ಕೊಪ್ಪಳ ಲೋಕಸಭಾ ಕ್ಷೇತ್ರದ ಅಂತಿಮ ಕಣದಲ್ಲಿ 19 ಅಭ್ಯರ್ಥಿಗಳು

Get real time updates directly on you device, subscribe now.

: ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ 8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದವರ ಪೈಕಿ 4 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

ಏಪ್ರಿಲ್ 12 ರಿಂದ ಏ.19ರ ವರೆಗೆ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯಲ್ಲಿ 27 ಅಭ್ಯರ್ಥಿಗಳಿಂದ ಒಟ್ಟು 40 ನಾಮಪತ್ರಗಳು ಸ್ವೀಕೃತವಾಗಿದ್ದು, ಇದರಲ್ಲಿ 4 ಅಭ್ಯರ್ಥಿಗಳ 6 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. ದೇಶ ಪ್ರೇಮ ಪಾರ್ಟಿಯ ಅಭ್ಯರ್ಥಿ ಬಸವರಾಜ, ಪಕ್ಷೇತರ ಅಭ್ಯರ್ಥಿಗಳಾದ ಕೆ.ಬಸವರಾಜ, ಮೊಹ್ಮದ್ ನಜೀರುದ್ದೀನ್ ಮೂಲಿಮನಿ ಹಾಗೂ ಮಹ್ಮದ್ ಸಲ್ಮಾನ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ: ಭಾರತಿಯ ಜನತಾ ಪಾರ್ಟಿಯ ಅಭ್ಯರ್ಥಿ ಡಾ. ಬಸವರಾಜ್ ಕೆ ಶರಣಪ್ಪ, ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಶಂಕರ್, ಸರ್ವ ಜನತಾ ಪಾರ್ಟಿಯ ಅಭ್ಯರ್ಥಿ ಜಿ.ಅನೋಜಿ ರಾವ್, ಚಾಲೆಂಜರ್ಸ್ ಪಾರ್ಟಿಯ ಅಭ್ಯರ್ಥಿ ಡಿ.ದುರ್ಗಾ ಪ್ರಸಾದ್ ಬ್ಯಾಟರಾಯನಜಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ನಿರುಪಾದಿ ಕೆ ಗೋಮರ್ಸಿ, ಆಲ್ ಇಂಡಿಯಾ ಉಲಮಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಮಜಾನಬಿ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣಪ್ಪ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ) ಅಭ್ಯರ್ಥಿ ಸಿ.ಶರಣ ಬಸಪ್ಪ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಇಮಾಮಸಾಬ ಜಂಗ್ಲಿಸಾಬ ಮುಲ್ಲಾ, ಕರಿಂಪಾಶ ಗಚ್ಚಿನಮನಿ, ಕಾಳಪ್ಪ ಎಚ್ಚರಪ್ಪ ಬಡಿಗೇರ ವಿಶ್ವಕರ್ಮ, ಪ.ಯ.ಗಣೇಶ, ನಾಗರಾಜ ಕಲಾಲ್, ಕರಡಿ ಬಸವರಾಜ, ಮಲ್ಲಿಕಾರ್ಜುನ ಹಡಪದ, ರುಕ್ಮಿಣಿ, ಸುರೇಶ್ ಗೌಡ ಮುಂದಿನ ಮನೆ ಹಾಗೂ ಹನುಮೇಶ ಎಸ್ ಎಚ್ ಶಾಖಾಪೂರ , ಈ ಎಲ್ಲಾ 19 ಅಭ್ಯರ್ಥಿಗಳು ಕೊಪ್ಪಳ ಲೋಕಸಭಾ ಕ್ಷೇತ್ರದ ಅಂತಿಮ ಕಣದಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!