“MODERN MEDIA, ELECTIONS AND DEMOCRACY” ಕೃತಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

0

Get real time updates directly on you device, subscribe now.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಬಿ.ಕೆ.ರವಿ ಅವರ “MODERN MEDIA, ELECTIONS AND DEMOCRACY” ಕೃತಿಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಕಾವೇರಿ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಸ್ವಾತಂತ್ರ್ಯ ಸಂದರ್ಭದಿಂದ ಈ ಕ್ಷಣದವರೆಗೆ ದೇಶದಲ್ಲಿ ನಡೆದ ಚುನಾವಣೆಗಳು, ಚುನಾವಣಾ ರಾಜಕಾರಣ ಕುರಿತಂತೆ ಮಾಧ್ಯಮಗಳು ಕಾಲ ಕಾಲಕ್ಕೆ ಬದಲಾಗಿರುವುದು, ಚುನಾವಣಾ ಸ್ವರೂಪದಲ್ಲಿ ಆದ ಮಾರ್ಪಾಡುಗಳು, ಇವೆಲ್ಲದರಿಂದ ದೇಶದ ಪ್ರಜಾಪ್ರಭುತ್ವದ ಮೇಲೆ ಆಗಿರುವ ಪರಿಣಾಮಗಳ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ.

“ರಾಜಕೀಯ ಸಂವಹನ” ಕ್ಷೇತ್ರದ ಆಳವಾದ ಅಧ್ಯಯನದಿಂದ ಬಂದಿರುವ ಅಪರೂಪದ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ.

ಕೃತಿ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು, ಕೃತಿ ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲಿ ವಿಶ್ಲೇಷಣೆಗೆ ಒಳಗಾಗಿರುವುದರಿಂದ ರಾಜಕೀಯ ವಿಜ್ಞಾನ ಮತ್ತು ಮಾಧ್ಯಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗುತ್ತದೆ ಎಂದರು.

Get real time updates directly on you device, subscribe now.

Leave A Reply

Your email address will not be published.

error: Content is protected !!