ನೀರಾವರಿ ಯೋಜನೆ ಪೂರ್ಣಗೊಳಿಸಿ ಸ್ವಾತಂತ್ರೋತ್ಸವಕ್ಕೆ ಅರ್ಥ ತನ್ನಿ -ಸಿ ವಿ ಚಂದ್ರಶೇಖರ್
‘
ಕೊಪ್ಪಳ: ಸಿಂಗಟಾಲೂರ್ ಮತ್ತು ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಗಳನ್ನು ಸಮರೋಪಾದಿಯಲ್ಲಿ ಪೂರೈಸಿ ರೈತರ ಜಮೀನುಗಳಿಗೆ ನೀರು ಹರಿಸಿದರೆ ಮಾತ್ರ ಸ್ವಾತಂತ್ರೋತ್ಸವಗಳಂತಹ ರಾಷ್ಟ್ರೀಯ ಹಬ್ಬಗಳಿಗೆ ಅರ್ಥ ಬರಲು ಸಾಧ್ಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಅವರು ಮಾತನಾಡಿದರು.
“ಮೂವತ್ತು ವರ್ಷಗಳಾದರೂ ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಈಗಾಗಲೇ ಕೊಪ್ಪಳ ಮತ್ತು ಕುಕನೂರು ತಾಲೂಕುಗಳ 1.4 ಲಕ್ಷ ಎಕರೆ ಜಮೀನಿಗೆ ನೀರು ಹರಿಯಬೇಕಿತ್ತು. ಇನ್ನೂ ಸರಬರಾಜು ಕಾಲುವೆಗಳೇ ನಿರ್ಮಾಣಗೊಂಡಿಲ್ಲ. ಯೋಜನೆಗೆ ಜಮೀನು ಕೊಟ್ಟ ರೈತರಿಗೆ ಪರಿಹಾರ ವಿತರಿಸಿಲ್ಲ. ಈ ಯೋಜನೆಯಡಿ ಮಧ್ಯಪ್ರದೇಶ ಮಾದರಿಯ ನೀರಾವರಿ ವ್ಯವಸ್ಥೆಗೆ 134 ಕೋಟಿ ರೂಪಾಯಿ ಅಗತ್ಯವಿದೆ. ಮೂರು ದಶಕಗಳಾದರೂ ಯೋಜನೆ ಮುಗಿಯದಿರಲು ನಿಷ್ಕ್ರಿಯ ನಾಯಕತ್ವವೇ ಕಾರಣ,” ಎಂದು ಕಿಡಿಕಾರಿದರು.
ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ 2018ರಲ್ಲಿ ಅಧಿಕೃ
ತವಾಗಿ ಆರಂಭವಾಯಿತು. ಸರಕಾರ 2023 ನೇ ಬಜೆಟ್ ನಲ್ಲಿ 188 ಕೋಟಿ ಅನುದಾನ ಮೀಸಲಿಡಲಾಗಿತ್ತು. ಇಲ್ಲಿಯ ತನಕ 80 ಕೋಟಿ ಹಣ ಖರ್ಚಾಗಿದೆ. ಕಾಲುವೆಗಳು ಸರಿಯಾಗಿ ನಿರ್ಮಾಣವಾಗಿಲ್ಲ. ರೈತರ ಜಮೀನಿಗೆ ನೀರು ಹರಿದಿಲ್ಲ. ಸುಮಾರು 18 ಗ್ರಾಮಗಳ 14,000 ಎಕ್ಕರೆಗೆ ನೀರುಣಿಸುವ ಈ ಯೋಜನೆ ಹಳ್ಳ ಹಿಡಿಯಲು ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದರು.
ಕೊಪ್ಪಳದಿಂದ ಇಬ್ಬರು ಸಚಿವರಾಗಿದ್ದಾರೆ. ಅವರು ಸರಕಾರದ ಮೇಲೆ ಒತ್ತಡ ಹೇರಿ ಅಗತ್ಯ ಇರುವ ಅನುದಾನ ತಂದು ಒಂದು ವರ್ಷದ ಒಳಗಾಗಿ ಯೋಜನೆಗಳನ್ನು ಸಂಪೂರ್ಣಗೊಳಿಸಿ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಸ್ವತಂತ್ರೋತ್ಸವ ದಿನದಂದು ಅವರು ಕೊಡುವ ಭರವಸೆಗಳಿಗೆ ಅರ್ಥವೇ ಇರುವುದಿಲ್ಲ ಎಂದರು.
“ಯುವಕರು ನಿಶೆಯಿಂದ ಸ್ವತಂತ್ರ ಪಡೆಯುವುದು ಈ ಕ್ಷಣದ ಅಗತ್ಯ. ಗುಟ್ಕಾ ಮತ್ತು ಮಧ್ಯಪಾನಕ್ಕೆ ಯುವಶಕ್ತಿ ಬಲಿಯಾಗುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ. ಮಾದಕ ಪದಾರ್ಥಗಳಿಂದ ಅವರು ಮುಕ್ತವಾದರೆ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ,’ ಎಂದು ಮುಖ್ಯ ಅತಿಥಿಗಳಾದ ಡಾ. ಮಹೇಂದ್ರ ಕಿಂದ್ರೆ ಹೇಳಿದರು.
ಸ್ವತಂತ್ರ ಇತ್ತೀಚಿನ ದಿನಗಳಲ್ಲಿ ಸ್ವಚ್ಛಾಚಾರವಾಗುತ್ತಿದೆ. ನಾಯಕರ ಬಗ್ಗೆ ಕೀಳು ಭಾಷೆಯಲ್ಲಿ ಅವಹೇಳನ ಮಾಡಲಾಗುತ್ತದೆ. ಸ್ವಾತಂತ್ರ್ಯದ ದುರುಪಯೋಗ ತಡೆಯದೆ ಹೋದರೆ ಅನಾಹುತಗಳಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಯುವಕರು ಗಂಭೀರವಾಗಿ ಚಿಂತಿಸಬೇಕು ಎಂದು ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಹೇಳಿದರು.
“ದೇವೇಗೌಡರ ಕಾಲಘಟ್ಟದಲ್ಲಿ ನೀರಾವರಿ ಯೋಜನೆಗಳು ತ್ವರಿತ ಗತಿಯಲ್ಲಿ ಕೈಗೂಡಿದವು. ಅದೇ ಮಾದರಿಯನ್ನು ರಾಜ್ಯ ಸರಕಾರ ಇಂದು ಅನುಸರಿಸ ಬೇಕಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯಪ್ಪ ಗಿಣಿಗೇರಿ ಹೇಳಿದರು.
ನಮ್ಮನ್ನು ನಾವೇ ಆಳಿಕೊಂಡು ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು ಎಂಬ ಕಲ್ಪನೆಯಿಂದ ಸ್ವಾತಂತ್ರ್ಯ ದಕ್ಕಿತು. ಇದಕ್ಕೆ ವ್ಯತಿರಿಕ್ತ
ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಕಲುಷಿತ
ರಾಜಕೀಯ ಕ್ಷೇತ್ರವೇ ಕಾರಣ ಎಂದು ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಕರಿಯಪ್ಪ ಹಾಲವರ್ತಿ ಹೇಳಿದರು.
ಕೊಪ್ಪಳ ತಾಲೂಕು ಎಸ್‌ಸಿ ಘಟಕದ ಅಧ್ಯಕ್ಷ ಸುರೇಶ ಪೂಜಾರ ದದಗಲ್ ಹಾಗೂ ಜಿಲ್ಲಾ ಸಂಸ್ಕೃತಿ ಘಟಕದ ಅಧ್ಯಕ್ಷ ಮಂಜುನಾಥ
ಸೊರಟೂರು ಸ್ವತಂತ್ರಕ್ಕಾಗಿ ನಡೆದ ಹೋರಾಟಗಳ ಕುರಿತು ಮಾತನಾಡಿದರು.
ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ವಿರೇಶಗೌಡ್ರ ದಳಪತಿ, ಕೊಪ್ಪಳ ನಗರ ಘಟಕದ ಅಧ್ಯಕ್ಷ ಸೋಮುನಗೌಡ ಹೊಗರನಾಳ, ಕೊಪ್ಪಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ರಮೇಶ ಡಂಬ್ರಳ್ಳಿ, ಜಿಲ್ಲಾ ಕೈಗಾರಿಕಾ ಘಟಕದ ಅಧ್ಯಕ್ಷ ಮಾರುತಿಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಿರಾಜ್ ಬಿಜಾಪುರ್, ನಗರ ಘಟಕದ ಅಲ್ಪಸಂಖ್ಯಾತರ ಅಧ್ಯಕ್ಷ ಸಿರಾಜ್ ಕೋಲ್ಕಾರ್ ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್ ಮೆಹಮೂದ್ ಹುಸೇನಿ ಬಲ್ಲೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ್, ಜಿಲ್ಲಾ ಸೇವಾದಳ ಘಟಕದ ಅಧ್ಯಕ್ಷ ವಸಂತ ಹಟ್ಟಿ,
ಎಸ್ ಟಿ ಘಟಕದ ತಾಲೂಕ ಅಧ್ಯಕ್ಷ ಮಲ್ಲಪ್ಪ ವಾಲ್ಮೀಕಿ, ಕೊಪ್ಪಳ ನಗರ ಕಾನೂನು ಘಟಕದ ಅಧ್ಯಕ್ಷ ಬಸವರಾಜ ಎಸ್, ಕೊಪ್ಪಳ ನಗರ ಘಟಕದ ಕೋಶಾಧ್ಯಕ್ಷ ಶಿವರಾಜ ಮಠಮತಿ, ಜಿಲ್ಲಾ ನೇಕಾರ ಘಟಕದ ಅಧ್ಯಕ್ಷ ಮಾರುತಿ ಪೇರ್ಮಿ, ಕೊಪ್ಪಳ ನಗರ ಯುವ ಘಟಕದ ಅಧ್ಯಕ್ಷ ಕಲಿಲ್ ಮಾನ್ವಿ, ಕೊಪ್ಪಳ ನಗರ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕಲಾಂದರ್ ಬಾಬ, ಕೊಪ್ಪಳ ನಗರ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮರ್ದಾನ ಅಲಿ, ಕೊಪ್ಪಳ ನಗರ ಘಟಕದ ಉಪಾಧ್ಯಕ್ಷೆ ಶರಣಮ್ಮ ಸಂಗನಾಳ, ಪದಾಧಿಕಾರಿ ನಿರ್ಮಲಾ ಸುಂಕದ, ಮುಖಂಡರಾದ ಸಿದ್ದು ಪಾಟೀಲ್, ಸಿದ್ದನಗೌಡ ನಾಗನೂರು , ರಾಮಕೃಷ್ಣ, ಅಭಿಷೇಕ, ಪ್ರಾಣೇಶ್ ಕಂಪ್ಲಿ , ಮಂಜುನಾಥ , ಇಬ್ರಾಹಿಂ ಪಟೇಲ್, ಭೀಮೇಶ್ ಗಾಳಿ, ದಸ್ತಗಿರಿ, ಮರ್ದನ್ ಅಲಿ, ಮೌಲ ಹುಸೇನ್, ವಿಜಯಕುಮಾರ, ಪ್ರಫುಲ್ ಕುಮಾರ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.