ಜನರಿಗೆ ಗ್ಯಾರಂಟಿ ಯೋಜನೆ ಸರಿಯಾಗಿ ತಲುಪಲಿ: ಕೆ.ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

  ರಾಜ್ಯ ಸರಕಾರ ಬಡವರಿಗೆ ಆರಂಭಿಸಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವದಿಲ್ಲ, ಜನರಿಗೆ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ಅಧಿಕರಿಗಳು ಮತ್ತು ಸಮಿತಿಯವರು ಶ್ರಮಿಸಬೇಕು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ನಗರದ ತಾಲ್ಲೂಕ ಪಂಚಾಯತಿಯಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಕೊಪ್ಪಳ ತಾಲ್ಲೂಕ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯಾಲಯವನ್ನು ಪ್ರಾರಂಭಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಸಮಾಜಮುಖಿ ಯೋಜನೆಯಾದ ಗ್ಯಾರಂಟಿ ಸ್ಕೀಂಗಳ ಸಮರ್ಪಕ ಅನುಷ್ಠಾನಕ್ಕೆ ಸರಕಾರೇತರ ಸಮಿತಿ ರಚನೆ ಮಾಡಿದ್ದು, ಮೂರು ಹಂತದ ಸಮಿತಿಯನ್ನು ರಚಿಸಲಾಗಿದೆ. 98% ಜನರಿಗೆ ಸೌಲಭ್ಯ ಸಿಕ್ಕಿದ್ದು, ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಸೌಲಭ್ಯ ಬಂದಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಸರಿ ಮಾಡಲಾಗುವದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳು ಐದು ವರ್ಷ ಪಕ್ಕಾ ಗ್ಯಾರಂಟಿ ಇರುತ್ತವೆ, ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳನ್ನು ಸಹ ನಂಬಬೇಡಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಾಲಚಂದ್ರನ್ ಸ್ಯಾಮುವೇಲ್, ಸದಸ್ಯ ಕಾರ್ಯದರ್ಶಿಗಳಾದ ದುಂಡಪ್ಪ ತುರಾದಿ, ಸದಸ್ಯರುಗಳಾದ ಜ್ಯೋತಿ ಮಂಜುನಾಥ ಗೊಂಡಬಾಳ, ದೇವರಾಜ ನಡುವಿನಮನಿ, ರಾಮಣ್ಣ ಚೌಡ್ಕಿ ಹಟ್ಟಿ, ಪರಶುರಾಮ ಕೊರವರ, ಅಶೋಕ ಗೋರಂಟ್ಲಿ, ಆನಂದಪ್ಪ ಕಿನ್ನಾಳ, ಲಕ್ಷö್ಮಣ ಡೊಳ್ಳಿನ್ ಮತ್ತು ಮಾನವಿ ಪಾಶಾ, ರಮೇಶ ಹ್ಯಾಟಿ ಭಾಗ್ಯನಗರ, ತಹಶೀಲ್ದಾರರಾದ ವಿಠ್ಠಲ ಚೌಗಲಾ, ಸಿಡಿಪಿಒ ಜಯಶ್ರೀ, ಕೆಇಬಿ ಎಇಇ ಸಲೀಂ, ಕೆಇಬಿ ಮುನಿರಾಬಾದಿನ ಸಂತೋಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: