ಕೊಪ್ಪಳ ಬಸವ ಜಯಂತಿ ರಜತ ಮಹೋತ್ಸವ : ಪೂರ್ವಭಾವಿ ಸಭೆ

Get real time updates directly on you device, subscribe now.

 

ಕೊಪ್ಪಳ : ಮೇ ೧೦ ರಂದು ನಡೆಯುವ ‘ಬಸವ ಜಯಂತ್ಯೋತ್ಸವ’ ಆಚರಣೆಯ ಪೂರ್ವಭಾವಿ ಸಭೆಯನ್ನು ದಿ. ೧೭-೦೪-೨೦೨೪, ಬುಧವಾರ ಸಂಜೆ ೬.೩೦ ಕ್ಕೆ, ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದೆ. ವಿಶೇಷವಾಗಿ ಈ ವರ್ಷ ಕೊಪ್ಪಳದ ಬಸವ ಜಯಂತ್ಯೋತ್ಸವ ೨೫ ನೇ ವರ್ಷದ ಆಚರಣೆಯಾಗಿದೆ. ಹೀಗಾಗಿ ಕೊಪ್ಪಳ ಬಸವ ಜಯಂತಿಯ ರಜತ ಮಹೋತ್ಸವದ ಅದ್ಧೂರಿ, ಅರ್ಥಗರ್ಭಿತ, ಯಶಸ್ವೀ ಆಚರಣೆಗೆ ಎಲ್ಲ ಬಸವಾಭಿಮಾನಿಗಳು ಉಪಯುಕ್ತ ಸಲಹೆ-ಸೂಚನೆಗಳನ್ನು ಈ ಸಭೆಯಲ್ಲಿ ನೀಡಬೇಕು ಎಂದು ಕೊಪ್ಪಳ ಬಸವ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!