ಕುರುಬ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ – ಜೂನ್ 30 ಕೊನೆಯ ದಿನಾಂಕ

Get real time updates directly on you device, subscribe now.

ಕನ್ನಡನೆಟ್ ಸುದ್ದಿ
ಕೊಪ್ಪಳ. ಜೂನ್ 21 – ಹಾಲುಮತ ಮಹಾಸಭಾದಿಂದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2023-24ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಕೊಪ್ಪಳ ನಗರದಲ್ಲಿ ಹೇಳಿದರು.
ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ದ್ವಿತೀಯ ವರ್ಷದ ಪಿಯುಸಿಯ ವಾಣಿಜ್ಯ,ಕಲಾ & ಶಿಕ್ಷಣ ವಿಭಾಗದಲ್ಲಿ ಶೇಕಡಾ 85ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ವಿಶೇಷವಾಗಿ ದ್ವಿತೀಯ ವರ್ಷದ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಅರ್ಜಿ ಪ್ರತಿಯೊಂದಿಗೆ 1.ಅಂಕಪಟ್ಟಿ 2) ಜಾತಿ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರ 3) ಎರಡು ಪಾಸ್ ಪೋರ್ಟ್ ಫೋಟೋ ದೊಂದಿಗೆ ಅರ್ಜಿಯನ್ನು ಶ್ರೀಲಕ್ಷ್ಮೀನಾರಾಯಣ ಜೆರಾಕ್ಸ್ ಸೆಂಟರ್-9611083605, ತಿಕೋಟಿಕರ್ ಪೆಟ್ರೋಲ್ ಬಂಕ್ ಹತ್ತಿರ ಸೆಂಟ್ರಲ್ ಬಸ್ ನಿಲ್ದಾಣ ಕೊಪ್ಪಳ, ಇಲ್ಲಿಗೆ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಗಳು ಶ್ರೀ ಲಕ್ಷ್ಮಿ ನಾರಾಯಣ ಜೆರಾಕ್ಸ್ ಸೆಂಟರ್ ನಲ್ಲಿ ಸಿಗುತ್ತವೆ.
ಹೆಚ್ಚಿನ ಮಾಹಿತಿಗಾಗಿ – ಹಾಲುಮತ ಮಹಾಸಭಾದ ತಾಲೂಕ ಗೌರವಾಧ್ಯಕ್ಷ ದ್ಯಾಮನಗೌಡ ಭೀಮನೂರು-9901741295 , ತಾಲೂಕ ಸಂಘಟನಾ ಕಾರ್ಯದರ್ಶಿ ಪರುಶುರಾಮ್ ಅಣ್ಣಿಗೇರಿ -9880498305, ತಾಲೂಕ ಕಾರ್ಯಧ್ಯಕ್ಷ ಅನ್ನದಾನಿಸ್ವಾಮಿ ಚಿಕ್ಕಸಿಂದೊಗಿ -917022176178, ತಾಲೂಕು ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಗೊರವರ್ – 9035512375, ತಾಲೂಕು ಉಪಾಧ್ಯಕ್ಷರಾದ ಪ್ರಕಾಶ್ ಬಿಕನಳ್ಳಿ-9686742563,
ತಾಲೂಕ ಘಟಕದ ಉಪಾಧ್ಯಕ್ಷ ಮಂಜುನಾಥ್ ಮ್ಯಾಗಳಮನಿ -9980486555, ಸಂಘಟನಾ ಕಾರ್ಯದರ್ಶಿ
ವಿನಾಯಕ ಏನ್ ಕುಷ್ಟಗಿ -6364174056 ,ಸಂಘಟನಾ ಕಾರ್ಯದರ್ಶಿ ರಮೇಶ -9611083605 ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು….

Get real time updates directly on you device, subscribe now.

Comments are closed.

error: Content is protected !!
%d bloggers like this: