ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಶರಣಪ್ಪ ಮತಯಾಚನೆ

Get real time updates directly on you device, subscribe now.

Koppal ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಶರಣಪ್ಪ
(ಶರಣು ಗಡ್ಡಿ )  ಅವರು ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ಮತ್ತು ಜಿಲ್ಲಾ ನ್ಯಾಯಲಯದಲ್ಲಿ ವಕೀಲರು ಮತ್ತು ಜನಗಳ ಮಧ್ಯೆ ಮತಯಾಚನೆ ಮಾಡಿದರು.
2024 ರ ಲೋಕ ಸಭಾ ಚುನಾವಣೆಯ ಕಣದಲ್ಲಿರುವ ಕೊಪ್ಪಳ ಲೋಕ ಸಭಾ ಕ್ಷೇತ್ರದ ಜನಪರ ಹೋರಾಟಗಳಿಂದ ಹೊರಹೊಮ್ಮಿದ ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಶರಣಪ್ಪ
(ಶರಣು ಗಡ್ಡಿ ) ಅವರು ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ಮತ್ತು ಜಿಲ್ಲಾ ನ್ಯಾಯಲಯದಲ್ಲಿ ವಕೀಲರು ಮತ್ತು ಜನಗಳ ಮಧ್ಯೆ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು.
ಜನರ ಜ್ವಲಂತ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಧ್ವನಿ ಎತ್ತಲು ಜನಪರ ಹೋರಾಟಗಳನ್ನು ಕಟ್ಟುತ್ತಿರುವ ಎಸ್.ಯು.ಸಿ.ಐ (ಕಮ್ಯುನಿಸ್ಟ್ ) ಪಕ್ಷಕ್ಕೆ ನಿಮ್ಮ ಮತವನ್ನು ನೀಡಬೇಕು ಎಂದು ಕ್ರೀಡಾಂಗಣದಲ್ಲಿದ್ದ ಸಾರ್ವಜನಿಕರು,ಹಿರಿಯ ನಾಗರಿಕರನ್ನು,ಯುವಕರನ್ನು ಮತ್ತು ಮಹಿಳೆಯರನ್ನು ಭೇಟಿ ಮಾಡಿ ಮನವಿ ಮಾಡಿದರು. ನಂತರ ಅವರೊಂದಿಗೆ ಅವರ ಚುನಾವಣೆಯ ಪ್ರಾಣಾಳಿಕೆಯ ಮತ್ತು ಬೇಡಿಕೆಗಳನ್ನು ಒಳಗೊಂಡಿರುವ ಕರಪತ್ರಗಳನ್ನು ನೀಡಿ,ಅವರ ವಿಚಾರಗಳನ್ನು ಚರ್ಚಿಸಿದರು.
ಇದಕ್ಕೆ ಪ್ರತಿಕ್ರೀಯೇ ನೀಡಿದ ವಕೀಲರು ಸಾರ್ವಜನಿಕರು,ಯುವಜನರು ನಮಗೆ ಜನರ ಸಮಸ್ಯೆಗಳನ್ನು ಮಾತಾನಾಡುವವರು ಬೇಕು,
ಹೋರಾಟಗಾರರಿಗೆ ಮಾತ್ರ ಜನರ ಕಷ್ಟ ಅರ್ಥವಾಗೋಕೆ ಸಾಧ್ಯ, ಹಾಗಾಗಿ ನಮ್ಮ ಸಂಪೂರ್ಣ ಬೆಂಬಲ ನಿಮಗೆ ಇದೆ ಎಂದು ಅಭ್ಯರ್ಥಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಶರಣು ಪಾಟೀಲ್, ದೇವರಾಜ್, ಗಂಗರಾಜ ಅಳ್ಳಳ್ಳಿ ಈ ಪ್ರಚಾರದಲ್ಲಿ ಜನಪರ ಹೋರಾಟಗಳಿಂದ ಹೊರಹೊಮ್ಮಿದ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!