ಬಾಬು ಜಗನ್ ಜೀವನರಾಮ್ ಅವರ ಸಾಧನೆ ವಿದ್ಯಾರ್ಥಿಗಳಿಗೆ ಮಾದರಿ : ಪ್ರೊ. ಕೆ.ವಿ. ಪ್ರಸಾದ
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಎಪ್ರಿಲ್ 05 ರಂದು ಬಾಬು ಜಗಜೀವನರಾಮ್ ಅವರ 117 ನೇ ಜಯಂತಿಯನ್ನು ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಕೆ.ವಿ.ಪ್ರಸಾದ ಮಾತನಾಡಿ, ತಳಸಮುದಾಯದ ವರ್ಗದಲ್ಲಿ ಜನಿಸಿ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಬಾಬು ಜಗಜೀವನರಾಮ್ ಅವರ ಸಾಧನೆಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಮೂಲಕ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಇತರರಿಗೆ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ರೈತರ ಮತ್ತು ಕಾರ್ಮಿಕರ ಬದುಕು ಸುಧಾರಿಸುವಲ್ಲಿ ಜಗಜೀವನರಾಮ್ ಅವರ ಶ್ರಮ ದೊಡ್ಡದು, ಅವರ ಕಾರ್ಯ ಶ್ಲಾಘನೀಯ ಎಂದರು.
ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತç ಪ್ರಾಧ್ಯಾಪಕ ಮತ್ತು ನಿರ್ದೇಶಕರಾದ ಪ್ರೊ.ಚನ್ನಬಸವಪ್ಪ ಚಲವಾದಿ ಮಾತನಾಡಿ, ರೈತರ ಜೀವನ ಹಸಿರು ಮಾಡಿದ ಮಹಾನ್ ನಾಯಕ ಬಾಬು ಜಗಜೀವನರಾಮ್ ಅವರು ಬಡವರ, ದೀನದಲಿತರ ಮತ್ತು ಕಾರ್ಮಿಕರ ಉದ್ಧಾರಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಸಾಮಾನ್ಯರ ಜೀವನದಲ್ಲಿ ಇಂದಿಗೂ ಮಹಾನ್ ನಾಯಕರಾಗಿ, ಹಸಿರುಕ್ರಾಂತಿಯ ಹರಿಕಾರರಾಗಿ ಖ್ಯಾತಿ ಪಡೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ ಜಡೆಪ್ಪ ಮತ್ತು ಸಮಾಜಶಾಸ್ತç ವಿಭಾಗದ ಉಪನ್ಯಾಸಕ ಪಾಪಣ್ಣ ಸೇರಿದಂತೆ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Comments are closed.