ಕೊಪ್ಪಳ ಲೋಕಾಯುಕ್ತ: ಅನಾಮಧೇಯ ಕರೆಗಳ ಬಗ್ಗೆ ದೂರು ಸಲ್ಲಿಸಲು ಸೂಚನೆ
: ಕೊಪ್ಪಳ ಜಿಲ್ಲೆಯ ಕೆಲವು ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಯಾರೋ ಅನಾಮಧೇಯ ವ್ಯಕ್ತಿಗಳು ಕರ್ನಾಟಕ ಲೋಕಾಯುಕ್ತ, ಕೊಪ್ಪಳದ ಅಧಿಕಾರಿಯ ಹೆಸರಿನಲ್ಲಿ ದೂರವಾಣಿ (ಮೊಬೈಲ್) ಸಂ: 9371537396, 7386844658 ನೇದ್ದರಿಂದ ಕರೆ ಮಾಡಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಸಿ ಹಣದ ಬೇಡಿಕೆ ಇಟ್ಟ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಇದು ಯಾರೋ ಅನಾಮಧೇಯ ವ್ಯಕ್ತಿಗಳು ಮಾಡಿದ ಕೃತ್ಯವಾಗಿರುತ್ತದೆ.
ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಘಟಕದಿಂದ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಕರೆ ಮಾಡಿ ಯಾವುದೇ ರೀತಿಯ ಬೆದರಿಕೆ ಅಥವಾ ಹಣದ ಬೇಡಿಕೆಯನ್ನು ಇಡುವುದಿಲ್ಲ. ಜಿಲ್ಲೆಯ ಅಧಿಕಾರಿ, ನೌಕರರಿಗೆ ಮೇಲ್ಕಂಡ ಮೊಬೈಲ್ ಸಂಖ್ಯೆಗಳಿAದ ಅಥವಾ ಇನ್ನಿತರೆ ಸಂಖ್ಯೆಗಳಿAದ ಯಾರಾದರೂ ಕರ್ನಾಟಕ ಲೋಕಾಯುಕ್ತ, ಕೊಪ್ಪಳ ಘಟಕದ ಅಧಿಕಾರಿ/ಸಿಬ್ಬಂದಿಯವರು ಅಂತಾ ಕರೆ ಮಾಡಿ ಹಣ ಅಥವಾ ಇನ್ನಿತರೇ ವಸ್ತುಗಳಿಗೆ ಬೇಡಿಕೆ ಇಟ್ಟಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು ಎಂದು ಕೊಪ್ಪಳ ಲೋಕಾಯುಕ್ತ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.