ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬದ್ಧ-ಶಾಸಕ ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

— ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ 9.52 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಅಡಿಗಲ್ಲು.

ಕೊಪ್ಪಳ : ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಇಂದು ಬಂಡಿಹರ್ಲಾಪುರ ಜಿ. ಪಂ ವ್ಯಾಪ್ತಿಯ ಅಗಳಕೇರಿ, ಶಿವಪುರ, ಹೊಸ ಬಂಡಿಹರ್ಲಾಪುರ, ಹಳೇ ಬಂಡಿಹರ್ಲಾಪುರ, ಬಸಾಪುರ, ರಾಜಾರಾಮಪೇಟೆ, ನಾರಾಯಣಪೇಟೆ, ಅತ್ತಿವಟೆ, ಮಹಮದ್ ನಗರ ಹಾಗೂ ಕವಳಿ ಗ್ರಾಮಗಳಲ್ಲಿ ಅಂದಾಜು ಮೊತ್ತ 9.52 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕಳೆದ 11 ವರ್ಷಗಳಲ್ಲಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಪ್ರತಿ ಗ್ರಾಮಕ್ಕೂ ಕೂಡ ಸರಿ ಸಮನಾದ ಅನುಧಾನ ಹಂಚಿಕೆ ಮಾಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ.ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಆಗಬೇಕಿರು ಕೆಲಸಗಳು ಬಹಳಸ್ಟಿದ್ದು ಅನುಧಾನ ಮೀಸಲಿಟ್ಟು ಅವುಗಳನ್ನು ಹಂತ ಹಂತವಾಗಿ ಹಿಡೇರಿಸುವ ಪ್ರಯತ್ನವನ್ನು ಮಾಡುತ್ತೇನೆ.

ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ವರ್ಷ 5 ಸಾವಿರ ಕೋಟಿ ಅನುಧಾನ ಮಿಸಲಿಟ್ಟಿದೆ. ಇದರಿಂದ ನಮ್ಮ ಕ್ಷೇತ್ರದ ಹೆಚ್ಚಿಅಭಿವೃದ್ಧಿಗೆ ಕೂಡ ಸಹಕಾರಿ ಆಗುತ್ತಿದೆ ಎಂದರು.

ಡಿವೈಡರ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು :

ಕೊಪ್ಪಳ ಮತಕ್ಷೇತ್ರದ ಅಗಳಕೇರಿ ಹಾಗೂ ಹೊಸ ಬಂಡಿಹರ್ಲಾಪುರ ಗ್ರಾಮಗಳಲ್ಲಿ ಬಹುದಿನಗಳ ಬೇಡಿಕೆ ಆಗಿದ್ದ ಡಿವೈಡರ್ ನಿರ್ಮಾಣಕ್ಕೆ ತಲಾ ಗ್ರಾಮಕ್ಕೆ 2 ಕೋಟಿ ಅನುಧಾನ ಮಿಸಲಿಟ್ಟು ಶಾಸಕರು ಭೂಮಿಪೂಜೆ ನೆರವೇರಿಸಿದ್ದಾರೆ.ಡಿವೈಡರ್ ನಿರ್ಮಿಸಿ ಬಿದಿ ದೀಪ ಅಳವಡಿಸುವ ಕಾಮಗಾರಿ ಇದಾಗಿದೆ ಎಂದು ಶಾಸಕರು ತಿಳಿಸದರು.

ಹಳೇ ಬಂಡಿಹರ್ಲಾಪುರ ವ್ಯಾಪ್ತಿಯಲ್ಲಿ ಜಂಪ್ ಸರ್ವೇ ಕುರಿತು ದೊಡ್ಡ ಸಮಸ್ಯೆ ಇದ್ದು ಹೀಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ ಶೀಘ್ರದಲ್ಲಿ ಇದನ್ನೂ ನಿಮ್ಮೆಲ್ಲರ ಜೊತೆಗೂಡಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಸೆಪ್ಟೆಂಬರ್ 22ಕ್ಕೆ ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿಗಳು ಭೇಟಿ :

ತುಂಗಭದ್ರಾ ಜಲಾಶಯಕ್ಕೆ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭೇಟಿ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಭಾಗಿನ ಅರ್ಪಿಸಲಿದ್ದಾರೆ. ಆದ್ದರಿಂದ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಎಂದು ಜನರಲ್ಲಿ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಮಾಜಿ ಸಂಸದರದಾ ಸಂಗಣ್ಣ ಕರಡಿ, ವಾಣಿಜ್ಯೋದ್ಯಮಿ ಚಂದ್ರಶೇಖರ್ ಐಎಲ್ಸಿ, ಮಾಜಿ ಜಿ. ಪಂ ಅಧ್ಯಕ್ಷರಾದ ಜನಾರ್ಧನ್ ಹುಲಿಗಿ, ವೆಂಕಟೇಶ್ ಕಂಪಸಾಗರ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ, ಎಸ್ ಸಿ ಘಟಕದ ಜಿಲ್ಲಾದ್ಯಕ್ಷ ಗಾಳೆಪ್ಪ ಪೂಜಾರ್,ಪಾಲಾಕ್ಷಪ್ಪ ಗುಂಗಾಡಿ,ವಿಶ್ವನಾಥ್ ರಾಜು,ಚಂದಕೃಷ್ಣ,ರಂಗನಾಥ್, ಯಮನೂರಪ್ಪ ಬೋವಿ, ನಾಗರಾಜ್ ಪಟವಾರಿ, ಕನಕಪ್ಪ ಅಗಳಕೆರಿ,ಈರಣ್ಣ ಹುಲಿಗಿ, ಸೋಮಶೇಖರ್ ಹಿಟ್ನಾಳ, ಅಶೋಕ ಇಳಿಗೇರ್, ಉಪ ವಿಭಾಗಧಿಕಾರಿ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕಾ ಪಂಚಾಯತ್ ಇಓ ದುಂಡೇಶ್ ತುರಾದಿ, ಪಂಪಣ್ಣ ಪೂಜಾರ್, ಆಂಜನೇಯಲು, ಸಾರು ಬಂಡಿ ಹರ್ಲಾಪುರ, ಧರ್ಮಣ್ಣ ವಾಲ್ಮೀಕಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!