ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಭೇಟಿಯಾದ ಸಿವಿಸಿ
ಕೊಪ್ಪಳ: ಜೆಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಅವರು ಸೋಮವಾರದಂದು ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಸಿ ಟಿ ರವಿ ಅವರನ್ನು ಚಿಕ್ಕಮಗಳೂರಿನ ಅವರ ನಿವಾಸದಲ್ಲಿ ಭೇಟಿಯಾದರು. ಚಂದ್ರಶೇಖರ್ ಅವರು ರವಿಯವರ ಆರೋಗ್ಯವನ್ನು ವಿಚಾರಿಸಿದರು. ಉಭಯ ನಾಯಕರು ಇತ್ತೀಚಿಗೆ ನಡೆದ ಘಟನೆಯ ಕುರಿತು ಚರ್ಚೆ ನಡೆಸಿದರು. ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕಾನೂನನ್ನು ಕೈಗೆತ್ತಿಕೊಂಡು ಸರಕಾರ ರವಿ ಅವರನ್ನು ಅಪರಾಧಿಯಂತೆ ನಡೆಸಿಕೊಂಡಿದ್ದು ಸೇಡಿನ ರಾಜಕಾರಣ ಎಂದು ಚಂದ್ರಶೇಖರ್ ಹೇಳಿದರು. ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯವರನ್ನು ಹೈಜಾಕ್ ಮಾಡಿ ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು. ಗೂಂಡಾಗಳನ್ನು ವಿಧಾನ ಸಭೆಯೊಳಗೆ ನುಗ್ಗಿಸಿದ್ದು ಸಂವಿಧಾನಕ್ಕೆ ಮಾಡಿದ ಅಪಚಾರ. . ರಾಜ್ಯ ಸರಕಾರದ ನಡೆಗೆ ಹೈಕೋರ್ಟ್ ನಲ್ಲಿ ಮಂಗಳಾರತಿಯಾಗಿದೆ. ರವಿ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಇದೆ ತಮ್ಮ ಬಳಿ ಇದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆ ವಿಡಿಯೋ ಫೇಕ್ ಎಂಬುದು ಅನಾವರಣಗೊಂಡಿದೆ ಎಂದು ಉಭಯ ನಾಯಕರು ತಿಳಿಸಿದರು.
ಸಿಬಿಐ ಹಾಗೂ ಇಡಿ ಇಲಾಖೆಗಳನ್ನು ಕೇಂದ್ರ ಸರಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿದ್ದು ಕಾಣಿಸಲಿಲ್ಲವೇ ಎಂದು ಕಿಡಿ ಕಾರಿದ್ದಾರೆ.
ಘಟನೆ ಕುರಿತು ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆ ನಡೆಸಬೇಕೆಂದು ಸಿ ವಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.