ಕೊಪ್ಪಳ ಚಿಂತಕ ಶಿವಸುಂದರ ಆಗಮನ
ಕೊಪ್ಪಳ : ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಕೋಮುವಾದ ಸೋಲಿಸಿ ದೇಶ ಉಳಿಸಿ ಘೋಷವಾಕ್ಯದ ಚುನಾವಣೆ ಜಾಗೃತಿ ಸಮಾವೇಶದಲ್ಲಿ ಖ್ಯಾತ ಚಿಂತಕ ಶಿವಸುಂದರ ಭಾಗವಹಿಸಲಿದ್ದಾರೆ.
ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ 23-04-2024 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪ್ರಗತಿ ಪರ ಚಿಂತಕ ಶಿವಸುಂದರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಜಾಪ್ರಭುತ್ವವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕ ಹಾಗೂ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕೋರಿದ್ದಾರೆ.
Comments are closed.