ಕೊಪ್ಪಳ ಜೆಸ್ಕಾಂ, ಮುನಿರಾಬಾದ್: ಏ.07 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Get real time updates directly on you device, subscribe now.

  ಜೆಸ್ಕಾಂ ಕೊಪ್ಪಳ ಉಪ ವಿಭಾಗದಿಂದ ಬೃಹತ್ ಕಾಮಗಾರಿ ವಿಭಾಗ, ಕೊಪ್ಪಳರವರು ರಿಲೇ ವರ್ಕ್ಸ್ ಕೆಲಸ ನಡೆಸುತ್ತಿರುವ ಪ್ರಯುಕ್ತ ಏ.07 ರ ರವಿವಾರದಂದು 110/33/11 ಕೆ.ವಿ ಗಿಣಿಗೇರಾ ಸ್ಟೇಷನ್‌ಗೆ ಒಳಪಡುವ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ 09 ಗಂಟೆಯಿAದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು 11 ಕೆ.ವಿ ಎಫ್-8 ಹ್ಯಾಟಿ ಮುಂಡರಗಿ ಫೀಡರಗೆ ಒಳಪಡುವ ಗ್ರಾಮಗಳಾದ ಬೆಳವಿನಾಳ, ಹಾಲವರ್ತಿ, ಬಹದ್ದೂರಬಂಡಿ, ಬಿ.ಹೊಸಳ್ಳಿ, ಚುಕನಕಲ್, ಮುದ್ದಾಬಳ್ಳಿ, ಹಳೆಗೊಂಡಬಾಳ, ಗೊಂಡಬಾಳ, ಹ್ಯಾಟಿ, ಮುಂಡರಗಿ ಮತ್ತು ಮೆಳ್ಳಿಕೇರಿ ಹಾಗೂ ಎಫ್8 ಹ್ಯಾಟಿ ಮುಂಡರಗಿ ಫೀಡರ್,  ಎಫ್-9 ಲೇಬಗೇರಿ ಎನ್.ಜೆ.ವೈ ಕಿಡದಾಳ, ಬಸಾಪೂರ, ಹನುಮನಹಳ್ಳಿ, ಸಂಗಾಪೂರ, ಟನಕನಕಲ್, ಲೇಬಗೇರಿ, ಎಲ್.ಹಟ್ಟಿ, ಕಾಮನೂರು ಮತ್ತು ಅಬ್ಬಿಗೇರಿ, ಕೆಂಚನದೋಣಿ ತಾಂಡಾ, ವಿವೇಕಾನಂದನಗರ, ಮೆಡಿಕಲ್ ಕಾಲೇಜ್ ಹತ್ತಿರ, ಖಾದ್ರಿ ಲೇಔಟ್, ಎಫ್-12 ಗಿಣಿಗೇರಾ ಐ.ಪಿ ಫೀಡರ್, ಕಿಡದಾಳ ಮತ್ತು ಬಸಾಪೂರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು.
ನಿರ್ವಹಣೆ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದು, ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗುವುದಿಲ್ಲ ಎಂದು ಕೊಪ್ಪಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆಸ್ಕಾಂ ಮುನಿರಾಬಾದ್ ವ್ಯಾಪ್ತಿಯಲ್ಲಿ ಬೃಹತ್ ಕಾಮಗಾರಿ ವಿಭಾಗ, ಮುನಿರಾಬಾದ ರವರು ಹಾಲವರ್ತಿ ಎಂಯುಎಸ್‌ಎಸ್‌ನಲ್ಲಿ ಕಾರ್ಯ ನಡೆಸುತ್ತಿರುವ ಪ್ರಯುಕ್ತ ಗಿಣಿಗೇರಾ ಉಪ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳ ವ್ಯಾಪ್ತಿಯ ಗ್ರಾಹಕರಿಗೆ ಏಪ್ರಿಲ್ 07 ರಂದು ಬೆಳಿಗ್ಗೆ 09 ಗಂಟೆಯಿAದ ಮಧ್ಯಾಹ್ನ 03 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಗಿಣಿಗೇರಾ ಉಪ ಕೇಂದ್ರದ ವ್ಯಾಪ್ತಿಯ ಗಿಣಿಗೇರಾ ಮತ್ತು ಗಿಣಿಗೇರಾ ಬೈಪಾಸ್, ಹಳೆ ಕನಕಾಪುರ, ಹೊಸ ಕನಕಾಪುರ ಮತ್ತು ಕನಕಾಪುರ ತಾಂಡಾ, ಹಿರೇ ಬಗನಾಳ ಮತ್ತು ಚಿಕ್ಕ ಬಗನಾಳ, ಕರ್ಕಿಹಳ್ಳಿ, ಲಾಚನಕೇರಿ ಮತ್ತು ಕಾಸನಕಂಡಿ, ಕುಣಿಕೇರಿ ಮತ್ತು ಕುಣಿಕೇರಿ ತಾಂಡಾ, ಕುಟುಗನಹಳ್ಳಿ, ಅಲ್ಲಾನಗರ, ಗಬ್ಬೂರು, ಹಾಲಹಳ್ಳಿ ಮತ್ತು ಭೀಮನೂರು,  ಕಲ್ ತಾವರಗೇರಾ, ಎಫ್3  ಬಗನಾಳ ಎನ್‌ಜೆವೈ ಫೀಡರ್, ಎಫ್ 13 ಹಾಲಹಳ್ಳಿ ಎನ್‌ಜೆವೈ ಫೀಡರ್, ಎಫ್ 7 ಎಸ್.ಆರ್.ಸಿ ಇಂಡಸ್ಟಿçಯಲ್ ಫೀಡರ್, ಎಫ್ 10 ಗಾಳೆಮ್ಮ, ಎಫ್12 ಗಿಣಿಗೇರಾ ಮತ್ತು ಎಫ್11 ಕಲ್ ತಾವರಗೇರಾ, ಎಫ್9 ಎನ್‌ಜೆವೈ, ಎಫ್ 33 ಕೋಕಾ ಕೋಲಾ ಇಂಡಸ್ಟಿçÃಸ್‌ಗೆ ಸಂಬAಧಪಟ್ಟ ಎಲ್ಲಾ ಫೀಡರ್, ಎಫ್1 ಕುಣಿಕೇರಿ ಐಪಿ, ಎಫ್2 ಕರ್ಕಿಹಳ್ಳಿ ಐಪಿ, ಎಫ್5 ಅಲ್ಲಾನಗರ ಐಪಿ, ಎಫ್4 ಪೌಲ್ಟಿç ಫಾರ್ಮ್ ಮತ್ತು ಎಫ್-6 ಐಪಿ, ಕಾಸನಕಂಡಿ, ಪಿ.ಬಿ.ಎಸ್ ಸೋಲಾರ್ ಪ್ಲಾಂಟ್‌ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು.
ಕಾಮಗಾರಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ತಿ ಕೆಲಸ-ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಮುನಿರಾಬಾದ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!