ಐದು ಗ್ಯಾರಂಟಿ ಕಾರ್ಯಕ್ರಮದಿಂದ ಬಡಜನರ ಬದುಕು ಹಸನಗೊಂಡಿದೆ-ಸಂಗಣ್ಣ ಕರಡಿ
ಭವ್ಯ ಭಾರತ ಭವಿಷ್ಯಕ್ಕೆ ಕಾಂಗ್ರೆಸ್ ಬೆಂಬಲಿಸಿ
ಕೊಪ್ಪಳ:
ಭವ್ಯ ಭಾರತ ಭವಿಷ್ಯಕ್ಕೆ ಕಾಂಗ್ರೆಸ್ ಬೆಂಬಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳರನ್ನು ಎರಡು ಲಕ್ಷ ಮತಗಳ ಅಂತರದಿAದ ಗೆಲ್ಲಿಸಿ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ನ ಜನಪರ ಯೋಜನೆ, ಐದು ಗ್ಯಾರಂಟಿ ಕಾರ್ಯಕ್ರಮದಿಂದ ಬಡಜನರ ಬದುಕು ಹಸನಗೊಂಡಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಕಾಂಗ್ರೆಸ್ ಪರವಾಗಿದ್ದಾರೆ. ದಿನದಿಂದ ದಿನಕ್ಕೆ ಸಾಗರೋಪಾದಿಯಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಡತನ ರೇಖಿಗಿಂತ ಕೆಳಗಿರುವ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಬೇಕೆಂಬ ಉದ್ದೇಶದಿಂದ ಯುಪಿಎ ಸರ್ಕಾರ ಅನೇಕ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿ ಇಡೀ ದೇಶದ ಬಡತನ ನಿರ್ಮೂಲನೆಗೆ ಶ್ರಮಿಸಿದೆ. ದೇಶದ ಅಭಿವೃದ್ಧಿ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಯೋಜನೆ ಸಾಕಾರಗೊಳ್ಳಲಿದೆ. ಜನಪರವಾಗಿರುವ ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ದೇಶದ ಜನತೆಗೆ ಸುಳ್ಳಿನ ಕಂತೆಗಳ ಮೂಲಕ ದಾರಿತಪ್ಪಿಸುವ ಪ್ರಧಾನಿ ಮೋದಿಯವರ ಆಟ ಇನ್ಮುಂದೆ ನಡೆಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶದ ಜನತೆಯ ಹೃದಯ ಗೆದ್ದಿವೆ. ಹೀಗಾಗಿ ಬಿಜೆಪಿ ನಾಯಕರು ಸೋಲಿನ ಹತಾಶೆಯಿಂದ ಗ್ಯಾರಂಟಿ ಯೋಜನೆ ಲೋಕಸಭಾ ಚುನಾವಣೆ ನಂತರ ನಿಲ್ಲಿಸುತ್ತಾರೇ ಎಂಬ ವಂದತಿ ಸೃಷ್ಟಿಸುತ್ತಿದ್ದಾರೆ. ಮತದಾರರು ಸುಳ್ಳು ಹೇಳಿಕೆಗೆ ಕಿವಿಗೊಡಬೇಡಿ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ:-
ಗವಿ ಹೂಗಾರ, ನವೀನ್ ಅಬ್ಬಿಗೇರಿ, ಅಕ್ಬರ್ ಸಾಬ್ , ಅಜಗರ ಅಲಿ, ಅಲ್ತಾಫ್, ಪ್ರಶಾಂತ, ಸುರೇಶ, ಗುರುಮೂರ್ತಿ ಸೇರಿದಂತೆ ತಾಲೂಕಿನ ಅಬ್ಬಿಗೇರಿ, ನೀರಲಗಿ, ಕವಲೂರು, ನಗರದ ದೇವರಾಜ್ ಅರಸ್ ಕಾಲೋನಿ, ಪಿರ್ದೋಸ್ ನಗರ, ಭಾಗ್ಯನಗರದ ಬೇಂದ್ರೆ ಕಾಲೋನಿಯ ಅನೇಕ ಯುವಕರು ಕಾಂಗ್ರೆಸ್ ತತ್ವ ಸಿದ್ಧಾಂತದ ಮೆಚ್ಚಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಮಾಜಿ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಪ್ರಸನ್ನ ಗಡಾದ, ರಾಮಣ್ಣ ಚೌಡ್ಕಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ್, ನಗರಸಭೆ ಸ್ಥಾತಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ರಾಮಣ್ಣ ಕಲ್ಲನವರ್, ಶಿವಮೂರ್ತಿ ಗುತ್ತೂರು, ನಾಗನಗೌಡ, ಸಿದ್ದೇಶ ಪೂಜಾರ್, ಪರಶುರಾಮ ಕೆರೆಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments are closed.