ನಾದಯೋಗಿ ಗುರು ಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಯ ಗಾನ ನೃತ್ಯ ಲಹರಿ

0

Get real time updates directly on you device, subscribe now.


ಕೊಪ್ಪಳ: ನಾದಯೋಗಿ ಗುರು ಪುಟ್ಟರಾಜ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಯ ವತಿಯಿಂದ ಹೊಸಬಂಡಿ ಹರ್ಲಾಪುರ ಪ್ರೌಢ ಶಾಲೆಯ ಆವರಣದಲ್ಲಿ ಗಾನ ನೃತ್ಯ ಲಹರಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ ಎಸ್ ಸುಂಕದರವರು ಮಾತನಾಡಿ ಸಂಗೀತಕ್ಕೆ ಸೋಲದ ಮನಸ್ಸುಗಳಿಲ್ಲ ಸಂಗೀತಕ್ಕೆ ಸೋಲದೇ ಇದ್ದರೆ ಅವು ಮನಸ್ಸುಗಳೇ ಅಲ್ಲ ಎಂಬ ಗವಿಶ್ರೀಗಳ ಮಾತು ಈ ಕಾರ್ಯಕ್ರಮ ಆಯೋಜನೆಯಲ್ಲಿ ಅರಿವಾಗುತ್ತದೆ. ಮುಗ್ದ ಮನಸುಗಳಿಗೆ ಸಂಗೀತದ ರಸದೌತಣವನ್ನು ನೀಡಲೆಂದು ಶಾಲೆಗೆ ವಿಶೇ? ಕಾರ್ಯಕ್ರಮವನ್ನು ತಂದಿರುವ ಸಂಸ್ಥೆಯ ಪರವಾಗಿ ವಿಶೇ? ಧನ್ಯವಾದಗಳು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಈರಣ್ಣ ಕುಂಬಾರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ಣಿಮ, ರಮಿಜಾ ಬೇಗಂ, ಸೋಮಪ್ಪ ಡಿ, ಸೇಲ್ವರಾಜ್, ಸಯ್ಯದ್ ಮೆಹಬೂಬ್ ಹುಸೇನ್ ಮುಂತಾದವರು ಭಾಗವಹಿಸಿದ್ದರು.
ಶಾಲೆಯ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿವರಾಜಕುಮಾರ ಗೊಂಡಬಾಳರ ಬಾನ್ಸೂರಿ ವಾದನ, ಎಂ ಎ ವಂದಾಲರವರ ವಚನ ಸಂಗೀತ, ವೈದೇಹಿ ವ್ಯಾಸಮುದ್ರಿಯವರ ಸುಗಮ ಸಂಗೀತ, ಅಕ್ಷತಾ ಮೋನಿಯವರಿಂದ ಜನಪದ ಸಂಗೀತ, ರವಿ ಹಾಗೂ ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ಸೊಗಸಾಗಿ ಮೂಡಿ ಬಂದವು.
ವಾದ್ಯ ವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಬಾನ್ಸುರಿಯಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿಧಮ ಪ್ಯಾಡ್‌ನಲ್ಲಿ ಸಂಜನ ಬೆಲ್ಲದ ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!