39 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನೋಂದಣಿ ಆ್ಯಪ್‌ ಬಿಡುಗಡೆ

0

Get real time updates directly on you device, subscribe now.

ಅರ್ಥಪೂರ್ಣ ಸಮ್ಮೇಳನವಾಗಿಸಲು ಶಿವಾನಂದ ತಗಡೂರು ಕರೆ

ಬೆಂಗಳೂರು:
ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ 39ನೇ ಪತ್ರಕರ್ತರ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ನೋಂದಣಿಗಾಗಿ ನೋಂದಣಿ ಆ್ಯಪ್ ನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಬಿಡುಗಡೆ ಮಾಡಿದರು.

ತುಮಕೂರಿನ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನದ ಪೂರ್ವಬಾವಿ ಸಭೆಯಲ್ಲಿ ಆ್ಯಪ್‌ ಬಿಡುಗಡೆ ಮಾಡಿ ಮಾತನಾಡಿದರು.

ಸಮ್ಮೇಳನದಲ್ಲಿ ಭಾಗವಹಿಸುವವರನ್ನು ಖಾತರಿಪಡಿಸಿಕೊಂಡು ಸೂಕ್ತ ವ್ಯವಸ್ಥೆ ಮಾಡಲು ಈ ಆ್ಯಪ್ ನೋಂದಣಿ ಮಾಡಲಾಗಿದೆ. ಕೂಡಲೇ ಇದರಲ್ಲಿ ಪತ್ರಕರ್ತರು ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಜನವರಿ 18 ಮತ್ತು 19 ರಂದು ತುಮಕೂರಿನ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣಫ಼ಲ್ಲಿ ನಡೆಯಲಿದ್ದು ಇದರ ಯಶಸ್ವಿಗೆ ಎಲ್ಲಾ ಪತ್ರಕರ್ತರು ಒಗ್ಗಟ್ಟಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ಈ ಹಿಂದೆ ಮೈಸೂರು, ಮಂಗಳೂರು, ಕಲಬುರಗಿ, ವಿಜಯಪುರ ಮತ್ತು ದಾವಣಗೆರೆಯಲ್ಲಿ ನಡೆದ ಸಮ್ಮೇಳನಗಳು ಒಂದೊದೊಂದು ವಿಭಿನ್ನವಾಗಿ ನಡೆದು ಮೈಲಿಗಲ್ಲು ಸ್ಥಾಪಿಸಿವೆ. ಈ ಬಾರಿ ಕಲ್ಪತರು ನಾಡಿನಲ್ಲಿ ನಡೆಯುವ ಈ ಸಮ್ಮೇಳನ ಇತಿಹಾಸದಲ್ಲಿ ದಾಖಲಾಗುವಂತೆ ಅರ್ಥಪೂರ್ಣವಾಗಿ ನಡೆಸಬೇಕೆಂದು ಸಲಹೆ ನೀಡಿದರು.

ಸಮ್ಮೇಳನಕ್ಕೆ ಈಬಾರಿ ಐದಾರು ಸಾವಿರ ಪತ್ರಕರ್ತರು ಬರುವ ನಿರೀಕ್ಷೆ ಇದ್ದು ಊಟ ವಸತಿಗೆ ಯಾವುದೇ ತೊಂದರೆಯಾಗದಂತೆ ಈಗಿನಿಂದಲೇ‌ ಜವಾಬ್ದಾರಿಯಿಂದ, ಎಚ್ಚರ ವಹಿಸಲು ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮವನ್ನು ಖುದ್ದು ಪರಿಶೀಲಿಸಿ ಸಲಹೆ ಸೂಚನೆ ನೀಡಿದರು.

ವಿವಿದ ಸಮಿತಿಗಳ ಅಧ್ಯಕ್ಷರುಗಳಿಗೆ ತಾವು ಕೈಗೊಳ್ಳಬೇಕಾದ ಮಾಹಿತಿ ಪುಸ್ತಕವನ್ನು ವಿತರಿಸಿದರು.

ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು ಅವರು ಮಾತನಾಡಿ, ಯಾವುದೇ ಕೊಂಕು ಮಾತುಗಳಿಗೆ ತಲೆಕೊಡಿಸಿಕೊಳ್ಳದೆ ಸಮ್ಮೇಳನ ಯಶಸ್ವಿಗೆ ಎಲ್ಲರು ದುಡಿಯಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಇಲ್ಲಿಯವರೆಗೆ ಆಗಿರುವ ಕೆಲಸದ ಬಗ್ಗೆ ಮಾಹಿತಿ ಸಭೆಗೆ ನೀಡಿದರು.

ರಾಜ್ಯ‌ಸಂಘದ ಖಜಾಂಚಿ ವಾಸುದೇವ ಹೊಳ್ಳ, ಪ್ರಜಾ ಪ್ರಗತಿ ಪತ್ರಿಕೆ ಸಂಪಾದಕರಾದ ನಾಗಣ್ಣ,
ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುರಾಂ, ಹಿರಿಯ ಪತ್ರಕರ್ತರಾದ ಶಾಂತರಾಜು, ಡಿ.ಎಂ ಸತೀಶ್, ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷರಾದ ಮಧುಕರ್ ಹಾಗೂ ತುಮಕೂರು ಜಿಲ್ಲಾ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ನಂತರ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯುವ ಜಾಗವನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ರಾಜ್ಯ ಪದಾಧಿಕಾರಿಗಳು
ಪರಿಶೀಲಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!