ಭದ್ರತಾ ಕರ್ತವ್ಯ ನಿಯೋಜಿತ ಶಸ್ತ್ರಾಸ್ತ್ರ ಲೈಸೆನ್ಸ್ ದಾರರಿಗೆ ಠೇವಣಿಯಿಂದ ವಿನಾಯಿತಿ ನೀಡಿ ಜಿಲ್ಲಾಧಿಕಾರಿಗಳ ಆದೇಶ
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ತ ಮಾರ್ಚ್ 16 ರಿಂದ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ಸರ್ಕಾರದಿಂದ ಪರವಾನಿಗೆ ಪಡೆದು ಬ್ಯಾಂಕ್‌ಗಳ ಭದ್ರತೆ, ಎ.ಟಿ.ಎಂ ಹಣ ಸಾಗಾಣಿಕೆ ವಾಹನದ ಭದ್ರತಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಹಾಗೂ ವಿವಿಧ ಭದ್ರತಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ 27 ಲೈಸೆನ್ಸ್ದಾರರಿಗೆ ಠೇವಣಿಯಿಂದ ವಿನಾಯಿತಿ ನೀಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಲಿನ್ ಅತುಲ್ ಅವರು ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯ ಸಿ.ಎಂ.ಎಸ್ ಕಂಪನಿ, ಅಳವಂಡಿ ಠಾಣೆ ವ್ಯಾಪ್ತಿಯ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್, ಬಾಗಲಕೋಟ್, ಕೆನರಾ ಬ್ಯಾಂಕ್, ಕೊಪ್ಪಳ ನಗರ ಠಾಣಾ ವ್ಯಾಪ್ತಿಯ ಎಸ್.ಬಿ.ಎಚ್. ಬ್ಯಾಂಕ್, ಜವಾಹರ್ ರೋಡ್, ಸಿ.ಎಂ.ಎಸ್ ಕಂಪನಿ, ಸೆಕ್ಯೂರಿ ವ್ಯಾಲ್ಯೂ ಕಂಪನಿ, ಸಿಸ್ಕೋ ಕಂಪನಿ, ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್, ಹನುಮಸಾಗರ ಠಾಣಾ ವ್ಯಾಪ್ತಿಯ ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್, ಕೆನರಾ ಬ್ಯಾಂಕ್, ಯಲಬುರ್ಗಾ ಠಾಣಾ ವ್ಯಾಪ್ತಿಯ ಯಲಬುರ್ಗಾ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್, ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಗಂಗಾವತಿ ನಗರ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಎಸ್.ಬಿ.ಐ, ಸಿ.ಎಂ.ಎಸ್ ಕಂಪನಿ, ಗಂಗಾವತಿ ಗ್ರಾಮೀಣ ಠಾಣೆಯ ಸೆಕ್ಯೂರ್ ವ್ಯಾಲ್ಯೂ ಕಂಪನಿ, ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯೂನಿಯನ್ ಬ್ಯಾಂಕ್, ಸಿಸ್ಕೋ ಕಂಪನಿ ಸೇರಿದಂತೆ ಒಟ್ಟು 27 ಲೈಸೆನ್ಸ್ದಾರರಿಗೆ ಭದ್ರತಾ ಕರ್ತವ್ಯದ ಹಿತದೃಷ್ಠಿಯಿಂದ ಠೇವಣಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
Comments are closed.