ಅನುಭವ ಮಂಟಪ- ಬಸವಾದಿ ಶರಣರ ವೈಭವದ ರಥಯಾತ್ರೆ

Get real time updates directly on you device, subscribe now.

ಬಾಗಲಕೋಟೆಯ ಕೂಡಲಸಂಗಮದಲ್ಲಿ ನಡೆಯಲಿರುವ ಅನುಭವ ಮಂಟಪ- ಬಸವಾದಿ ಶರಣರ ವೈಭವದ ರಥಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಗುರುವಾರ ಚಾಲನೆ ನೀಡಿ, ಕಾರ್ಯಕ್ರಮದ‌ ಲಾಂಛನ ಬಿಡುಗಡೆಗೊಳಿಸಿದರು.‌ ಈ ಸಂದರ್ಭದಲ್ಲಿ ನಿಜಗುಣನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ‌ ಶರಣ ಪ್ರಕಾಶ್ ಪಾಟೀಲ್,‌ ಸಾಹಿತಿ ಹಂಪ ನಾಗರಾಜಯ್ಯ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

ರಥದಲ್ಲಿ ಏನಿದೆ?
ಏ. 29ಕ್ಕೆ ಕೂಡಲಸಂಗಮ ತಲುಪಲಿರುವ ರಥ ಯಾತ್ರೆ
ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥದಲ್ಲಿ ಬಸವಣ್ಣ ಅವರೊಂದಿಗೆ ಡಾ. ಬಿ.ಆರ್‌. ಅಂಬೇಡ್ಕರ್‌, ಭಗವಾನ್‌ ಬುದ್ಧ, ಅಕ್ಕಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ್‌, ಭಗವಾನ್‌ ಮಹಾವೀರ, ನಾರಾಯಣಗುರು, ಯೇಸು ಕ್ರಿಸ್ತರ ಪುತ್ಥಳಿಯನ್ನು ಅಳವಡಿಸಲಾಗಿದೆ.

ಎಲ್ಲಿಲ್ಲಿ ಸಂಚಾರ:
ವಿಧಾನಸೌಧದಿಂದ ಗುರುವಾರ ಆರಂಭವಾಗಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಏ. 29ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಏ. 29ಕ್ಕೆ ಕೂಡಲ ಸಂಗಮ ತಲುಪಲಿದೆ. ಬೆಂಗಳೂರು ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ 1,177 ಕಿಮೀವರೆಗೆ ರಥ ಸಂಚರಿಸಲಿದೆ. ರಾಮನಗರ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಅಂತಿಮವಾಗಿ ಬಾಗಲಕೋಟೆಗೆ ತಲುಪಲಿದೆ. ಬಾಗಲಕೋಟೆಯಲ್ಲಿ ಬಾದಾಮಿ, ಇಳಕಲ್‌, ಮುಧೋಳ, ತೇರದಾಳ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಸಂಚರಿಸಿ ಅಂತಿಮವಾಗಿ ಏ. 29ರಂದು ಕೂಡಲ ಸಂಗಮಕ್ಕೆ ತಲುಪಲಿದೆ. ಏ. 30ರಂದು ಕೂಡಲಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಅಷ್ಟರೊಳಗೆ ರಥ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ.

Get real time updates directly on you device, subscribe now.

Comments are closed.

error: Content is protected !!