ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಘಳಿಗೆಯು ರೋಚಕತೆಯಿಂದ ಕೂಡಿದೆ : ಡಾ,  ಕಲಾಲ್

0

Get real time updates directly on you device, subscribe now.

ಕೊಪ್ಪಳ/ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಘಳಿಗೆಯು ರೋಚಕತೆಯಿಂದ ಕೂಡಿದೆ, ಪ್ರತಿಯೊಬ್ಬ ಭಾರತೀಯನು ಸಂಭ್ರಮಿಸುವ ದಿನ ಇದಾಗಿದೆ ಎಂದು ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಹೇಳಿದರು,
ಅವರು ರವಿವಾರ ಸಂಜೆ ವೇಳೆಯಲ್ಲಿ ಕೊಪ್ಪಳ ಸದ್ಭಾವನಾ ವೇದಿಕೆ ವತಿಯಿಂದ ಏರ್ಪಡಿಸಿದ 80ನೇ ವರ್ಷದ ಸ್ವತಂತ್ರೋತ್ಸವದ ಸಂಭ್ರಮಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ನಮ್ಮ ದೇಶದ ಇತಿಹಾಸದಲ್ಲಿ ಅಗಸ್ಟ್ 15 1947 ಸ್ಮರಣೀಯ ದಿನವಾಗಿದೆ, ಎರಡು ನೂರು ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವು ಬಿಡುಗಡೆಯಾದ ದಿನ ಇದಾಗಿದೆ, ನಮ್ಮ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅಂದು ಭಾರತೀಯ ರಾಜ್ಯಾಂಗದ ಕುರಿತು ಐತಿಹಾಸಿಕ ಭಾಷಣ ಮಾಡಿದ್ದರು, ಈ ಸ್ವಾತಂತ್ರ್ಯವು ಭವಿಷ್ಯದೊಂದಿಗೆ ಅನುಸಂಧಾನ ಎಂದು ವ್ಯಾಖ್ಯಾನಿಸಿದರು, ಭಾರತದಲ್ಲಿ ಹೊಸ ಕನಸು ಹೊಸ ಭರವಸೆ ಚಿಗುರೋಡೆಯಿತು, ನಾವು ಹೊಸ ಹಾದಿ ತುಳಿಯುತ್ತಿದ್ದೇವೆ ಎಂದು ನೆಹರು ಅವರು ಹೇಳಿದ ಮಾತು ಇಂದಿಗೂ ಕೂಡ ಸ್ಮರಣೀಯವಾಗಿದೆ ಎಂದು ಹೇಳಿದ ಅವರು ನಮ್ಮ ದೇಶದ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ಪರಸ್ಪರ ನಾವೆಲ್ಲಾ ಭಾರತೀಯರು ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸಿಕೊಂಡು ನಮ್ಮ  ನಮ್ಮ ಬದುಕು ಕಟ್ಟಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ. ಸುಶೀಲ್ ಕುಮಾರ್ ಕಲಾಲ್ ಅಭಿಪ್ರಾಯಪಟ್ಟರು,
ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾಹಿತಿ ಹಿರಿಯ ಪತ್ರಕರ್ತ ಜಿಎಸ್ ಗೋನಾಳ ಮಾತನಾಡಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುತ್ತಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟಾಗ ಭಾರತದಲ್ಲಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅಗ್ರಗಣ್ಯ ನಾಯಕ ಡಾ, ಬಿ ಆರ್ ಅಂಬೇಡ್ಕರ್ ಸಹ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಹೋರಾಟಕ್ಕೆ ಸ್ಪೂರ್ತಿ ನೀಡುವ ಸಂದೇಶಗಳನ್ನು ಸಾರುತ್ತ ನಾಡಿನ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿ ಚಳುವಳಿ ತೀವ್ರಗೊಂಡು ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ದೇಶದ ಇತಿಹಾಸ ದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ವಿವರಿಸಿ ನಮ್ಮ ದೇಶದ ಮಹಾನ್ ನಾಯಕರು ತೂರಿದ ಮಾರ್ಗದಲ್ಲಿ ನಾವು ಭೇದ ಭಾವವನ್ನು ಮರೆತು ಎಲ್ಲರೂ ಒಗ್ಗೂಡಿ ದೇಶದ ಏಕತೆಗಾಗಿ ಶ್ರಮಿಸೋಣ ಎಂದು ತಿಳಿಸಿದರು,
ಸಾಹಿತಿ ಮಂಜುನಾಥ್ ಚಿತ್ರಗಾರ ಮಾತನಾಡಿ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬ ಭಾರತೀಯ ಮನದಲ್ಲೂ ಅಮರ ರಾಗಿ ಉಳಿದಿದ್ದಾರೆ ,ಹೀಗಾಗಿ ನಾವೆಲ್ಲರೂ ಜಾತಿ ಧರ್ಮ ಭೇದ ಭಾವ ಮರೆತು ಎಲ್ಲರೂ ಸಮಾನರಾಗಿ ಶಾಂತಿಯಿಂದ ಬಾಳೋಣ, ದೇಶ ಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮತಾ ಸಮಾಜ ಕಟ್ಟಲು ಸಂಕಲ್ಪ ಮಾಡೋಣ ಎಂದರು,
 ಯುವ ನಾಯಕ ಶಿಕ್ಷಣ ಪ್ರೇಮಿ ನಿತಿಶ್ ಕುಮಾರ್ ಪುಲಾಸ್ಕರ್ ರವರು  ಮಾತನಾಡಿ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ನಮ್ಮ ದೇಶದ ಮಹಾನ್ ನಾಯಕರುಗಳು ಹೊಂದಿದ್ದ ದೇಶ ಪ್ರೇಮದ ಗುಣವು ನಮಗೆಲ್ಲ ಸ್ಪೂರ್ತಿಯಾಗಿದೆ ,ಅವರ ಸೇವಾ ಗುಣವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ ಅವರು ಸಾಮಾಜಿಕ ಸಮಾನತೆಗಾಗಿ ಹೋರಾಡಿದ ನಾಯಕರ ಆದರ್ಶ ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು,
ಆರಂಭದಲ್ಲಿ  ಹಿರಿಯ ಉರ್ದು ಸಾಹಿತಿ ಕವಿ ಅನ್ವರ್ ಹುಸೇನ್ ರವರು ದೇಶಭಕ್ತಿ ಗೀತೆಯನ್ನು ಹಾಡಿದರು ,ಇನ್ನೋರ್ವ ಕವಿ ಎಂ ವಿಚಾರತ್ ಅಲಿ ತಾಯರ್  ರವರು ದೇಶಭಕ್ತಿಯ ಕವನ ವಾಚನ ಮಾಡಿದರು , ಅಲ್ಪಸಂಖ್ಯಾತ ಸಮುದಾಯದ ಯುವ ನಾಯಕ ಮೊಹಮ್ಮದ್ ಫಯಾಜ್  ಪ್ರಾಸ್ತಾವಿಕ ವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಎಂ, ಲಾಯಕ್ ಅಲಿ, ಶಾಂತರಾಜ್,  ಸಾಧಿಕ್ ಹುಸೇನ್, ಮೆಹಬೂಬ್ ಸಾಬ್ ಮಗಳಾಪುರ್ , ನಜೀರ್ ಮುದ್ಗಲ್, ಜಮೀರ್ ಖಾದ್ರಿ,ಉಪ ಪ್ರಾಚಾರ್ಯ ಎಂ,ಎ ಕೈಯುಮ್, ಪ್ರಶಸ್ತಿ ಪುರಸ್ಕೃತ ನಿವೃತ್ತ ವೃತ್ತಿ ಶಿಕ್ಷಕ ಅಮೀರ್ ಹಮ್ಜಾ ನದಾಫ್  ಸೇರಿದಂತೆ ಅನೇಕರು ಪಾಲ್ಗೊಂಡಿದ್ದು, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಆರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ ಕೊಪ್ಪಳ ಸದ್ಭಾವನಾ ವೇದಿಕೆಯ ಕಾರ್ಯದರ್ಶಿ ಸೈಯದ್ ಹಿದಾಯತ  ಅಲಿ ರವರು ಕೊನೆಯಲ್ಲಿ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!