ಕರಾಟೆ ತರಬೇತಿ ಪುನಾರಂಭಕ್ಕೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಕರಾಟೆ ಮೌನೇಶ ಮನವಿ
ಸ್ವಯಂ ಆತ್ಮ ರಕ್ಷಣೆಗೆ ಕರಾಟೆ ತರಬೇತಿ ಯೋಜನೆಯು ಮುಂದುವರೆಸಲು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರಿಗೆ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಮನವಿ
ಕೊಪ್ಪಳ : ರಾಜ್ಯದ ಎಲ್ಲ ವಸತಿ ಶಾಲೆಗಳಲ್ಲಿನ ಹಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ಕೌಶಲ್ಯ ಕರಾಟೆ ತರಬೇತಿ ಪುನಾರಂಭಿಸುವ ಮೂಲಕ ಕರಾಟೆ ಶಿಕ್ಷಕರ ಜೀವನ್ನಕೆ ಅನುಕೂಲ ಮಾಡಿಕೊಡಲು ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ವಕ್ತಾರರಾದ ಮೌನೇಶ ಎಸ್ ವಡ್ಡಟ್ಟಿ, ಶಿವಕುಮಾರ ಶಾರದಳ್ಳಿ ರವರು ಮನವಿ ಸಲ್ಲಿಸಿ ವಿವರಿಸಿದ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದವರು ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಮಾನಭಂಗ ಮುಂತಾದ ಅಮಾನವಿಯ ದೌರ್ಜನ್ಯಗಳನ್ನು ತಡೆಗಟ್ಟಲು ಸಿ.ಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ತರಬೇತಿ ನಿಡಬೇಕೆಂದು ತಿರ್ಮಾನಿಸಿ ರಾಜ್ಯದಲ್ಲಿನ ಆರ್‌ಎಂಎಸ್‌ಎ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ ಮಾತ್ರ ಕರಾಟೆ ತರಬೇತಿ ಆರಂಭಿಸಿ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಿದರು.
ಸಮಾಜ ಕಲ್ಯಾಣ ಹಾಗೂ ಹಿಂದುವಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಕಿತ್ತೂರು ರಾಣಿ ಚನ್ನಮ್ಮ, ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಮತ್ತು ಮೇಟ್ರಿಕ್ ನಂತರ, ಪೂರ್ವದ ವಸತಿ ಶಾಲೆಗಳಿಗೂ ಅದನ್ನು ವಿಸ್ತರಿಸಿ ಹೆಣ್ಣು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮ ವಿಶ್ವಾಸ ತುಂಬಿದರು.
ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕರಾಟೆ ಪ್ರದರ್ಶನವನ್ನು ಏರ್ಪಡಿಸಿದ್ದು ಎಲ್ಲರೂ ಮೆಚ್ಚಿಕೊಂಡರು. ಸದ್ಯ ಸದರಿ ತರಬೇತಿ ಕಾರಾಣಂತರಗಳಿಂದ ಸ್ಥಗಿತಗೊಂಡಿದ್ದು, ತಮ್ಮಿಂದ ಆರಂಭವಾದ ಈ ಯೋಜನೆಯು ಈಗ ಪುನಃ ತಮ್ಮಿಂದಲೇ ಪುನಾರರಂಭಿಸಿ ಹೆಣ್ಣು ಮಕ್ಕಳಿಗೆ ಧೈರ್ಯ ನೀಡುವುದಲ್ಲದೆ ನಮ್ಮಂತಹ ನಿರುದ್ಯೋಗಿ ಕರಾಟೆ ತರಬೇತಿದಾರರ ಜೀವನ ಮತ್ತು ಕುಂಟುಂಭಗಳಿಗೆ ನೆರವಾಗಲು ತರಬೇತಿ ಮುಂದುವರೆಸಬೇಕು ಹಾಗೂ ರಾಜ್ಯದ ಎಲ್ಲ ಸರ್ಕಾರಿ, ಅರೇಸರ್ಕಾರಿ, ಅನುದಾನಿತ ಪ್ರೌಢ ಶಾಲೆ, ಕಾಲೇಜುಗಳಲ್ಲಿ ಸ್ವಯಂ ರಕ್ಷಣಾ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಹೆಚ್ಚಿನ ಮಹತ್ವ ನೀಡಿ ಪುನಾರಂಭಿಸಬೇಕೆಂದು ವಿಧಾನಸೌಧದ ಕಛೇರಿಯಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
Comments are closed.