೧೦.೫ ತೊಲೆ ಬಂಗಾರ ಕಳ್ಳತನ ಪ್ರಕರಣ: ಕಳ್ಳರನ್ನು ಬಂದಿಸಿದ ಯಲಬುರ್ಗಾ ಪೊಲೀಸರು
ಕೊಪ್ಪಳ : 10.5 ತೊಲೆಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಲಬುರ್ಗಾ ಪೊಲೀಸರು ಯಶಸ್ವಿಯಾಗಿದ್ದಾರೆ.
ತನಿಖಾಧಿಕಾರಿ ಮೌನೇಶ್ವರ ಮಾಲಿ ಪಾಟೀಲ್ ನೇತೃತ್ವದಲ್ಲಿ ಯಲಬುರ್ಗಾದ ಪೊಲೀಸ್ ತಂಡ ಕಳ್ಳತನ ಪ್ರಕರಣವನ್ನು ಭೇದಿಸಿದ್ದು ಕಳ್ಳತನ ಮಾಡಿದ್ದ ನಾಗರಾಜ್ ದಿವಾಟರ್ , ಬಸನಗೌಡ ತೋಟ್ಗಂಟಿ ಇವರನ್ನು ಬಂಧಿಸಿ ಇವರಿಂದ ಏಳುವರೆ ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ ಹೀಗಿದೆ
ಕೊಪ್ಪಳ ಜಿಲ್ಲೆ, ಯಲಬುರ್ಗಾ ವೃತ್ತದ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗನಾಳ ಗ್ರಾಮದಲ್ಲಿ ದಿನಾಂಕ: 16.04.2024 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 17.04.2024 ರಂದು ಬೆಳಿಗ್ಗೆ 06-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲದ ಬೀಗ ಮತ್ತು ಕಿರಾಣಿ ಅಂಗಡಿಯಲ್ಲಿದ್ದ ಕಬ್ಬಿಣದ ಡ್ರಾ ಮುರಿದು 1] 3 ತೊಲೆಯ ಬಂಗಾರದ ತಾಳಿ ಚೈನ್, 2] 3.5 ತೊಲೆಯ ಬಂಗಾರದ ಚಪ್ಪಲರ ಸರ, 3] 2 ತೊಲೆಯ ಬಂಗಾರದ ಬ್ರಾಸ್‌ಲೈಟ್ 4] 1 ತೊಲೆಯ ಬಂಗಾರದ ತಾಳಿ ಸಾಮಾನು, 5] 0.5 ತೊಲೆಯ ಬಂಗಾರದ ಎರಡು ಮೇಲು ಗುಂಡು 8] 0.5 ತೊಲೆಯ ಬಂಗಾರದ ಒಂದು
ಸುತ್ತು ಉಂಗುರ ಒಟ್ಟು 10.5 ತೊಲೆಯ ಬಂಗಾರದ ಆಭರಣಗಳನ್ನ ಕಳ್ಳತನ ಮಾಡಿಕೊಂಡು ಹೋಗಿದ್ದರ ಬಗ್ಗೆ ಶ್ರೀಮತಿ ಶರಣಮ್ಮ ಗಂಡ ಷಣ್ಮುಖಪ್ಪ ಯರೇಂಗಳ್ಳಿ ಸಾ: ಸಂಗನಾಳ ತಾ:ಯಲಬುರ್ಗಾ ರವರು ದೂರು ನೀಡಿದ ದೂರಿನ ಮೇರೆಗೆ ದಿನಾಂಕ-17.04.2024 ರಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 60/2024 ಕಲಂ 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಪ್ರಕರಣದಲ್ಲಿನ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ಶ್ರೀಮತಿ ಯಶೋಧಾ ವಂಟಗೋಡಿ, ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ಜಿಲ್ಲೆ ಹಾಗೂ ಹೇಮಂತಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಪ್ಪಳ ಮತ್ತು . ಮುತ್ತಣ್ಣ ಸರವಗೋಳ, ಪೊಲೀಸ್ ಉಪಾಧೀಕ್ಷಕರು, ಕೊಪ್ಪಳ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಮೌನೇಶ್ವರ ಮಾಲಿಪಾಟೀಲ್ ಸಿಪಿಐ ಯಲಬುರ್ಗಾ ವೃತ್ತ, ರವರ ನೇತೃತ್ವದಲ್ಲಿ ವಿಜಯ ಪ್ರತಾಪ್, ಪಿ.ಎಸ್.ಐ ಯಲಬುರ್ಗಾ ಠಾಣೆ, ಹಾಗೂ ಸಿಬ್ಬಂದಿಗಳಾದ ಸಿಹೆಚ್‌ಸಿ-53 ದೇವೆಂದ್ರಪ್ಪ, ಸಿಹೆಚ್‌ಸಿ-81 ಮಹಿಬೂಬ, ಸಿಪಿಸಿ-244 ಬಾಳನಗೌಡ, ಎಪಿಸಿ-208 ಬಸಯ್ಯ ರವರನ್ನೊಳಗೊಂಡ ಒಂದು ವಿಶೇಷ ಪತ್ತೆ ತಂಡವನ್ನು ರಚನೆ ಮಾಲಾಗಿತ್ತು.
ಈ ರೀತಿಯಲ್ಲಿ ರಚಿಸಿದ ವಿಶೇಷ ಪತ್ತೆ ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು
ಸಾ:ಸಂಗನಾಳ
ಮಾಹಿತಿಯನ್ನು ಸಂಗ್ರಹಿಸಿ 1] ನಾಗರಾಜ ತಂದೆ ಹುಚ್ಚಿರಪ್ಪ ದಿವಟರ ವಯ:30 ವರ್ಷ ತಾ:ಯಲಬುರ್ಗಾ 2] ಬಸನಗೌಡ ತಂದೆ ಮಲ್ಲನಗೌಡ ತೋಟಗಂಟಿ ವಯ:28 ಸಾ:ಸಂಗನಾಳ
ತಾ:ಯಲಬುರ್ಗಾ ಇವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆಪಾದಿತರು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದು ಇವರಿಂದ ಪ್ರಕರಣದಲ್ಲಿ ಕಳ್ಳತನವಾದ ಒಟ್ಟು 10.5 ತೊಲೆಯ (105 ಗ್ರಾಂ) ಬಂಗಾರದ ಆಭರಣಗಳು, ಒಟ್ಟು ಅಂ.ಕಿ.ರೂ 7,50,000-00 ಬೆಲೆಬಾಳುವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸ್ವತ್ತಿನ ಪ್ರಕರಣದಲ್ಲಿ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿತರನ್ನ ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.
Comments are closed.