ಮತಕೇಂದ್ರಕ್ಕೆ ಹೋಗಲು ವಿಶೇಷ ಚೇತನನಿಗೆ ವಾಹನದ ವ್ಯವಸ್ಥೆಗೆ ಸಕ್ಷಮ ಆಪ್ ಸಹಾಯ: ರಾಹುಲ್ ರತ್ನಂ ಪಾಂಡೆಯ

Get real time updates directly on you device, subscribe now.

: ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ-2024 ಯಲ್ಲಿ ಯುವ ಮತದಾರರು ಹಾಗೂ ವಿಶೇಷ ಚೇತನರ ಮತದಾನದ ಪ್ರಮಾಣ ಹೆಚ್ಚಿಸಲು  ಈ ಬಾರಿ ವಿಶೇಷವಾಗಿ ಕುಷ್ಟಗಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೆಯ ರವರು ಹೇಳಿದರು.
ಯುವ ಮತದಾರರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಗುರುವಾರದಂದು ಕುಷ್ಟಗಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿದ್ದರಿAದ ಶೇಕಡಾವಾರು ಹೆಚ್ಚಿನ ಮತದಾನವಾಗಿತ್ತು. ಅದರಂತೆ ಈ ಬಾರಿಯೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮನೆ ಮನೆ ಭೇಟಿ, ಮ್ಯಾರಾಥಾನ್, ಪಂಜಿನ ಮೆರವಣಿಗೆ, ಆರೋಗ್ಯ ಶಿಬಿರ,  ಮೇಣದ ಬತ್ತಿ ಹಚ್ಚುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ವಿಶೇಷವಾಗಿ ಯುವ ಮತದಾರರು ವಿಶೇಷ ಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಸಕ್ಷಮ್ ಆ್ಯಪ್ ಮೂಲಕ ವಾಹನದ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಮತದಾನ ಕುರಿತು ಜಾಗೃತಿ ಮೂಡಿಸಲು ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕ ಸಹಾಯಕ ಚುನಾವಣಾಧಿಕಾರಿಗಳಾದ ರೇಷ್ಮಾ ಹಾನಗಲ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ನಿಂಗಪ್ಪ ಎಸ್ ಮಸಳಿ,  ತಹಶೀಲ್ದಾರರಾದ ರವಿ, ತಾ.ಪಂ. ಸಹಾಯಕ ನಿರ್ದೇಶಕರಾದ ನಿಂಗನಗೌಡ ವಿ. ಹೆಚ್ ಹಾಗೂ  ತಾಲೂಕು ಮಟ್ಟದ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ಫ್ಲೆöÊಯಿಂಗ್ ಸ್ಕಾ÷್ವಡ್, ಬಿಎಲ್‌ಒರವರು, ಎಲ್ಲ ಗ್ರಾಮ ಪಂಚಾಯತಿ ಪಿಡಿಒರವರು, ಗ್ರಾ.ಪಂ ಸಿಬ್ಬಂದಿ, ಯುವ ಮತದಾರರು ಸಾರ್ವಜನಿಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: