ಕುಷ್ಟಗಿ ರೈಲ್ವೆ ಸ್ಟೇಷನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ
ಕುಷ್ಟಗಿ ; ಸಂಸದ ರಾಜಶೇಖರ ಹಿಟ್ನಾಳ ನೂತನವಾಗಿ ನಿರ್ಮಾಣವಾಗಿರುವ ಕುಷ್ಟಗಿ ರೈಲ್ವೆ ಸ್ಟೇಷನ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. . ಈಗಾಗಲೇ ಪ್ರಾಯೋಗಿಕ ರೈಲ್ವೆ ಚಾಲನೆ ನಡೆಸಿದ್ದು , ಅತೀ ಶೀಘ್ರದಲ್ಲೇ ಉದ್ಘಾಟನೆಗೊಳ್ಳಬೇಕಾಗಿರುವುದರಿಂದ ಬಾಕಿ ಉಳಿದ ಕಾಮಗಾರಿಯನ್ನು ಅತೀ ಜರೂರಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ದಿಶಾ ಕಮಿಟಿ ಸದಸ್ಯರಾದ ದೊಡ್ಡ ಬಸವನಗೌಡ ಬಯ್ಯಾಪುರ, ಉಮೇಶ್ ಮಂಗಳೂರು ಮತ್ತಿತರರಿದ್ದರು.
Comments are closed.