ಬಿಜೆಪಿಯಿಂದ ದೇಶದ ಅಭಿವೃದ್ಧಿ ಅಸಾಧ್ಯ : ಶಾಸಕ  ಕೆ. ರಾಘವೇಂದ್ರ ಹಿಟ್ನಾಳ

Get real time updates directly on you device, subscribe now.

 ಕೈ ಅಭ್ಯರ್ಥಿ ಪರ ವಿವಿಧ ಗ್ರಾಮದಲ್ಲಿ ಭರ್ಜರಿ ಪ್ರಚಾರ

– ನಿರುದ್ಯೋಗದಲ್ಲಿ ಭಾರತ ವಿಶ್ವದಲ್ಲೇ ಮೊದಲು  – ಬಿಜೆಪಿ ವಿರುದ್ಧ ಕೈ ಶಾಸಕ ವಾಗ್ದಾಳಿ

 

ಕೊಪ್ಪಳ:  06 ಕಳೆದ ಹತ್ತು ವರ್ಷ ದೇಶದಲ್ಲಿ ಆಡಳಿತ ನಡೆಸುತ್ತಿರುವ ಎನ್ ಡಿಎ ಸರ್ಕಾರದಿಂದ ದೇಶದ ಅಭಿವೃದ್ಧಿ ಅಸಾಧ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಿ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು. ಕೊಪ್ಪಳ ಲೋಕಸಭಾ ಚುನಾವಣೆ ಪ್ರಯುಕ್ತ ತಾಲೂಕಿನ ಕವಲೂರು, ಅಳವಂಡಿ, ಹಟ್ಟಿ, ಬೋಚನಹಳ್ಳಿ, ಮತ್ತೂರು, ಬೆಟಗೇರಿ, ಕಾತರಕಿ-ಗುಡ್ಲಾನೂರು ಮತ್ತು ಬಿಸರಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಮತಯಾಚಿಸಿ, ಅವರು ಮಾತನಾಡಿದರು.

 

ಈ‌ ಬಾರಿಯ ಚುನಾವಣೆ ದೇಶದ ಭವಿಷ್ಯ ಬದಲಾಯಿಸುವ ಮಹತ್ತರ ಚುನಾವಣೆಯಾಗಿದೆ. ದೇಶದ ಜನರಿಗೆ ಅನೇಕ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದರೂ ಯಾವುದೇ ಆಶ್ವಾಸನೆ ನೀಡಿದೇ ಜನತೆಗೆ ಅನ್ಯಾಯ ಮಾಡಿದೆ. ಧರ್ಮ, ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ. ದೇವಸ್ಥಾನ ಕಟ್ಟಿದರೇ ಬಡಜನರ ಬವಣೆ ನೀಗಲ್ಲ, ಅಗತ್ಯ ಮೂಲ ಸೌಕರ್ಯ ಒದಗಿಸಿದಾಗ ಮಾತ್ರ ಅವರು ಮುನ್ನಲೇಗೆ ಬರಲು ಸಾಧ್ಯ. ಇದನ್ನು ಬಿಜೆಪಿಯವರು ಮನಗಾಣಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಯುವಜನತೆಗೆ ವಾಗ್ದಾನ ಮಾಡಿದ ಮೋದಿಯವರೇ ಕಳೆದ ಹತ್ತು ವರ್ಷದಲ್ಲಿ ಎಷ್ಟು ಕೋಟಿ ಜನರಿಗೆ ಉದ್ಯೋಗ ನೀಡಿದ್ದೀರಿ, ಇಡೀ ವಿಶ್ವದಲ್ಲೇ ಭಾರತ

ನಿರುದ್ಯೋಗ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೇ ಇದೇನಾ ನಿಮ್ಮ ಅಭಿವೃದ್ಧಿ. ಇನ್ಮುಂದೆ ನಿಮ್ಮ ನಕಲಿ ಆಶ್ವಾಸನೆಯನ್ನು ದೇಶದ ಜನ ಕೇಳುವ ಸ್ಥಿತಿಯಲ್ಲಿ ಇಲ್ಲ. ಇದೇ ನಿಮ್ಮ ಕೊನೆ ಚುನಾವಣೆಯಾಗಲಿದೆ ಎಂದು ಗುಡುಗಿದರು.

 

ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ. ನೀವು ತೆರಿಗೆ ಕಟ್ಟಿದ ಹಣವನ್ನೇ ಪುನಃ ನಿಮ್ಮ ಮನೆ ಬಾಗಿಲಿಗೆ ಯೋಜನೆಗಳ ಮೂಲಕ ತಲುಪಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಕೇಂದ್ರದಲ್ಲೂ ಸಹ ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಕೇಂದ್ರದಲ್ಲಿ ಮತ್ತೇ ನಿಮ್ಮ ಆಶೀರ್ವಾದದಿಂದ ಅಧಿಕಾರಕ್ಕೆ ಬಂದರೇ ಎಲ್ಲ ಗ್ಯಾರಂಟಿ ಗಳನ್ನು ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.

 

12ನೇ ಶತಮಾನದ ಬಸವಣ್ಣನವರ ಪರಿಕಲ್ಪನೆಯಂತೆ ಕಾಯಕ ಮತ್ತು ದಾಸೋಹದ ಮೂಲಕ ಬಡಜನರ ಅಸಿವು ನೀಗಿಸಿದ್ದರು, ಅದರಂತೆ ಕಾಂಗ್ರೆಸ್ ಸರ್ಕಾರ ಕೂಡ ಕಾಯಕದ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸರ್ಕಾರದ ಸೌಲಭ್ಯ ತಲುಪಿಸುವ ಕಾರ್ಯ ಮಾಡುತ್ತಿದೆ. ಸುಳ್ಳು ಮತ್ತು ಸತ್ಯದ ಆಧಾರದ ಮೇಲೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಸತ್ಯದ ಪರ ಇರುವ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!