ತಾಯಿ, ಮಗು ಕಾಣೆ: ಪತ್ತೆಗೆ ಸಹಕರಿಸಲು ಮನವಿ

Get real time updates directly on you device, subscribe now.

: ಕೊಪ್ಪಳ ನಗರದ ಬನ್ನಿಕಟ್ಟಿ ಪ್ರದೇಶ ನಿವಾಸಿ ತಿರುಮಲ ಗಂಡ ಸಂತೋಷ್ ದಾಸರ್ ಎಂಬ ಮಹಿಳೆಯು ತನ್ನ 4 ವರ್ಷದ ಮಗುವಿನೊಂದಿಗೆ ಏಪ್ರಿಲ್ 08 ರಂದು ಗವಿಮಠಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದವರು ಈವರೆಗೂ ಮನೆಗೆ ಹಿಂದಿರುಗಿರುವುದಿಲ್ಲ. ಈ  ಕುರಿತು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ : 22/2024 ಕಲಂ : ಮಹಿಳೆ ಕಾಣೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯ ಚಹರೆ ವಿವರ:
ಮಹಿಳೆಯು 39 ವರ್ಷದವರಾಗಿದ್ದು, 4.5 ಅಡಿ ಎತ್ತರ, ದಪ್ಪನೆಯ ಮೈಕಟ್ಟು, ಸಾದಾ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಸೀರೆ ಧರಿಸಿದ್ದರು.
ಮಗುವಿನ ಚಹರೆ ವಿವರ:
ಸುಬ್ರಮಣ್ಯ ಸಂತೋಷ್ ದಾಸರ್ ಎಂಬ ಮಗು 4 ವರ್ಷದವನಾಗಿದ್ದು, 2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾದಾಕೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದಾಗ ಟೀ ಶರ್ಟ್ ಮತ್ತು ಚಡ್ಡಿ ಧರಿಸಿದ್ದನು.
ಮೇಲ್ಕಂಡ ಚಹರೆಯ ಮಹಿಳೆ ಮತ್ತು ಮಗುವಿನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಮಹಿಳಾ ಪೊಲೀಸ್ ಠಾಣೆ: 08539-221233, ಪಿಐ: 8861116999, ನೀಲಪ್ಪ ಎಚ್.ಸಿ: 9740479919, ಪೊಲೀಸ್ ಕಂಠ್ರೋಲ್ ರೂಂ: 9480803700 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Get real time updates directly on you device, subscribe now.

Comments are closed.

error: Content is protected !!