವ ಸರಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಬಿ.ಎ, ಬಿ.ಎಸ್ಸಿ ಮತ್ತು ಬಿಕಾಂ ವಿಭಾಗಳಿವೆ. ಅಲ್ಲಿ ಸುಮಾರು ಮೂರು ಸಾವಿರ ವಿದ್ಯಾಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ನೂರುಜನಉಪನ್ಯಾಸಕರುಕರ್ತವ್ಯ ನಿರ್ವಹಿಸಿಸುತ್ತಿದ್ದಾರೆ.ಇಷ್ಟು ದೊಡ್ಡಕಾಲೇಜಿನಲ್ಲಿ ಪ್ರತಿ ನಿತ್ಯ ನೂರಾರು ಸಮಸ್ಯೆಗಳು ಇರುತ್ತವೆ. ಅವುಗಳೆಲ್ಲವನ್ನು ಪರಿಹರಿಸಿ ಕಾಲೇಜುನ್ನು ಬಹಳ ಸುಲಲಿತವಾಗಿ ನಿರ್ವವಹಿಸಿಕೊಂಡು ಹೋಗುತ್ತಿದ್ದಾರೆ.
ಪ್ರೊ.ತಿಮ್ಮರಡ್ಡಿ ಮೇಟಿಯವರುಇವರು ೨೦೧೮ರಲ್ಲಿ ಮಧ್ಯಪ್ರದೇಶದ ಭುವನೆಶ್ವರಿನಲ್ಲಿ ನಡೆದಅಂತರಾಷ್ಟ್ರೀಯ ವಾಣಿಜ್ಯ ಸಮ್ಮೆಳನದಲ್ಲಿ ಪಾಲ್ಗೊಂಡಿದ್ದಾರೆ.ಯುಜಿಸಿಯ ಜರ್ನಲ್‌ಗಳಲ್ಲಿ, ರಾಷ್ಟ್ರೀಯ ಮಟ್ಟದ ಮತ್ತುಅಂತರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳನ್ನು ವಾಣಿಜ್ಯಶಾಸ್ತ್ರಕ್ಕೆ ಸಂಬಂದಿಸಿದ ಹಲವಾರು ಲೇಖನಗಳನ್ನು ಬರೆದಿದಾರೆ.ಇವರುಕರ್ತವ್ಯ ನಿರ್ವಹಿಸಿದ ಕಾಲೇಜಿಗಳಲ್ಲಿ ಹಲವಾರು ಕಾರ್ಯಗಾರಗಳನ್ನು ಮತ್ತುತರಬೇತಿ ಶಿಬಿರಗಳನ್ನು ಎರ್ಪಾಡಿಸಿದ್ದಾರೆ.೨೦೧೮ ರಲ್ಲಿತಾವೂಕರ್ತವ್ಯ ನಿರ್ವಹಿಸುತ್ತಿದ್ದ ಹೊಸಬಂಡಿಹರ್ಲಾಪುರ ಸರಕಾರಿ ಪ್ರಥಮದರ್ಜೆಕಾಲೇಜಿನಲ್ಲಿಯುಜಿಸಿಯ ನ್ಯಾಕ್‌ರಾಜ್ಯ ಮಟ್ಟದಕಾರ್ಯಗಾರವನ್ನು ಸಂಘಟಿಸಿದ್ದರು.ಈ ಕಾರ್ಯಗಾರವನ್ನು ಮೆಚ್ಚಿಕಾಲೇಜು ಶಿಕ್ಷಣ ಇಲಾಖೆಯ, ಕಲಬುರಗಿ ವಿಭಾಗದಜಂಟಿ ನಿರ್ದೇಶಕರ ಮೆಚ್ಚಗೆಗೆ ಪಾತ್ರವಾಗಿದೆ.
ಕಾಲೇಜಿನ ಕೆಲವು ಪರಿಹರಿಸಲಾಗದ ಮತ್ತುಕಷ್ಟಕರವಾದ ಪ್ರಕರಣಗಳನ್ನು ಸಮಯತೆಗೆದುಕೊಂಡು ಆ ವಿಷಯಗಳನ್ನು ಅರ್ಥ ಮಾಡಿಕೊಂಡು ಪರಿಣಾಮಕಾರಿಯಾಗಿ ವಿವರಿಸಿ ಅವುಗಳನ್ನು ಬಗೆಹರಿಸುತ್ತಾರೆ.ವಯಕ್ತಿಕ ಬಿನ್ನಾಭಿಪ್ರಾಯಗಳನ್ನು ಗೌರವಿಸುತ್ತಾರೆ.ಕೆಟ್ಟ ಹವ್ಯಾಸಗಳು, ಕೆಟ್ಟ ಅಭ್ಯಾಸಗಳನ್ನು ವಿದ್ಯಾರ್ಥಿಗಳಲ್ಲಿ ಹೊಗಲಾಡಿಸಲು ಪ್ರಯತ್ನಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಸ್ನೇಹಿತರಾಗಿ ಮತ್ತು ಪೋಷಕರಾಗಿ ಸಂಬಂಧಗಳನ್ನು ಇಟ್ಟುಕೊಂಡಿರುತ್ತಾರೆ.
ವಿದ್ಯಾರ್ಥಿಗಳಿಗೆಕಲಿಕೆಯಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟು ಹಾಕುತ್ತಾರೆ. ಹಾಗೆಯೇಕಾಲೇಜಿನ ತರಗತಿಗಳಲ್ಲಿ ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವಮಾನಆಗದಂತೆ ನೋಡಿಕೊಳ್ಳುತ್ತಾರೆ.ಇವರು ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿದ್ದಾರೆ.ಕಾಲೇಜಿನಲ್ಲಿಎಲ್ಲರೊಂದಿಗೆ ವಿನಮ್ರವಾಗಿದ್ದುಕೊಂಡು ಹಾಸ್ಯಯಿಂದ ಹೊಂದಿರುತ್ತಾರೆ.
ಇವರಿಗೆಆರೋಗ್ಯದಕುರಿತು ಬಹಳ ತಿಳುವಳಿಕೆಯಿರುವುದರಿಂದ ಬಹಳಷ್ಟು ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಸ್ನೇಹಿತರಿಗೆಆರೋಗ್ಯ, ಚಿಕಿತ್ಸೆ ಮತ್ತು ಕಾಯಿಲೆಗಳುಕುರಿತು ಮತ್ತು ಅವು ವಾಸಿಯಾಗಲೂ ಏನೆಲ್ಲ ಮಾಡಬೇಕೆಂದು ಮಾಹಿತಿಯನ್ನು ನೀಡುತ್ತಾರೆ.ನನಗೆ ಒಮ್ಮೆ ಹೆಚ್ಚು ಗ್ಯಾಸ್ಟ್ರಿಕ್ ಆಗಿದ್ದಾಗಅದಕ್ಕೆಎಲ್ಲಿಚಿಕಿತ್ಸೆ ತೆಗೆದುಕೊಳ್ಳಬೇಕು,ಯಾವರೀತಿಚಿಕಿತ್ಸೆ ತೆಗೆದುಕೊಳ್ಳಬೇಕು ಮತ್ತುಯಾವಜಾಗೃತಿಯಿಂದಇರಬೇಕೆಂದು ಮಾಹಿತಿ ನೀಡಿದರು.ಇವರುಇನ್ನೊಬ್ಬರಯೋಗಕ್ಷೇಮವನ್ನು ವಿಚಾರಿಸುತ್ತಇನ್ನೊಬ್ಬರಿಗೆ ಒಳ್ಳೆಯದಾಗುವುದನ್ನು ಬಯಸುತ್ತಾರೆ.
ಇವರು ಸಮಾಜದ ಬಗ್ಗೆ ಬಹಳ ಕಳ ಕಳಿ ಹೊಂದಿರುವವರು.ಬಡವರಕುರಿತು ಅನುಕಂಪ ಹೊಂದಿದ್ದಾರೆ.ತಮ್ಮಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಮಾರ್ಗದರ್ಶಕರಾದ್ದಾರೆ. ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಪ್ರೋತ್ಸಾಹ ಮತ್ತು ಸಹಾಯವನ್ನು ಮಾಡುತ್ತಿದ್ದಾರೆ.
ಉತ್ತಮ ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಹೊಂದಿರುವಕೊಪ್ಪಳ ಜಿಲ್ಲೆಯ ಹಿರಿಯ ಪ್ರಾಧ್ಯಾಪಕರಾದ ಮತ್ತು ಕೊಪ್ಪಳದ ಸರಕಾರಿ ಪ್ರಥಮದರ್ಜೆಕಾಲೇಜಿನ ಪ್ರಾಚಾರ್ಯರಾದಪ್ರೊ.ತಿಮ್ಮರಡ್ಡಿ ಮೇಟಿಯವರುಇದೇಜುಲೈ ೩೧, ೨೦೨೪ ರಂದು ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿಯಾಗುತ್ತಿದ್ದಾರೆ.ಇವರನಿವೃತ್ತಿಜೀವನ ಸುಖಕರವಾಗಿರಲಿ, ಅರೋಗ್ಯಕರವಾಗಿರಲಿ ಮತ್ತು ಬಹಳ ಸಂತೋಷವಾಗಿರಲಿಎಂದು ಆಶಿಸೋಣ.
ಪ್ರೊ.ತಿಮ್ಮರಡ್ಡಿ ಮೇಟಿಯವರ ಸಂಪರ್ಕದ ಸಂಖ್ಯೆ :೬೩೬೨೪೮೭೦೯೮.
-ಡಾ.ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು, ಪತ್ರಿಕೊದ್ಯಮ ವಿಭಾಗ
ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಕೊಪ್ಪಳ
ಒobiಟe : ೯೯೦೨೯೨೭೯೪೫

 

 

Get real time updates directly on you device, subscribe now.

Comments are closed.

error: Content is protected !!