ದೇಶದ ಹಿತಕ್ಕಾಗಿ ಸಂವಿಧಾನ ರಕ್ಷಣೆಗಾಗಿ ಬಿಜೆಪಿ ಸೋಲಿಸಿ : ಕರಿಯಪ್ಪ ಗುಡಿಮನಿ
ಕೊಪ್ಪಳ : ದೇಶದ ಹಿತಕ್ಕಾಗಿ ಸಂವಿಧಾನ ರಕ್ಷಣೆಗಾಗಿ ಎಲ್ಲಾ ಸಮುದಾಯಗಳ ಉಳಿವಿಗಾಗಿ ಮತ್ತು ಶೋಷಿತ ಸಮುದಾಯಗಳಿಗೆ ಒಳ ಮೀಸಲಾತಿ ಪಡೆಯುವುದಕ್ಕಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಿ ಎಂದು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮನವಿ ಮಾಡಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅಸಮಾನತೆಯನ್ನು ಜೀವಾಳವಾಗಿಸಿಕೊಂಡಿರುವ ಬಿಜೆಪಿ ಪಕ್ಷವು ಶೋಷಿತ ಸಮುದಾಯಗಳನ್ನು ಯುವಕರನ್ನು ಎತ್ತಿ ಕಟ್ಟಿ ರಾಜಕೀಯ ದಾಳಕ್ಕೆ ಬಳಸಿಕೊಳ್ಳುತಿದೆ,ಬಿಜೆಪಿ ಆಮಿಷಗಳಿಗೆ ಯಾರು ಮರುಳಾಗದೆ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕಾಗಿದೆ,ಎಲ್ಲಾ ಸಾರ್ವಜನಿಕ ಸಂಸ್ಥೆಗಳ ವಲಯಗಳನ್ನು ಖಾಸಗಿಕರಿಸುತ್ತಾ ಈ ಮೂಲಕ ಮೀಸಲಾತಿಯ ಒಳಪೆಟ್ಟನ್ನು ನೀಡಿದೆ,ಬಿಜೆಪಿ ಅತ್ಯಂತ ಭ್ರಷ್ಟಾಚಾರದ ಪಕ್ಷವಾಗಿರುವುದಲ್ಲದೆ, ಧರ್ಮ ಜಾತಿಯ ಹೆಸರಿನಲ್ಲಿ ರಾಜಕೀಯಕ್ಕಾಗಿ ರಾಜಕೀಯ ನೀತಿಗೆ ಮಸಿ ಬಳಿದಿದೆ,ಸರ್ವಾಧಿಕಾರಿಯಾಗಿ ಬಿಜೆಪಿ ಕೇಂದ್ರ ಸರ್ಕಾರ ನೆರೆಯುತ್ತಿರುವುದು ದೇಶಕ್ಕೆ ಅವಮಾನವಾಗಿದೆ, ಬಿಜೆಪಿಯು ಸಂಘ ಪರಿವಾರದ ಸಾಮಾಜಿಕ ನ್ಯಾಯದ ವಿರೋಧಿ ನೀತಿಯನ್ನೇ ಅನುಸರಿಸುತ್ತದಲ್ಲದೆ ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ವಿರೋಧಿ ನೀತಿಗಳನ್ನೇ ಕೇಂದ್ರ ಸರ್ಕಾರ ಜಾರಿ ಮಾಡುತ್ತಾ ಬರುತ್ತಿದೆ, ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಎಂ ಆರ್ ವಿ ಯುವ ಮುಖಂಡರಾದ ಯಮನೂರಪ್ಪ ಇಳಿಗನೂರ್, ಧರ್ಮರಾಜ್ ಹೊಸಮನಿ,ದುರ್ಗೇಶ್ ಬರಗೂರು, ಸೋಮಪ್ಪ ಉಪಸ್ಥಿತರಿದ್ದರು.
Comments are closed.